ಬೆಳಗಾವಿ : ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ವಿಫಲವಾಗಿವೆ ಎಂಬ ಆರೋಪಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಹೊಂದಾಣಿಕೆ ಹಂತ ಹಂತವಾಗಿ ಆಗುತ್ತಿದೆ. ಆದಷ್ಟು ಬೇಗ ಹೊಂದಾಣಿಕೆ ಆಗುತ್ತೆ ಎಂದು ತಮ್ಮ ಪಾರ್ಟಿಯವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಪಕ್ಷ ನಾಯಕರ ವಿರುದ್ಧ ಶಾಸಕರು ಅಸಮಾಧಾನ ಹೊಂದಿದ್ದಾರೆ ಎಂಬ ವಿಚಾರವಾಗಿ ಈ ಮೇಲಿನಂತೆ ಅವರು ಹೇಳಿದರು. ವಿಪಕ್ಷ ನಾಯಕರು ಹೇಳಿದ್ದಂತೆ ಶಾಸಕರು ಕೇಳಬೇಕು, ಸಭಾತ್ಯಾಗ, ಧರಣಿ ಮಾಡುವ ಬಗ್ಗೆ ವಿಪಕ್ಷ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಸಭಾತ್ಯಾಗ ಮಾಡಿ ಎಂದು ಹೇಳಿದ್ದರು ಆದ್ದರಿಂದ ಸಭಾತ್ಯಾಗ ಮಾಡಿದ್ದೇವೆ, ಹೊಂದಾಣಿಕೆ ರಾಜಕೀಯ ಬಗ್ಗೆ ಹಿಂದೆಯೂ ಹೇಳಿದ್ದೇನೆ. ಮತ್ತೆ ಹೇಳುವ ಅವಶ್ಯಕತೆ ಇಲ್ಲ, ಹೊಂದಾಣಿಕೆ ರಾಜಕೀಯ ಇಲ್ಲ ಎಂದು ನಾನು ನಿರಾಕರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾನನಷ್ಟ ಮೊಕದ್ದಮೆ ಹೂಡಲಾಗುವುದು
55 ವರ್ಷದ ಹಿಂದೆ ನಮ್ಮ ತಂದೆ ಕೊಟ್ಟ ಪ್ರಾಪರ್ಟಿ, ಅದು ಮುನ್ಸಿಪಾಲಿಟಿ ಲೀಸ್ ಪ್ರಾಪರ್ಟಿ. ಅಲ್ಲಿ ವ್ಯವಹಾರ ನಡೆಸುತ್ತಿರುವ ಕುಟುಂಬಕ್ಕೂ, ಮೌಲ್ವಿಗೂ ಸಂಬಂಧ ಇಲ್ಲಾ. ಅವರಿಗೂ ಇವರಿಗೂ ಸಾಕಷ್ಟು ಡಿಫರೆನ್ಸ್ ಇದೆ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
ನಾನು ಅವರ ಜೊತೆ ಪಾರ್ಟನರ್ ಶೀಪ್ ಬ್ಯುಸಿನೆಸ್ ಮಾಡುತ್ತಿದ್ದೇನೆ ಎನ್ನುವವರ ವಿರುದ್ದ ಮಾನನಷ್ಠ ಮೊಕದ್ದಮೆ ಹೂಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೌಲ್ವಿಗೂ ಆ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ, ಅವನೊಬ್ಬ ಭಯೋತ್ಪಾದಕ, ನಾನು ಅದರಲ್ಲಿ ಪಾಲುದಾರನಲ್ಲ ಎಂದರು.

