Defamation Case Against Manikanta Rathod: ಮಣಿಕಂಠ ರಾಥೋಡ್ ಹಾಗೂ ಬಿಜೆಪಿ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ಹೊಡುತ್ತೇನೆ: ಪ್ರಿಯಾಂಕಾ ಖರ್ಗೆ ಗರಂ

ಬೆಳಗಾವಿ: ಮಣಿಕಂಠ ರಾಥೋಡ್ ಎಂಬಾತ ಈ ಮೊದಲು ನನ್ನ ಶೂಟ್ ಮಾಡ್ತೀನಿ ಎಂದಿದ್ದ..ಖರ್ಗೆ ಕುಟುಂಬ ಫಿನಿಶ್ ಮಾಡ್ತೇವೆ ಎಂದಿದ್ದ..ಆಗ ಎಲ್ಲಿ ಹೋಗಿತ್ತು ನಿಮ್ಮ ಮನುಷ್ಯತ್ವ.? ಹೇಳಿಕೆ ಕೊಡುವಾಗ ಸರಿಯಾಗಿ ಮಾತನಾಡಿ ಇಲ್ಲವಾದರೆ ಕೋರ್ಟ್ ಗೆ ಹೋಗಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಎಚ್ಚರಿಕೆ ನೀಡಿದರು.

ಬೆಳಗಾವಿಯಲ್ಲಿ ಗೋಷ್ಠಿ ಕರೆದು ಮಾತನಾಡಿದ ಸಚಿವರು,ಇಲ್ಲಿಯವರೆಗೆ ನಾನು ತಾಳಿಕೊಂಡಿದ್ದೇನೆ. ನಮ್ಮ ತಾಳ್ಮೆಯನ್ನ ಪರೀಕ್ಷಿಸಬೇಡಿ.ನಾವು ಸಮಯ ವ್ಯರ್ಥ ಹಾಳು ಮಾಡುವುದಿಲ್ಲ.. ಅಂಬೇಡ್ಕರ್ ಹೋರಾಟ ಕಿಚ್ಚು ನನ್ನಲ್ಲಿದೆ..ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡ್ತೀರ..? ಇನ್ಮೇಲೆ ಇಂತಹ ಡ್ರಾಮಾಗಳನ್ನ ನಿಲ್ಲಿಸಿ ಎಂದು ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ಗರಂ ಆದರು.

ಇವತ್ತು ಪೊಲೀಸ್ ರಿಪೋರ್ಟ್ ಕೊಡ್ತಾರೆ..ಚಿತ್ತಾಪುರದಲ್ಲಿ ಅವತ್ತು ಮಣಿಕಂಠ ಇರಲಿಲ್ಲ. ಅವ್ರು ಇದದ್ದು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ನಲ್ಲಿ ಎಂದು. ಗುರುಮಿಟ್ಕಲ್ ನಲ್ಲಿ ಎಲ್ಲೋ ಕುಡಿದುಕೊಂಡು ಬಿದ್ದಿರ್ತಾನೆ. ಗುರುಮಿಟ್ಕಲ್ ನಿಂದ ಕಲಬುರಗಿ ಗೆ ಬರುವಾಗ‌.. ಚಪೇಟ್ಲದಲ್ಲಿ ಮರಕ್ಕೆ ಗುದಿದ್ದಾರೆ. Innova ಕ್ರಿಸ್ಟ್ ಕಾರಿನಲ್ಲಿ ಬರುವಾಗ ಅಪಘಾತವಾಗಿದೆ. ಎಂದು ಅಪಘಾತವಾಗಿರುವ ಫೋಟೋ ಕೂಡ ಪ್ರದರ್ಶನ ಮಾಡಿದರು. ಮುಂದುವರೆದು ಮಾತನಾಡಿದ ಅವ್ರು, ಅಪಘಾತವಾಗಿರೋದನ್ನ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ನಾಟಕ ಮಾಡಿದ್ದಾರೆ.. ಅಪಘಾತವಾಗಿರುವ ಕಾರನ್ನ ಹೈದರಾಬಾದ್ ಗೆ ಕಳಿಸುತ್ತಾರೆ. ಹೈದರಾಬಾದ್ ನ ವರ್ಕ್ ಶಾಪ್ ನಲ್ಲಿರುವ ಕಾರಿನ ಫೋಟೋವನ್ನೂ ತೋರಿಸಿ, ಇದೆಲ್ಲ ನಾನು ಹೇಳುತ್ತಿಲ್ಲ.. ಇದು forensic report. ಅವರು ಹೇಳಿದ್ದ ಕಾರಿನಲ್ಲಿ ಒಂದೇ ಒಂದು ತೊಟ್ಟು ರಕ್ತ ಬಿದ್ದಿಲ್ಲ. ಅವರೇ ಕಲ್ಲಿ ನಲ್ಲಿ ಹೊಡೆದುಕೊಂಡಿದ್ದಾರೆ ಎಂದು ದೂರಿದರು.

