ಕೃಷಿಕ ಅಲ್ಲದವನು ಕೂಡ ಕೃಷಿ ಭೂಮಿ ಖರೀದಿಸಬಹುದು ಎಂದು ಘೋಷಿಸಿದ್ದ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿದೇಯಕವನ್ನ ವಾಪಾಸ್ ಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಈ ಮೊದಲು ಕೃಷಿ ಭೂಮಿ ಹೊಂದಿದವರು ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆ ಮೂಲಕ ಕೃಷಿ ಭೂಮಿ ಯನ್ನ ಕೃಷಿಗಷ್ಟೇ ಬಳಸುವ ಯೋಜನೆ ರೂಪಿತವಾಗಿತ್ತು. ಆದ್ರೆ ೨೦೨೨ ರಲ್ಲಿ ಬಂದ ಬಿಜೆಪಿ ಸರ್ಕಾರ, ನೂತನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿದೇಯಕ ಮಂಡಿಸುವ ಮೂಲಕ ಕೃಷಿಕರಲ್ಲದವರೂ ಕೂಡ ಕೃಷಿ ಭೂಮಿ ಪಡೆಯಬಹುದು. ಅಂದರೆ ಯಾರು ಬೇಕಾದರು ಭೂಮಿ ಖರೀದಿಸಬಹುದೆಂದು ತಿಳಿಸಿತು.
ಇದೀಗ ಬಿಜೆಪಿ ಸರ್ಕಾರದ ಅವದಿಯ
ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿದೇಯಕವನ್ನ ವಾಪಾಸ್ ಪಡೆಯಲು ನಿನ್ನೆ ಬೆಳಗಾವಿಯಲ್ಲಿ ತಡ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೆಲವೊಂದು ಹೊಸ ತಿದ್ದುಪಡಿಯೊಂದಿಗೆ ನೂತ ವಿದೇಯಕವನ್ನ ಈ ಬಾರಿಯ ಅದಿವೇಶನದಲ್ಲೇ ಮಂಡಿಸಲು ತೀರ್ಮಾನ ಕ್ಕೆ ಬರಲಾಗಿದೆ.
ಈ ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು, ಕೃಷಿಕರೇತರರು ಕೃಷಿ ಭೂಮಿ ಖರೀದಿಸಲು ಇದ್ದ ಆದಾಯದ ಮಿತಿಯನ್ನು 2 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ವಿಸ್ತರಿಸಿತ್ತು. ಇದೀಗ ಭೂ ಕಂದಾಯ ತಿದ್ದುಪಡಿ ವಿದೇಯಕವನ್ನ ವಾಪಸ್ ಪಡೆದು ಕೆಲವೊಂದು ಮಾರ್ಪಾಡುಗಳೊಂದಿಗೆ ನೂತನ ಕಾಯಿದೆ ಜಾರಿಗೆ ಸರ್ಕಾರ ಮುಂದಾಗಿದೆ.




