ನವದೆಹಲಿ : ಭಾರತ ಟಿ-20 ಕ್ರಿಕೆಟ್ ತಂಡದ ನಾಯಕರಾಗಿ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಹಾಗೆಯೇ ತಂಡದ ಉಪನಾಯಕರಾಗಿ ಕೆ ಎಲ್ ರಾಹುಲ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.
ನವೆಂಬರ್ 17 ರಿಂದ ಭಾರತದಲ್ಲಿ ನಡೆಯುವ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳನ್ನು ರೋಹಿತ್ ಶರ್ಮಾ ಮುನ್ನೆಡೆಸಲಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ ಕಪ್ತಾನರಾಗಿದ್ದ ವಿರಾಟ್ ಕೊಯ್ಲಿ ಟೂರ್ನಿಯ ಬಳಿಕ ನಾಯಕ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
ಟಿ-20 ಕ್ರಿಕೆಟ್ ನಲ್ಲಿ ಕೇವಲ ಆಟಗಾರರಾಗಿ ಮುಂದುವರೆಯುವ ವಿರಾಟ್ ಕೊಯ್ಲಿ ಮುಂಬರುವ ನ್ಯೂಜಿಲ್ಯಾಂಡ್ ಸರಣಿಗೆ ವಿಶ್ರಾಂತಿ ಪಡೆದಿದ್ದಾರೆ. ಇವರೊಂದಿಗೆ ವೇಗದ ಬೌಲರ್ ಜಸ್ ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜ ವಿಶ್ರಾಂತಿ ಪಡೆದಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಭಾರತ ಟಿ-20 ಕ್ರಿಕೆಟ್ ತಂಡ ಇಂತಿದೆ. ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೇಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್.




