LOVERS ABSCONDING: ಮಹಿಳೆಯನ್ನ ವಿವಸ್ತ್ರಗೊಳಿಸಿ ಕಟ್ಟಿಹಾಕಿ ಹಲ್ಲೆ ಮಾಡಿರುವ ವಿಚಾರ ಸಂಬಂಧ 7 ಜನರನ್ನು ಬಂಧಿಸಲಾಗಿದೆ: ಗೃಹ ಸಚಿವ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಕಟ್ಟಿಹಾಕಿ ಹಲ್ಲೆ ಮಾಡಿರುವ ವಿಚಾರ ಸಂಬಂಧ 7 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತನ್ನು ಕೋರ್ಟ್ ಗೆ ಪ್ರೊಡ್ಯೂಸ್ ಮಾಡಿ ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ತಗೋತೀವಿ, ಹಾಗೆಯೇ ಮಹಿಳೆ ಇರುವ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ಸಚಿವರು ತಿಳಿಸಿದರು.
24 ವರ್ಷದ ಅಶೋಕ್ ನಾಯಕ್ ಯುವತಿಯೊಬನನ್ನು ಪ್ರೀತಿಸಿದ್ದರು, ಇಬ್ಬರು ಓಡಿಹೋಗಿದ್ದಾರೆ, ರೊಚ್ಚಿಗೆದ್ದ ಯುವತಿ ಕಡೆಯವರು ಹುಡುಗನ ಮನೆಗೆ ಹೋಗಿ, ಮನೆಯಲ್ಲಿ ಒಬ್ಬಳೇ ಇದ್ದ ಹುಡುಗನ ತಾಯಿಯನ್ನು ಹೊರಕ್ಕೆ ಎಳೆದು, ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ, ಹಲ್ಲೆ ನಡೆಸಿದ್ದಾರೆ ಎಂದು ಸಚಿವರು ಘಟನೆಯನ್ನು ವಿವರಿಸಿದರು.
ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಆಕೆಗೆ ಬಟ್ಟೆ ಕೊಟ್ಟು ರಕ್ಷಣೆ ಮಾಡಿದ್ದಾರೆ, ಯುವಕ, ಯುವತಿ ಇವಾಗ ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ, ಅವರ ಫೋನ್ ಲೋಕೇಶನ್ ಮೂಲಕ ಪತ್ತೆ ಹಚ್ಚಿ ಕರೆತರಲು ಪೊಲೀಸರು ಕೆಲಸ ಮಾಡ್ತಾ ಇದ್ದಾರೆ ಎಂದು ತಿಳಿಸಿದರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಇಂತಹ ಘಟನೆ ಮರುಕರುಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

More News