AMIR KHAN RESCUED: ಮಿಚಾಂಗ್ ಚಂಡಮಾರುತ: ನಟ ವಿಷ್ಣು ವಿಶಾಲ್‌ ಅವರ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರ ರಕ್ಷಣೆ

ಚೆನ್ನೈ : ಮಿಚಾಂಗ್ ಚಂಡಮಾರುತದ ಎಫೆಕ್ಟ್ ನೆರೆಯ ತಮಿಳುನಾಡಿನಲ್ಲಿ ಜೋರಾಗಿ ಆಗಿದೆ. ಇದುವರೆಗೂ ಸುಮಾರು 17 ಜನರು ಮೃತಪಟ್ಟಿದ್ದಾರೆ ಎಂದು ತಿಳಿಬಂದಿದೆ. ರಸ್ತೆಗಳು, ಏರ್ ಪೋರ್ಟ್ ಸೇರಿದಂತೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

ಇದರ ನಡುವೆ ಚೆನ್ನೈನ ಕರಪಾಕ್ಕಂ ನಲ್ಲಿರುವ ತಮಿಳು ನಟ ವಿಷ್ಣು ವಿಶಾಲ್ ಅವರ ಮನೆ ಜಲಾವೃತಗೊಂಡಿದೆ. ಅವರ ಮನೆಯಲ್ಲಿ ತಂಗಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಸಕಾಲದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಹೋಮ್ ಗಾರ್ಡ್ಸ್, ಪೊಲೀಸರು ಮತ್ತು ಸ್ಥಳೀಯರ ನೆರೆವಿನೊಂದಿಗೆ ಅವರನ್ನು ರಕ್ಷಿಸಿ ಕಳುಹಿಸಲಾಗಿದೆ.

ನಟ ವಿಷ್ಣು ವಿಶಾಲ್ ಮತ್ತು ಅಮೀರ್ ಖಾನ್ ಮತ್ತು ಇತರೆ ಪ್ರವಾಹ ಸಂತ್ರಸ್ಥರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ದೋಣಿಯಲ್ಲಿ ಕರೆದುಕೊಂಡು ಹೋಗುವ ದೃಶ್ಯಗಳು ಸಾಕಷ್ಟು ವೈರಲ್ ಆಗಿವೆ.
ಈ ಫೋಟೋಗಳನ್ನು ವಿಷ್ಣು ವಿಶಾಲ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರವಾಹದಲ್ಲಿ ಸಿಲುಕಿರುವ ನಮ್ಮಂತಹ ನೂರಾರು ಜನರಿಗೆ ಸಹಾಯ ಮಾಡುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳನ್ನು ಹೇಳಿದ್ದಾರೆ.

More News