OPERATION KAMALA AND OPERATION BRS: ?: ತೆಲಂಗಾಣದಲ್ಲಿ ನಮ್ಮ ಶಾಸಕರ ಆಪರೇಷನ್ ಆಗುವ ಸಾಧ್ಯತೆ: ಸಂಜೆಯೊಳಗೆ ತೆಲಂಗಾಣಕ್ಕೆ ತೆರಳಲು ಎಐಸಿಸಿ ಸೂಚನೆ: ಸಚಿವ ನಾಗೇಂದ್ರ

ಬಳ್ಳಾರಿ : ತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್ ಎಸ್ ಪಕ್ಷದಿಂದ ಕಾಂಗ್ರೆಸ್ ಗೆ ಭಯ ಇದೆ. ಆದ್ದರಿಂದ ನಮ್ಮ ಅನೇಕ ಮುಖಂಡರನ್ನು ಇಂದು ಸಂಜೆ ಒಳಗೆ ತೆಲಂಗಾಣಕ್ಕೆ ಹೋಗಲು ಎಐಸಿಸಿ ಸೂಚಿಸಿದೆ ಎಂದು ಸಚಿವ ನಾಗೇಂದ್ರ ತಿಳಿಸಿದರು.

ಬಳ್ಳಾರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿವೆ. ಆದ್ದರಿಂದ ತೆಲಂಗಾಣ ಚುನಾವಣೆಯಲ್ಲಿ ಭಾಗಿಯಾದ ಎಲ್ಲ ಶಾಸಕರಿಗೆ ತುರ್ತು ಕರೆ ಬಂದಿದೆ ಎಂದು ತಿಳಿಸಿದರು.
ಸಂಜೆ ಒಳಗೆ ತೆಲಂಗಾಣ ತಲುಪುವಂತೆ ಎಐಸಿಸಿ ಸೂಚನೆ ನೀಡಿದೆ ಎಂದು ತಿಳಿಸಿದ ಸಚಿವರು, ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ, ಆದರೆ ಬಿಜೆಪಿ ದೇಶದಲ್ಲಿ ಒಂದು ಕೆಟ್ಟ ಸಂಪ್ರದಾಯದಕ್ಕೆ ನಾಂದಿ ಹಾಡಿದೆ. ನಮ್ಮ ಶಾಸಕರಿಗೆ ಬಿಜೆಪಿ ಮತ್ತು ಬಿ ಆರ್ ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯ ನಮಗಿದೆ ಎಂದು ಹೇಳಿದರು.

ನಮ್ಮ ಶಾಸಕರಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ, ಹೀಗಾಗಿ ನಮ್ಮ ಶಾಸಕರ ರಕ್ಷಣೆಗೆ ನಾವು ಹೋಗುತ್ತಿದ್ದೇವೆ, ಬಿಜೆಪಿ ಗೆದ್ದವರಿಗೆ ಗಾಳ ಹಾಕುವ ಪ್ಲ್ಯಾನ್ ಮಾಡಿದೆ, ಅದಕ್ಕೆ ನಮ್ಮ ರಾಜ್ಯವೇ ಉದಾಹರಣೆ. ರಾಜ್ಯದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು, ಹಿಂಬದಿಯಿಂದ ಸರ್ಕಾರ ರಚನೆ ಮಾಡಿದ್ದರು. ಹೀಗಾಗಿ ತೆಲಂಗಾಣದಲ್ಲಿ ಮತ್ತೆ ಆಪರೇಷನ್, ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇರುವುದರಿಂದ ನಾವೆಲ್ಲರೂ ತೆರಳುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ತೆಲಂಗಾಣದಲ್ಲಿ ನಾವು ಆಪರೇಷನ್ ಮಾಡಲ್ಲ, ನಮ್ಮ ತತ್ವ ಸಿದ್ದಾಂತ ನಂಬಿ ಬೇರೆ ಪಕ್ಷದವರು ಬಂದರೆ ಬರಲಿ. ಸಚಿವ ಬಿ ನಾಗೇಂದ್ರ ಅಭಿಪ್ರಾಯಪಟ್ಟರು.

More News