ಮುನಿಸಿಪಲ್ ಆಸ್ತಿ, ನನ್ನ ಆಸ್ತಿ ಅಲ್ಲ, ಅದರ ಮೂಲ ಮಾಲೀಕ ನಮ್ಮ ತಂದೆ. 55 ವರ್ಷಗಳ ಹಿಂದೆ ನಮ್ಮ ತಂದೆ ಜೊತೆಗೆ ನಾಲ್ಕೈದು ಜನ ಇದ್ದರು, ಅದರಲ್ಲಿ ಇಬ್ಬರು ಮುಸ್ಲಿಂ, ಇಬ್ಬರು ಹಿಂದುಗಳಿದ್ದರು. ಒಬ್ಬ ಮುಸ್ಲಿಂ ಮಾರಿ ಹೋದ, ಲೀಸ್ ಹೋಲ್ಡಿಂಗ್ ಗೂ ಈ ಭಯೋತ್ಪಾದಕನಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಆ ಗದ್ದುಗೆ ಸಂಬಂಧಿಸಿದ ಹೋರಾಟವಿದೆ. ಇದು ಸೇರಿದಂತೆ ಎಲ್ಲವೂ ತನಿಖೆ ಮಾಡಲಿ. ಸಿದ್ದರಾಮಯ್ಯ ಅವರದ್ದು ವಿಡಿಯೋ ಬಿಟ್ಟಿದ್ದೇನೆ, ಪೊಲೀಸ್ ಇಲಾಖೆಯವರು ಮೌಲ್ವಿ ಮನೆಗೆ ಹೋಗಬಾರದು ಎಂದು ಸ್ಪಷ್ಟನೆ ಹೇಳಿದ್ದಾರೆ. ಗಂಭೀರ ಆರೋಪವಿದೆ, ಹಾಗಾಗಿ ಅವರ ಮನೆಗೆ ಹೋಗಬಾರದು ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಮುಸ್ಲಿಂರ ಮತಕ್ಕಾಗಿ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದಾರೆ. ಪೊಲೀಸ್ ಅಧಿಕಾರಿಗಳು ಹೇಳಿದರು ಕೂಡ ನಿಮ್ಮ ಮನೆಗೆ ಬಂದಿದ್ದೇನೆ ಎಂದು ಉಧ್ಟತನ ತೋರಿದ್ದಾರೆ, ಎಂಬಿ ಪಾಟೀಲ್ ರು ಒತ್ತಡ ಹಾಕಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

ಎನ್.ಐ.ಎ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಿದ್ದೇನೆ, ನಿನ್ನೆ ಕೆಲ ಮಾಹಿತಿ ಕೊಟ್ಟಿದ್ದೇನೆ, ಇನ್ನಷ್ಟು ಮಾಹಿತಿ ಸಿಗುತ್ತಿದೆ. ಯಾವುದೇ ರೀತಿ ಮುಸ್ಲಿಂರ ಜೊತೆಗೆ ನಮ್ಮ ವ್ಯವಹಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾರು ಹುಚ್ಚರು ಆಗಿದ್ದಾರೆ, ಅವರ ಎದೆ ಬಡಿತ ಜಾಸ್ತಿಯಾಗುತ್ತೆ
ಯತ್ನಾಳ ಹುಚ್ಚ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರು ಹುಚ್ಚರು ಆಗಿದ್ದಾರೆ, ಯಾರ ಎದೆ ಬಡಿತ ಜಾಸ್ತಿ ಆಗಿತ್ತೋ. ಯಾರು ಮುಂದೆ ನಾರಾಯಣ ಹೃದಯಾಲಯಕ್ಕೆ ಸೇರುವವರು ಇದ್ದಾರೋ. ಸಿದ್ದರಾಮಯ್ಯ ಅವರು ಯಾವ ಆಸ್ಪತ್ರೆಗೆ ಸೇರುತ್ತಾರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದಲ್ಲಿ ಭೀತಿ ಇರುವುದರಿಂದ ಹತಾಶೆ ಆಗಿದ್ದಾರೆ ಎಂದು ಕಿಡಿಕಾರಿದರು.

ಮೌಲ್ವಿಗಳ, ದೇಶ ದ್ರೋಹಿಗಳ ಸಭೆಗೆ ಹೋಗುತ್ತಿದ್ದಾರೆ, ನನಗೆ ಮುಸ್ಲಿಂರ ಬೆಂಬಲ ಇದೆ ಎಂದು ಹೈಕಮಾಂಡ್ ಗೆ ಭಯ ಪಡಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.




