ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿರುವ, ಮೈತುಂಬ ಚಿನ್ನಾಭರಣ ಧರಿಸಿ, ಸುತ್ತಲೂ ಹುಡುಗರನ್ನಿಟ್ಟುಕೊಂಡಿರುವ ದಾಸ ಕಿಂಗ್ ಮೇಕರ್ ನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಟ
ದೊಡ್ಡ ದೊಡ್ಡವರ ಜೊತೆ ಫೋಟೊದಲ್ಲಿ ಕಾಣೊ ಈತನಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್, ಯಾವಾಗಲು ಸೋಶಿಯಲ್ ಮೀಡಿಯಾದಲ್ಲಿ ಹವಾ ಇಟ್ಟ ಈತನ ಬಂಧನಕ್ಕೆ ಕಾರಣ ಮಾತ್ರ ಪ್ರಾಪರ್ಟಿ ವಿಚಾರ.

ಬೇರೆಯವರ ಪ್ರಾಪರ್ಟಿ ಗಲಾಟೆ ನಡುವೆ ಯುವಕರನ್ನು ಕಳುಹಿಸಿಕೊಟ್ಟ ಆರೋಪದ ಹಿನ್ನಲೆಯಲ್ಲಿ ಈತನನ್ನು ಯಲಹಂಕ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆ ಹಾಗೂ ಓರ್ವ ವ್ಯಕ್ತಿ ನಡುವೆ ನಡೆದ ಜಾಗದ ಗಲಾಟೆಗೆ ಸಂಬಂಧ ದಾಸ ಮಧ್ಯ ಪ್ರವೇಶಿಸಿದ್ದ ಎನ್ನಲಾಗಿದೆ. ತನ್ನ ಹುಡುಗರನ್ನು ಬಿಟ್ಟು ಮಹಿಳೆಯ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಹಲ್ಲೆಗೊಳಗಾದ ಮಹಿಳೆ ದಾಸನ ಯುವಕರು ಎಂದು ಹೇಳಿ ಹಲ್ಲೆ ಮಾಡಿದ್ದಾಗಿ ದೂರು ನೀಡಿದ್ದರಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ಯ ಈತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಯಲಹಂಕ ಪೊಲೀಸರು, ಕೆಲವು ರೌಡಿ ಚಟುವಟಿಕೆಯಲ್ಲಿ ಈತ ಭಾಗಿಯಾಗಿದ್ದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




