ಬೆಂಗಳೂರು : ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದಲ್ಲಿರುವ ಹೋಟೆಲ್ ಮತ್ತು ರಸ್ಟೋರೆಂಟ್ ಗಳಲ್ಲಿ ಶೇಕಡಾ 5 ರಿಂದ ಶೇಕಡಾ 10ರವರೆಗೆ ಆಹಾರ ಮತ್ತು ಟೀ ಕಾಫಿ ದರ ಹೆಚ್ಚಳವಾಗಲಿದೆ.
ಬೆಂಗಳೂರು ನಗರದಲ್ಲಿ ಕೆಲವು ಹೋಟೆಲ್ ಮಾಲೀಕರು ಇಂದಿನಿಂದಲೇ ಬೆಲೆ ಮಾಡಿದ್ದಾರೆ. ಇನ್ನುಕೆಲವರು ನಾಳೆ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಅನೇಕರು ಕೆಲ ಸಮಯ ಕಾದು ನಂತರ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಹೋಟೆಲ್ ಮಾಲೀಕರಿಗಂತೂ ಸ್ವಲ್ಪ ಲಾಭ ದೊರೆತರೂ, ಜನಸಾಮಾನ್ಯರಿಗಂತೂ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದಕ್ಕೆಲ್ಲಾ ಪ್ರಮುಖ ಕಾರಣ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯೇ ಕಾಣ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಐವತ್ತರಿಂದ ಆರವತ್ತು ರೂಪಾಯಿ ಪೆಟ್ರೋಲ್ ಗೆ ಏರಿಕೆ ಮಾಡಿ ಕೇವಲ ಐದು ರೂಪಾಯಿ ಕಡಿತಗೊಳಿಸಿದೆ. ಇದು ದರ ಕಡಿಮೆ ಮಾಡಿದಂತಲ್ಲ ಎಂದು ಅನೇಕರು ಆರೋಪಿಸಿದ್ದಾರೆ.

ಕೋವಿಡ್ ನಿಂದ ಇದುವರೆಗೂ ಹೋಟೆಲ್ ಉದ್ಯಮ ಚೇತರಿಸಿಕೊಂಡಿಲ್ಲ, ಇದರ ನಡುವೆ ಏಕಾಏಕಿ ಗ್ಯಾಸ್ ಬೆಲೆ ಏರಿಕೆಯಾಗಿದ್ದರಿಂದ ಅನಿವಾರ್ಯವಾಗಿ ತಿಂಡಿ,ತಿನಿಸುಗಳ ಬೆಲೆ ಏರಿಕೆ ಮಾಡಬೇಕಾಗಿದೆ ಎಂದು ಕೆಲವು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಜನರ ಸಂಕಷ್ಟ ಮನಗಂಡುಇದುವರೆಗೂ ನಾವು ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ ಈಗ ಅನಿವಾರ್ಯ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.




