ಬೆಳಗಾವಿ: ಬಸ್ ನಲ್ಲಿ ಇಂತಹ ಜಾತಿಯವರೇ ಹೋಗ್ತಾರಾ?
2 ಸಾವಿರ ರೂ. ಕೊಡ್ತೀವಿ.. ಇಂತಹ ಜಾತಿಯವರಿಗೇ ಅಂತಾನೆ ಕೊಡ್ತೀವಾ? ಐದು ಯೋಜನೆ ಒಂದೇ ಜಾತಿಗೆ ನೀಡಲಾಗಿದ್ಯಾ..? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಹಾಕಿದರು.
ಮುಸ್ಲಿಂ ಸಮುದಾಯದ ಏಳಿಗೆಗೆ ಶ್ರಮಿಸುವೆ ಎಂಬ ಸಿದ್ದರಾಮಯ್ಯ ಹೇಳಿಕೆ ವೈರಲ್ ಆದ ವಿಚಾರದ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಮೇಲೆ ವಿಪಕ್ಷ ಗಳು ಸುಮ್ಮನೆ ಟೀಕೆ ಮಾಡ್ತವೆ. ಶಕ್ತಿ ಯೋಜನೆ ಮಾಡಿದ್ದೇವೆ. ಇಂತಹ ಧರ್ಮಕ್ಕೆ ಅಂತಾ ಮಾಡಿದ್ದೀವಾ..??೨೦೦೦ ಮನೆ ಯಜಮಾನಿಗೆ ಕೊಡ್ತೀವಿ, ಇಂತಹ ಧರ್ಮವರಿಗೆ ಕೊಡ್ತೀವಿ ಅಂತಾ ಇದೆಯಾ…? ಎಂದು ಪ್ರಶ್ನಿಸಿದರು.

ನಾವು ೫ ಗ್ಯಾರಂಟಿ ಗಳನ್ನು ಎಲ್ಲ ಸಮಾಜದ ಬಡವರಿಗಾಗಿ ಮಾಡಿದ್ದೇವೆ. ಯಾವುದೇ ಜಾತಿಯಲ್ಲಿರುವ ಬಡವರಿಗೆ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ಕೊಡಲು ಸರ್ಕಾರ ಪ್ರಾಮಾಣಿಕ ಹೆಜ್ಜೆ ಇಡ್ತಿದೆ ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡ್ತಿದೆ. ಅಂಬೇಡ್ಕರ್ ವಿಚಾರಗಳನ್ನು ಜಾರಿ ಮಾಡುವ ಪ್ರಯತ್ನ ಮಾಡ್ತಿದ್ದೇವೆ ಎಂದರು.
ಇದೇ ವೇಳೆ 67ನೇ ಪರಿನಿರ್ವಾಣ ದಿನದ ಬಗ್ಗೆ ಮಾತನಾಡಿದ ಅವರು, ಪರಿನಿರ್ವಾಣ ದಿನವನ್ನ ಇಡೀ ದೇಶ ಗೌರವದಿಂದ ಆಚರಿಸುತ್ತಿದೆ. ಜನರಿಗೆ ಜಾಗೃತಿಗೊಳಿಸುವ, ಸಂವಿಧಾನದ ದ್ಯೇಯೋದ್ಧೇಶಗಳನ್ನ ಈಡೇರಿಸಬೇಕಿದೆ. ಸಂವಿಧಾನದ ಕರ್ತೃ ಅಂಬೇಡ್ಕರ್. ಭಾರತದಲ್ಲೇ ಐತಿಹಾಸಿಕ ಭಾಷಣವನ್ನ ಅಂಬೇಡ್ಕರ್ ಮಾಡಿದ್ರು..ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಸರಿಪಡಿಸಬೇಕು ಅಂದಿದ್ರು.ಸಾಮಾಜಿಕ ತಳಹದಿಯಲ್ಲಿ ಈ ದೇಶ ನಿಲ್ಲಬೇಕಿದೆ. ಇದಕ್ಕೆ ನಮ್ಮ ಸರ್ಕಾರ ಕೂಡ ಅಂಬೇಡ್ಕರ್ ಅವರ ಕನಸಿನಂತೆ ಜಾತಿ ವ್ಯವಸ್ಥೆ ಹೋಗಬೇಕು. ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕು ಎಂಬ ಚಿಂತನೆಯಲ್ಲಿ ಕೆಲಸ ಮಾಡ್ತಿದೆ ಎಂದರು.
ಹಿಂದೆ ಇದ್ದ ಸಿಎಂರಂತೆ ಸಿದ್ದರಾಮಯ್ಯ ಈಗಿಲ್ಲ ಎಂಬ ಅಶೋಕ್ ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,
ಹಿಂದೆ ನಾನು ಒಳ್ಳೆ ಸಿಎಂ ಅಂತಾ ಒಪ್ಕೊಂಡಿದಾರಾಲ್ಲಾ..?
ಅಶೋಕ್ ಒಪ್ಕೊಂಡಿದಾರಲ್ಲಾ ಎಂದು ನಕ್ಕು ಹೊರಟರು.