ಚಿತ್ತಾಪುರದಲ್ಲಿ ಮಣಿಕಠ ರಾಥೋಡ್ ಒಂದು ಕಂಪ್ಲೆಂಟ್ ಮಾಡ್ತಾನೆ.. ಅವನು ಬಿಜೆಪಿ ಅಭ್ಯರ್ಥಿ ಚಿತ್ತಾಪುರದಿಂದ ಮಾಲಗತ್ತಿಗೆ ರಾತ್ರಿ 1.30 ಗೆ ಹೋಗುವ ವೇಳೆ ಹಲ್ಲೆ ಮಾಡಿದ್ರು, ನನ್ನ ಜೊತೆ ಶ್ರೀಕಾಂತ್ ಸುಲೇಗಾವ್, ಮಹೇಶ್ ಗೌಳಿ ಇದ್ರು.. ಆಲಟ್ರೋಜ್ ಕಾರಿನ ಮೇಲೆ 8 ರಿಂದ 10 ಜನ ಹಲ್ಲೆ ಮಾಡ್ತಾರೆ ಎಂದು ದೂರು ಕೊಟ್ಟಿದ್ದ…
ಅಧಿಕಾರಿಗಳು ಮತ್ತು ರಾಜಕೀಯ ವಿರೋಧಿಗಳು ಹಲ್ಲೆ ಮಾಡ್ತಾರೆ ಎಂದು ದೂರು ಕೊಟ್ಟಿದ್ದರು. ರಾತೋಡ್ ಮೇಲೆ ಸಾಕಷ್ಟು ಆರೋಪಗಳಿದ್ವು. ಅಕ್ಕಿ ಕಳ್ಳತನದಲ್ಲಿ 22 ಕೇಸ್ ಇದೆ, ಹಾಲಿನ ಪೌಡರ್ ಕಳ್ಳತನದಲ್ಲಿ೧ ಕೇಸ್ ಇತ್ತು…
ಮೂರು ಪ್ರಕರಣಗಳಲ್ಲಿ ಈಗಾಗಲೇ ಆರೋಪ ಸಾಬೀತಾಗಿದೆ. ಅದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿರೋದು.. ಇಷ್ಟೆಲ್ಲ ಇವನ ಮೇಲೆ ಕೇಸ್ ಇದ್ರೂ ಬಿಜೆಪಿ ಇವನಿಗೆ ಟಿಕೆಟ್ ನೀಡಿತ್ತು ಎಂದು ವ್ಯಂಗ್ಯ ಮಾಡಿದ್ರು

