COMMERCIAL GAS CYLINDER PRICE HIKE: ವರ್ಷಾಂತ್ಯದ ಕೊನೆಯ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್ : ಎಲ್ ಪಿ ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21 ರೂಪಾಯಿ ಏರಿಕೆ

ನವದೆಹಲಿ: 2023ರ ವರ್ಷಾಂತ್ಯ ಕೊನೆಯ ತಿಂಗಳ ಮೊದಲ ದಿನವೇ ಕೇಂದ್ರ ಸರ್ಕಾರ ಎಲ್ ಪಿಜಿ ಬಳಕೆದಾರರಿಗೆ ಶಾಕ್ ನೀಡಿದ್ದು, ವಾಣಿಜ್ಯ ಗ್ಯಾಸ್ ಸಿಲಿಂಡರ್ ವೊಂದಕ್ಕೆ 21 ರೂಪಾಯಿ ಏರಿಕೆ ಮಾಡಿದೆ.
ಸಾರ್ವಜನಿಕ ವಲಯದ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿದ್ದು, ಈ ಏರಿಕೆ ಇಂದಿನಿಂದ ಜಾರಿಗೆ ಬರಲಿದೆ. ಆದರೆ, ಮನೆ ಬಳಕೆ ಗ್ಯಾಸ್ ಸಿಲಿಂಡರ್ ನಲ್ಲಿ ಯಾವುದೇ ರೀತಿಯ ಏರಿಕೆ ಕಂಡಿಲ್ಲ, ಯಥಾಸ್ಥಿತಿ ಕಾಪಾಡಲಾಗಿದೆ.

ಇಂದಿನ ಬೆಲೆ ಏರಿಕೆಯ ನಂತರ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಚಿಲ್ಲರೆ ಮಾರಾಟದ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1796.50 ರೂಪಾಯಿಯಾಗಿದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ 1749 ರೂಪಾಯಿ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1904 ರೂಪಾಯಿಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ 1908 ರೂಪಾಯಿ ಮತ್ತು ಚೆನ್ನೈನಲ್ಲಿ ಸಿಲಿಂಡರ್ ವೊಂದಕ್ಕೆ 1968.50 ರೂಪಾಯಿ ಏರಿಕೆ ಕಂಡಿದೆ.

More News