ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25ಸ್ಥಾನಗಳಿಗೆ ಚುನಾವಣೆ ಘೋಷಣೆ : ಡಿಸೆಂಬರ್ 10ರಂದು ಚುನಾವಣೆ

ಬೆಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಒಟ್ಟು 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಜನವರಿ 5ರಂದು ಚುನಾವಣೆ ನಡೆಯುವ ಈ ಎಲ್ಲಾ 25ಕ್ಷೇತ್ರಗಳ ಹಾಲಿ ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿ ಕೊನೆಗೊಳ್ಳಲಿದೆ.
ರಾಜ್ಯ ಚುನಾವಣಾ ಆಯೋಗ ಇಂದು ದಿನಾಂಕ ಪ್ರಕಟಿಸಿದ್ದು, ಡಿಸೆಂಬರ್ 10 ಕ್ಕೆ ಮತದಾನ ನಡೆಯಲಿದೆ. ಮೈಸೂರು, ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಧಾರವಾಡ ದ್ವಿ ಸದಸ್ಯ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 16 ರಿಂದ ಚುನಾವಣಾ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 24 ರಂದು ನಾಮಪತ್ರ ಪರಿಶೀಲನೆ, ನವೆಂಬರ್ 26 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.
ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು. ಡಿಸೆಂಬರ್ 14ರಂದು ಮತ ಎಣಿಕೆ ನಡೆದು ಫಲಿಂತಾಶ ಘೋಷಣೆಯಾಗಲಿದೆ. ಕೊರೊನಾಕ್ಕೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಲು ಚುನಾವಣಾ ಆಯೋಗ ಸೂಚಿಸಿದೆ.


ಹಾಲಿ ಇರುವ ವಿಧಾನ ಪರಿಷತ್ ಸದಸ್ಯರುಗಳು, ಬೀದರ್ – ವಿಜಯ್ ಸಿಂಗ್, ಗುಲ್ಬರ್ಗಾ –ಬಿ ಜಿ ಪಾಟೀಲ್, ಬಿಜಾಪುರ – ಎಸ್ ಆರ್ ಪಾಟೀಲ್ ಹಾಗೂ ಸುನೀಲ್ ಗೌಡ ಪಾಟೀಲ್, ಬೆಳಗಾವಿ – ಕವಟಗಿಮಠ ಮಹಂತೇಶ್ ಹಾಗೂ ವಿವೇಕರಾವ್ ವಸಂತರಾವ್ ಪಾಟೀಲ್, ಉತ್ತರ ಕನ್ನಡ ಶ್ರೀಕಾಂತ್ ಲಕ್ಷ್ಮಣ್, ಧಾರವಾಡ – ಪ್ರದೀಪ್ ಶೆಟ್ಟರ್ ಹಾಗೂ ಶ್ರೀನಿವಾಸ್ ಮಾನೆ, ರಾಯಚೂರು – ಬಸವರಾಜ್ ಪಾಟೀಲ್ ಇಟಗಿ, ಬಳ್ಳಾರಿ- ಕೆ ಸಿ ಕೊಂಡಯ್ಯ, ಚಿತ್ರದುರ್ಗ – ಜಿ ರಘು ಆಚಾರ್, ಶಿವಮೊಗ್ಗ – ಆರ್ ಪ್ರಸನ್ನ ಕುಮಾರ್, ದಕ್ಷಿಣಕನ್ನಡ – ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು – ಪಾಣೇಶ್ ಎಂ ಕೆ, ಹಾಸನ – ಎಂ ಎ ಗೋಪಾಲಸ್ವಾಮಿ, ತುಮಕೂರು – ಕಾಂತರಾಜ್, ಮಂಡ್ಯ – ಅಪ್ಪಾಜಿಗೌಡ, ಬೆಂಗಳೂರು – ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ – ಎಸ್ ರವಿ, ಕೋಲಾರ – ಸಿ ಆರ್ ಮನೋಹರ್, ಕೊಡಗು – ಸುನೀಲ್ ಸುಬ್ರಮಣಿ ಎಂ ಪಿ, ಮೈಸೂರು – ಆರ್ ಧರ್ಮಸೇನಾ ಹಾಗೂ ಎಸ್ ನಾಗರಾಜು ಇವರುಗಳ ಅಧಿಕಾರಾವಧಿ ಕೊನಗೊಳ್ಳಲಿದೆ.

More News