ಬೆಂಗಳೂರು: ಜಾತಿ ಕಾರಣಕ್ಕೆ ನನಗೆ ಆರ್ ಎಸ್ ಎಸ್ ಕಛೇರಿ ಒಳಗೆ ಪ್ರವೇಶಿಸಲು ಬಿಡಲಿಲ್ಲ ಎಂದು ಹೇಳಿಕೆ ನೀಡಿ, ಸದ್ದು ಮಾಡಿದ್ದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ಇದೀಗ ಮತ್ತೊಂದು ವಾಯ್ಸ್ ನೋಟ್ ಹಾಕಿ, ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಾರಿ ಬಿಜೆಪಿ ಶಾಸಕರಿಗೆ ಸವಾಲು ಎಸೆದು, ವಾಟ್ಸಪ್ ನಲ್ಲಿ ಆಡಿಯೋ ಸ್ಟೇಟಸ್ ಹಾಕಿದ ಗೂಳಿಹಟ್ಟಿ ಶೇಖರ್, ಸಿಸಿಟಿವಿ ಫುಟೇಜ್ ತೆಗೆಯುವಂತೆ ಸವಾಲ್ ಹಾಕಿದ್ದಾರೆ.
ಕಳೆದ ಬಾರಿ ಹೆಡೆಗೇವಾರ್ ಮ್ಯೂಜಿಮ್ ನಲ್ಲಿ ನನಗೆ ಜಾತಿ ಕೇಳಿ ಒಳಗಡೆ ಬೀಡಲಿಲ್ಲ ಎಂದು ದೂರಿದ್ದರು. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆಡಿಯೋ ಬಿಡುಗಡೆ ಯಾಗುತ್ತಿದ್ದಂತೆ, ಆರ್‌ಎಸ್‌ಎಸ್ ಕಚೇರಿ ಬಗ್ಗೆ ಆಡಿಯೊ ಹೇಳಿಕೆಯಲ್ಲಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ತಿಳಿಸಿದ್ದರು. ಅದರ ಬೆನ್ನಲ್ಲೇ, ಬಿಜೆಪಿ ನಾಯಕರು ಆ ರೀತಿ ನಡೆದೇ ಇಲ್ಲ. ಸೋಲಿನ ಕಾರಣದಿಂದ ಹತಾಶೆಯಿಂದ ಮಾತಾಡ್ತಿದ್ದಾರೆ ಎಂದು ಸಮಜಾಯಿಷಿ ನೀಡಿದ್ದರು.
ಇದೀಗ ಪ್ರಶ್ನೆಯೊಂದನ್ನ ಹಾಕುವ ಮೂಲಕ ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್,ಮತ್ತೆ ವಾಯ್ಸ್ ಎಸ್ ಎಂಎಸ್ ಸ್ಟೇಟಸ್ ಹಾಕುವ ಮೂಲಕ ಬಿಜೆಪಿ ನಾಯಕರ ಮೇಲೆ ಕಿಡಿ ಕಾರಿರುವ ಗೂಳಿಹಟ್ಟಿ ಶೇಖರ್, ಮ್ಯೂಸಿಯಂ ಸಿಸಿಟಿವಿ ಪುಟೇಜ್ ಬಿಡುಗಡೆ ಮಾಡುವಂತೆ ಸವಾಲ್ ಹಾಕಿದ್ದಾರೆ.
ನಾನು ಒಡ್ಡ, ನಾನು ಕುಡಿಯುತ್ತೇನೆ.ಹಾಗಂತ ಸುಳ್ಳು ಹೇಳುವುದಿಲ್ಲ.. ನನ್ನ ಸುಳ್ಳು ಅಥವಾ ಸತ್ಯ ಎಂಬುದನ್ನು ಸಾಬೀತುಪಡಿಸಲು, ಹೆಡಗೇವಾರ್ ಮ್ಯೂಜಿಯಂ ನಲ್ಲಿರುವ ಸಿಸಿಟಿವಿ ವಿಡಿಯೋ ತರಿಸಿ ಬಿಡುಗಡೆ ಮಾಡಿ. ನನ್ನನ್ನು ಒಳಗಡೆ ಬಿಡದಿರುವ ಸಿಸಿಟಿವಿ ವಿಡಿಯೋ ತೋರಿಸಿ. ಸುಳ್ಳು ಹೇಳಿದರೆ ನಿಮ್ಮ ಮನೆಗಳಲ್ಲಿ ಜೀತ ಮಾಡ್ತೇನೆ , ನೀವು ಹೇಳಿದ ಕೆಲಸ ಮಾಡಲು ಸಿದ್ಧ ಎಂದು ಆರ್.ಅಶೋಕ್,ಸುರೇಶ್ ಕುಮಾರ್, ಕುಡಚಿ ರಾಜೀವ್ ಗೆ ಪ್ರಶ್ನೆ ಹಾಕುವ ಮೂಲಕ ಗುಡುಗಿದ್ದಾರೆ.
ಆರ್ ಎಸ್ ಎಸ್ ಕಚೇರಿಗೆ ಒಳಗೆ ಬಿಟ್ಟುಕೊಳ್ಳದ ವಿಚಾರವನ್ನು ೬ ತಿಂಗಳ ಮೊದಲೇ ತಿಳಿಸಿದ್ರೆ ಚುನಾವಣೆಯಲ್ಲಿ ಇನ್ನೂ ೧೦-೨೦ ಕ್ಷೇತ್ರ ಕಳೆದು ಕೊಳ್ತಿದ್ರೀ ಎಂಬ ರಾಜೀವ್ ಹೇಳಿಕೆಗೆ ತಿರುಗೇಟು ಕೊಟ್ಟ ಅವ್ರು,
ಸಾಮಾನ್ಯ ಕ್ಷೇತ್ರದಿಂದ ಗೆದ್ದು ೩೮ ವರ್ಷಕ್ಕೆ ಮಂತ್ರಿಯಾಗಿದ್ದೇನೆ ಎಂದು ಸ್ಪಷ್ಟಣೆ ನೀಡಿದರು.




