BJP MP’S TEAM VISIT BELAGAVI: ಬೆಳಗಾವಿ ಮಹಿಳೆಯ ಬೆತ್ತಲೆ ಪ್ರಕರಣ: ನಾಳೆ ಬಿಜೆಪಿ ಸಂಸದರ ಭೇಟಿ- ಪರಿಶೀಲನೆ- ಸಾಂತ್ವಾನ: ನಂತರ ಪ್ರತಿಭಟನೆ

BJP MP’S TEAM VISIT BELAGAVI: ಬೆಳಗಾವಿ ಮಹಿಳೆಯ ಬೆತ್ತಲೆ ಪ್ರಕರಣ: ನಾಳೆ ಬಿಜೆಪಿ ಸಂಸದರ ಭೇಟಿ- ಪರಿಶೀಲನೆ- ಸಾಂತ್ವಾನ: ನಂತರ ಪ್ರತಿಭಟನೆ
ಬೆಳಗಾವಿ : ಕಳೆದ ವಾರ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ವಂಟಮೂರಿಯಲ್ಲಿ ನಡೆದ ಮಹಿಳೆಯ ಬೆತ್ತಲೆ ಪ್ರಕರಣವನ್ನು ನಾವು ಇದನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಾಮಾನ್ಯ ಪ್ರಜ್ಞೆ ಪ್ರತಿಯೊಬ್ಬರಿಗೂ ಇದೆ ಎಂದು ಹೇಳಿದ್ದಾರೆ. ಆದರೆ, ನಾಳೆ ಕೇಂದ್ರದಿಂದ ಐದು ಜನ ಸಂಸದರನ್ನೊಳಗೊಂಡ ತಂಡ ದೆಹಲಿಯಿಂದ ಆಗಮಿಸಲಿದೆಯಂತೆ. ಇವರು ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರಂತೆ, ಹಾಗಾದರೆ ಇದು ರಾಜಕೀಯ ಅಲ್ಲದೆ ಇನ್ನೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಂಸದರಾದ ಅಪರಾಜಿತ್ ಸಾರಂಗಿ, ಸುನೀತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಆಶಾ ಲಾಕಡಾ ಅವ್ರು ಬರಲಿದ್ದಾರೆ, ಸಂತ್ರಸ್ತರನ್ನ ಭೇಟಿ ಮಾಡಿ ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹೈಕಮಾಂಡ್ ಹೇಳಿದ್ಮೇಲೆ ನಾವು ಪ್ರತಿಭಟನೆ ಮಾಡುತ್ತಿಲ್ಲ
ದೇಶವೇ ತಲೆತಗ್ಗಿಸುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇದೀಗ ಬಿಜೆಪಿ ಪ್ರತಿಭಟನೆ ಮಾಡಲು ಮುಂದಾಗಿದೆ. ಹೈಕಮಾಂಡ್ ಹೇಳಿದ ಮೇಲೆ ಪ್ರತಿಭಟನೆ ಮಾಡಲಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಹೇಳಿದ್ಮೇಲೆ ನಾವು ಪ್ರತಿಭಟನೆ ಮಾಡುತ್ತಿಲ್ಲ,. ನಾವು ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ಈ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ಪೊಲೀಸರ ಬಗ್ಗೆ ಯಾರಿಗೂ ಭಯ ಇಲ್ಲ, ಸರ್ಕಾರ ಇನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು, ಜವಾಬ್ದಾರಿಯುತ ಸಚಿವರು ಇರುವಂಥ ಕ್ಷೇತ್ರದಲ್ಲಿ ನಡೆದಿರೋ ಘಟನೆ ಇದಾಗಿದೆ ಎಂದು ಆಗ್ರಹಿಸಿದರು.
ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲೇ ಘಟನೆ ನಡೆದದ್ದು ಖಂಡನೀಯ ಎಂದು ಹೇಳಿದ ವಿಜಯೇಂದ್ರ, ಇಡೀ ರಾಜ್ಯದ ಜನ ತಲೆ ತಗ್ಗಿಸುವ ಘಟನೆ ಇದಾಗಿದೆ. ಆರು ಜನ ಅರೆಸ್ಟ್ ಆಗಿದ್ದಾರಂತೆ ಲಘುವಾಗಿ ತೆಗೆದುಕೊಂಡಿದ್ದಾರೆ, ನಿನ್ನೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ ಎಂದು ಹೇಳಿದರು.
ಸರ್ಕಾರ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿ ಆದ್ದರಿಂದ ಘಟನೆ ಖಂಡಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಸಲಿದ್ದಾರೆ ಎಂದು ತಿಳಿಸಿದರು.

More News