ಮುಂದುವರೆದು ಮಾತನಾಡಿದ ಅವ್ರು, ಇವನು ಕಂಪ್ಲೆಂಟ್ ಕೊಟ್ಟಾಗ ಇಡೀ ಬಿಜೆಪಿ ಇವನ ಹಿಂದೆ ಇತ್ತು.. ಕಲಬುರಗಿಯಲ್ಲಿ ಯಾರು ಬಿಜೆಪಿ ಮುಖಂಡರು ಉಳಿದಿಲ್ಲ ಅಲ್ಲಿಗೆ ಎನ್ ರವಿ ಕುಮಾರ್ ಒಬ್ಬರು ಮಾತ್ರ ಇದ್ದಾರೆ..ಅವರು ಸಹ ಅವತ್ತು ಅವನಿಗೆ ಏನಾದರೂ ಆದ್ರೆ ಪ್ರಿಯಾಂಕಾ ಖರ್ಗೆ ಹೊಣೆ ಅಂತೆಲ್ಲ ಹೇಳಿದ್ರು…
ಬರ ವೀಕ್ಷಣೆಗೆ ಬಂದ ವಿಪಕ್ಷ ನಾಯಕ ಅಶೋಕ್ ಸಹ ಮಾತನಾಡ್ತಾರೆ ಖರ್ಗೆಯವರನ್ನ ಸಂಪುಟದಿಂದ ವಜಾ ಮಾಡಬೇಕು ಅಂತಾರೆ..ಯಂಗ್ ಅಂಡ್ ಡೈನಾಮಿಕ್ ವಿಜಯೇಂದ್ರ ಪ್ರಿಯಾಂಕಾ ಖರ್ಗೆ ನೇ ಹಲ್ಲೆ ಮಾಡಿದ್ರು ಎಂದು ಹೇಳಿದ್ದಾರೆ. ಅವರು ಮಾಡಿಸಿದ್ದಾರೆ ಅಂತ ಹೇಳುತ್ತಿಲ್ಲ. ಮಾಡಿದ್ದಾರೆ ಅಂತನೇ ಮೈಸೂರಿನಲ್ಲಿ ಹೇಳಿಕೆ ಕೊಡ್ತಾರೆ…ಅವರು ಹೇಗೆ 33 ಕೇಸ್ ಇರುವ ಮಣಿಕಂಠ ಪರ ಮಾತನಾಡ್ತಾರೆ ಎಂದು ಪ್ರಶ್ನೆ ಹಾಕಿದರು.

“ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಇವತ್ತಲ್ಲ ನಾಳೆ ಸ್ಪೋಟಗೊಂಡು ನಾಶವಾಗುತ್ತೆ”

ಕಳೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ನಾಶವಾಗಿದೆ‌.. ಕೇಂದ್ರ ಬಿಜೆಪಿಯವರು ರಾಜ್ಯ ಬಿಜೆಪಿಯವರನ್ನ ಹೇಗೆ ಟ್ರೀಟ್ ಮಾಡ್ತಿದ್ದಾರೆ ನೋಡಿದ್ದೇವೆ. 6 ತಿಂಗಳು ಬೇಕಾಯ್ತು ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕ ಮಾಡಲು. ಈಗಲೂ ಪರಿಷತ್ತ್ ನಲ್ಲಿ ವಿಪಕ್ಷ ನಾಯಕರೇ ಇಲ್ಲ..ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಇವತ್ತಲ್ಲ ನಾಳೆ ಸ್ಪೋಟಗೊಂಡು ನಾಶವಾಗುತ್ತೆ. ಬಿಜೆಪಿಗೆ ಏನು ಸಿಗ್ತಿಲ್ಲ ಸರ್ಕಾರದ ವಿರುದ್ಧ ಮಾತನಾಡಲು. ಹೀಗಾಗಿಯೇ ಪೆನ್ ಡ್ರೈವ್, ಟ್ರಾನ್ಸಫರ್, ತೆಲಂಗಾಣಕ್ಕೆ ಹಣ ಅದು ಇದು ಅಂದ್ರು ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ ಇಲ್ಲಿಯತನಕ ಎಂದು ದೂರಿದರು.

More News