ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ಮಹಾದೇವಯ್ಯ ಕೊಲೆ ಕೇಸ್ ನಲ್ಲಿ ಮಹಿಳೆಯ ಹೆಸರು ಕೇಳಿ ಬರ್ತಿದೆ. ಮಹದೇವಯ್ಯ ಮಹಿಳೆ ಹಲವು ಬಾರಿ ಭೇಟಿಯಾಗಿದ್ದು ತನಿಖೆ ವೇಳೆ ತಿಳಿದುಬಂದಿದ್ದು, ಖಾಕಿ ಪಡೆ ಮಹಿಳೆ ಪಾತ್ರದ ಕುರಿತು ತನಿಖೆ ನಡೆಸಲು ಮುಂದಾಗಿದೆ.
ಮಹದೇವಯ್ಯ ಕಳೆದ ಡಿಸೆಂಬರ್ 2 ನೇ ತಾರೀಖು ನಾಪತ್ತೆಯಾಗ್ತಾರೆ. ಡಿಸೆಂಬರ್ ನಾಲಕ್ಕನೇ ತಾರೀಖು ಕೊಲೆಯಾಗಿ ಪತ್ತೆಯಾಗ್ತಾರೆ. ಕೊಲೆಯ ಉದ್ದೇಶ ಏನು..? ಯಾವ ಕಾರಣಕ್ಕಾಗಿ ಅಪಹರಿಸಿ ಕೊಲೆ ಗೈಯಲಾಯ್ತು ಎಂಬ ವಿಚಾರವನ್ನ ಮುಂದಿಟ್ಟುಕೊಂಡು ಹೊರಟ ಪೊಲೀಸರಿಗೆ ಕೂಲಿ ಕೆಲಸ ಮಾಡ್ತಿದ್ದ ಮುರುಗನ್ ನೇ ಕೊಲೆ ಆರೋಪಿ ಎಂಬುದು ತಿಳಿದು ಬರುತ್ತದೆ.
ನಿನ್ನೆ ಅಷ್ಟೇ ಮಹಾದೇವಯ್ಯ ಕೊಲೆ ಆರೋಪಿ ಮುರುಗನ್ ಬಂಧಿಸಲಾಗಿತ್ತು. ತಮಿಳುನಾಡು ಮೂಲದ ಈತ ಕೆಲ ವರ್ಷಗಳಿಂದ ಮಹದೇವಯ್ಯ ಅವರ ಪಕ್ಕದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮಹದೇವಯ್ಯ ಅವರಿಗೆ ಪರಿಚಿತನಾಗಿದ್ದ ಆರೋಪಿಗೆ ಮಹದೇವಯ್ಯ ರ ಹಣದ ವಹಿವಾಟಿನ ಬಗ್ಗೆಯೂ ಮಾಹಿತಿ ಇತ್ತು. ಹಾಗಾಗೀ ತನ್ನ ಸಹಚರರೊಂದಿಗೆ ಸೇರಿ ಕೃತ್ಯವೆಸಗಿದ್ದಾನೆ ಎಂದು ಪೊಲೀಸ್ ಮೂಲ ತಿಳಿಸಿತ್ತು. ಮುರುಗನ್ ನ್ನ ವಿಚಾರಣೆ ನಡೆಸ್ತಿರುವ ಪೊಲೀಸರಿಗೆ ಮತ್ತೊಂದು ಆಯಾಮ ಸಿಕ್ಕಿದೆ.
ಮಹದೇವಯ್ಯ ಮತ್ತು ಅಪರಿಚಿತ ಮಹಿಳೆ ಸಾಕಷ್ಟು ಬಾರಿ ಭೇಟಿಯಾಗಿದ್ದಾರೆಂಬ ಮಾಹಿತಿ ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ. ವಿಚಾರಣೆಗೆ ಮುಂದಾದ ಪೊಲೀಸರಿಗೆ, ಮಹಿಳೆಯನ್ನ ತೋಟದಲ್ಲಿ ಕೆಲಸ ಮಾಡುವವರು ಚನ್ನಪಟ್ಟಣ ಬಸ್ ನಿಲ್ದಾಣದಿಂದ ಕರೆದುಕೊಂಡು ಬರ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಅನುಮಾನದ ಹಿನ್ನೆಲೆ ಅಕ್ರಮ ಸಂಬಂಧ ಏನಾದ್ರೂ ಇದೆಯಾ ಎಂಬ ಆಯಾಮದಲ್ಲೂ ಪೊಲೀಸರ ತನಿಖೆ ತೀವ್ರಗೊಂಡಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಆ ಮಹಿಳೆ ಮನೆಗೆ ಹೋಗಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೊಲೆಯಲ್ಲಿ ಆ ಮಹಿಳೆ ಪಾತ್ರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.




