Suicide Case: ಯುವತಿ ಖಾಸಗಿ ವೀಡಿಯೋ ಸೆರೆ, ಆತ್ಮಹತ್ಯೆ ಕೇಸ್: ಪುಷ್ಪ’ರಾಜ್ ಬಲಗೈ ಬಂಟ ನಟ ಜಗದೀಶ್ ಅರೆಸ್ಟ್

ಒಂದ್ ಸಿನಿಮಾ ಹಿಟ್.. ಕೈತುಂಬಾ ಕಾಸು, ಸಿಕ್ಕ ಸಿಕ್ಕ ಸಿನಿಮಾಗಳ ಆಫರ್.. ಕನಸ್ಸಿನ ಬೆನ್ನೇರಿ ಸವಾರಿ ಮಾಡಲು ಹೊರಡಬೇಕಿದ್ದ ಪುಷ್ಪ’ರಾಜ್ ಬಲಗೈ ಬಂಟ ನಟ ಜಗದೀಶ್, ಮಹಿಳೆಯ ಖಾಸಗಿ ವೀಡಿಯೋ ಸೆರೆ ಹಿಡಿದು ಸಧ್ಯ ಕಂಬಿ ಎಣಿಸುತ್ತಿದ್ದಾರೆ.

‘ಪುಷ್ಪ’ ಸಿನಿಮಾ ಹಿಟ್ ಬಳಿಕ ನಟ ಜಗದೀಶ್ ಗೆ ಸಿನಿಮಾ ಆಫರ್ ಗಳ ಮೇಲೆ ಆಫರ್ ಬಂದಿದೆ. ಪಿಕ್‌ಪಾಕೆಟ್, ವಿರಾಟ ಪರ್ವಂ, ಬುಟ್ಟಬೊಮ್ಮ, ಸತಿ ಗಣಿ ರೆಂಡು ಎಕರಾಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದ್ರ ನಡುವೆ ‘ಪುಷ್ಪ’ ಸೀಕ್ವೆಲ್‌ನಲ್ಲೂ ಕೇಶವ ಪಾತ್ರ ಮುಂದುವರೆದಿದ್ದು, ಮುಂದಿನ ವರ್ಷ ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ನಾನಾಯ್ತು.. ಸಿನಿಮಾ ಆಯ್ತು ಎಂದಿರಬೇಕಿದ್ದ ನಟ, ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಕೇಸ್ ನಡಿ ಜೈಲು ಸೇರಿದ್ದಾನೆ.

ಕಾಕಿನಾಡ ಮೂಲದ ಮಹಿಳೆಯೊಬ್ಬರು ಆರು ವರ್ಷಗಳ ಹಿಂದೆ ವಿವಾಹವಾಗಿ, ಕೆಲ ದಿನಗಳ ನಂತರ ವಿಚ್ಛೇದನ ಪಡೆದು ಹೈದರಾಬಾದ್‌ ನಗರಕ್ಕೆ ಬಂದು ನೆಲೆಸಿದ್ದಾರೆ. ಚಿತ್ರರಂಗದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ, ಸಣ್ಣ ಸಾಕ್ಷ್ಯಚಿತ್ರಗಳನ್ನು ಮಾಡುವಾಗ ಜಗದೀಶ್‌ (31) ಪರಿಚಯವಾಗಿದೆ. ಪರಿಚಯ ಆತ್ಮೀಯವಾಗಿ ಬೆಳೆದ ಬಳಿಕ ಮದುವೆ ಯಾಗಲು ಮಹಿಳೆ ಒತ್ತಾಯಿಸಿದ್ದಾಳೆ. ಈಗಾಗಲೇ ಮದ್ವೆ ಆಗಿದ್ದ ಜಗದೀಶ್, ಮರು ಮದ್ವೆಯಾಗಲು ಒಪ್ಪಿಕೊಂಡಿಲ್ಲ. ಹೀಗಾಗಿ ಜಗದೀಶ್ ನಿಂದ ಮಹಿಳೆ ಅಂತರ ಕಾಯ್ದುಕೊಂಡಿದ್ದಾರೆ.

ಮದುವೆಯಾಗಲೂ ಒಪ್ಪಿಗೆ ಇಲ್ಲ. ಆದ್ರೆ ದೂರಾಗಲೂ ಮನಸ್ಸಿಲ್ಲದ ಜಗದೀಶ್ ಮಹಿಳೆಗೆ ಮತ್ತದೇ ಬಂಧವನ್ನ ಕಂಟಿನ್ಯೂ ಮಾಡುವ ಬಗ್ಗೆ ಒತ್ತಾಯಿಸಿದ್ದಾರೆ. ಇದಕ್ಕೊಪ್ಪದ ಮಹಿಳೆ ಬೇರೆ ಪುರುಷನೊಂದಿಗೆ ಕಮಿಟ್ ಆಗಿದ್ದಾರೆ. ಇದರಿಂದ ಆಕ್ರೋಶಗೊಂಡ ಜಗದೀಶ್ ಬೇರೊಬ್ಬ ಪುರುಷನೊಂದಿಗೆ ಮಹಿಳೆ ಖಾಸಗಿ ಕ್ಷಣ ಕಳೆಯುತ್ತಿದ್ದ ವಿಡಿಯೋ ವನ್ನ ಸೆರೆ ಹಿಡಿದು ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ನನ್ನ ಮಾತು ಕೇಳಿದರೆ ಸುಮ್ಮನಿರುತ್ತೇನೆ. ಇಲ್ಲದಿದ್ರೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬಗ್ಗೆ ಧಮ್ಕಿ ಹಾಕಿದ್ದಾನೆ. ಇದರಿಂದ ಹೆದರಿ ಮಹಿಳೆ ತಮ್ಮ ಫ್ಲ್ಯಾಟ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ಪ್ರಕರಣದ ತನಿಖೆಗೆ ಮುಂದಾದ ಪೊಲೀಸರಿಗೆ ಎಲ್ಲಾ ವಿಚಾರಗಳನ್ನೂ ಮೊಬೈಲ್ ತಿಳಿಸಿದೆ. ಮೊಬೈಲ್ ಗೆ ಕಳಿಸಿದ ವೀಡಿಯೋ, ಮೆಸೇಜ್ ಹಿಡಿದು, ಪರಿಶೀಲನೆ ನಡೆಸಿ, ಜೂನಿಯರ್ ಆರ್ಟಿಸ್ಟ್‌ಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪಂಜಗುಟ್ಟ ಪೊಲೀಸ್‌ ಠಾಣೆಯಲ್ಲಿ ನಟನ ವಿರುದ್ಧ ಐಪಿಸಿ ಸೆಕ್ಷನ್ 354(ಸಿ) ಮತ್ತು 306 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.

More News