ಬೆಂಗಳೂರು: ಹಿರಿಯ ನಟಿ ಲೀಲಾವತಿರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ಸಂಜೆ ನಿಧನರಾದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದ ಅಂಬೇಡ್ಕರ್ ಭವನ ಮತ್ತು ಅಂತ್ಯಕ್ರಿಯೆಯನ್ನ ಸೋಲದೇವನಹಳ್ಳಿ ತೋಟದ ಮನೆಯ ಆವರಣದಲ್ಲಿ ನಡೆಸಲು ಸಿದ್ದತೆ ಮಾಡಲಾಗಿದೆ.
ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರು, ಸಾರ್ವಜನಿಕರು, VIP ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಬೆಳಗ್ಗೆ 10ಕ್ಕೆ ಬೆಂಗಳೂರಿಗೆ ಪಾರ್ಥಿವ ಶರೀರ ಸ್ಥಳಾಂತರ ಆಗಲಿದೆ. ಮಧ್ಯಾಹ್ನ 2:30ರವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ರವೀಂದ್ರ ಕಲಾಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರರಂಗದವರು ಬರುವ ಸಾಧ್ಯತೆ ಇದೆ. ಸಂಜೆ 4:30ಕ್ಕೆ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಯೇ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.

ಲೀಲಾವತಿ ಪಡೆದ ಪ್ರಶಸ್ತಿಗಳು:
‘ಮದುವೆ ಮಾಡಿನೋಡು’ ಮತ್ತು ‘ಸಂತ ತುಕಾರಾಮ್’ ಸಿನಿಮಾಗಳಿಗೆ ಲೀಲಾವತಿ ಅವರು 2 ರಾಷ್ಟ್ರ ಪ್ರಶಸ್ತಿ ಪಡೆದರು. ‘ತುಂಬಿದ ಕೊಡ’, ‘ಮಹಾತ್ಯಾಗ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’, ಗೆಜ್ಜೆ ಪೂಜೆ’ ಸಿನಿಮಾಗಳಲ್ಲಿನ ನಟನೆಗೆ ಅವರು ರಾಜ್ಯ ಪ್ರಶಸ್ತಿ ಪಡೆದರು. ಕನ್ನಡದ ಕಂದ’ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೀವಮಾನ ಸಾಧನೆಗಾಗಿ ಲೀಲಾವತಿ ಅವರು 1999ರಲ್ಲಿ ‘ಡಾ. ರಾಜ್ಕುಮಾರ್ ಪ್ರಶಸ್ತಿ’ ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು. ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಲೀಲಾವತಿ ಅವರು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. ಅಷ್ಟಲಕ್ಷ್ಮಿ ಕಂಬೈನ್ಸ್’, ‘ಲೀಲಾವತಿ ಕಂಬೈನ್ಸ್’ ಸಂಸ್ಥೆಗಳ ಮೂಲಕ 5 ಸಿನಿಮಾಗಳನ್ನು ಅವರು ನಿರ್ಮಿಸಿದ್ದರು.
ಕನ್ನಡದ ಹಿರಿಯ ನಟಿ ಲೀಲಾವತಿ ವಿಧಿವಶ ಹಿನ್ನಲೆಯಲ್ಲಿ ನಟಿ ಲೀಲಾವತಿ ನಿಧನಕ್ಕೆ ಹಲವು ಗಣ್ಯರು ಸಂತಾಪ
ಸೂಚಿಸಿದ್ದಾರೆ. ಲೀಲಾವತಿ ನಿಧನಕ್ಕೆ ಸಂತಾಪ ಸೂಚಿಸಿದ ಕನ್ನಡ ವಾಟಾಳ್ ಪಕ್ಷ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್,
ಕನ್ನಡ ಚಲನಚಿತ್ರ ಹಿರಿಯ ನಟಿ ಲೀಲಾವತಿ ನಿಧನ ಹೊಂದಿದ್ದಾರೆ. ಇದು ಇಡೀ ನಾಡಿಗೆ ತುಂಬಲಾರದಷ್ಟು ನಷ್ಟ. ಅದ್ಬುತವಾದ ನಟನೆ. ಡಾ. ರಾಜಕುಮಾರ ಜೊತೆಯಲ್ಲಿ ಬಹಳ ವರ್ಷಗಳ ಕಾಲ ಪಾತ್ರವನ್ನು ಮಾಡುತ್ತಿದ್ರು ಲೀಲಾವತಿ ಅವರು. ಲೀಲಾವತಿ ಅವರು ಶ್ರದ್ದೆ, ಪ್ರೀತಿ ನಂಬಿಕೆ ಇದ್ದಂತ ಒಬ್ಬ ಕನ್ನಡ ಚಿತ್ರ ರಂಗದ ಮೇರು ನಟಿ. ಲೀಲಾವತಿ ಅವರ ನಿಧನದಿಂದ ನನಗೆ ನಿಜಕ್ಕೂ ಬಹಳ ನೋವಾಗಿದೆ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತ ನಿಗೆ ಪ್ರಾರ್ಥಿಸುತ್ತೇನೆ ಎಂದರು.




