ಬೆಂಗಳೂರು : ಶಾಲೆಗಳಿಗೆ ಇ ಮೇಲ್ ಮೂಲಕ ಕಳುಹಿಸಿರುವ ಟೈಪ್ ಮಾಡಿದ್ದ ಮಾಹಿತಿ ನೋಡಿದರೆ ಇದೊಂದು ಹೈ ಲೆವೆಲ್ ಟೆರರಸ್ಟ್ ತರ ಕಾಣುತ್ತೆ, ಅಲ್ಲಾಹ್ ಗೆ ತೊಂದರೆ ಮಾಡುತ್ತಿದ್ದೀರಿ ಎಂದು ಬರೆಯಲಾಗಿದೆ, ಇವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿ ಗಲಾಟೆ ಮಾಡಿದ್ದೀರಿ ಇಂತಹದ್ದೆಲ್ಲಾ ಬರೆಯಲಾಗಿದೆ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಬಂದು ತಪಾಸಣೆ ನಡೆಸಿದೆ. ಇಲ್ಲಿವರೆಗೇ ಏನೂ ಸಿಕ್ಕಿಲ್ಲ, ಸದ್ಯ ಹದಿನೈದು ಶಾಲೆಗೆ ಮೇಲ್ ಬಂದಿದೆ, ಜನರಲ್ಲಿ ಆತಂಕ ಶುರುವಾಗಿದೆ. ಏನೇ ಆದರೂ ಮಕ್ಕಳು ಮಕ್ಕಳೇ, ಹೀಗಾಗಿ ನಾನು ಕೂಡ ಭೇಟಿ ಮಾಡಿದ್ದೇನೆ ಎಂದರು.




