ಬೆಂಗಳೂರು: ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ಇದರಿಂದ ನಾಯಕ ಕೆ ಎಲ್ ರಾಹುಲ್ ತಮ್ಮ ನೇತೃತ್ವದ ನೂತನ ದಾಖಲೆ ಬರೆದಿದ್ದು, ಅವರು ಮಾಜಿ ನಾಯಕ ಎಂ ಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಜೋಹಾನ್ಸ್ ಬರ್ಗ್ ನಲ್ಲಿ ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ ಕೆ ಎಲ್ ರಾಹುಲ್ ನಾಯಕತ್ವದ ಭಾರತ ತಂಡ ಎದುರಾಳಿ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್ ಗಳಿಂದ ಮಣಿಸಿ, ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ.
ಈ ಜಯದೊಂದಿಗೆ ಕೆ ಎಲ್ ರಾಹುಲ್ ಅವರು ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ, ಮುಂದಕ್ಕೆ ಸಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸತತವಾಗಿ ಅತೀ ಹೆಚ್ಚು ಗೆಲುವು ಸಾಧಿಸಿದ ಭಾರತೀಯರ ನಾಯಕರ ಪಟ್ಟಿಯಲ್ಲಿ ಕೆ ಎಲ್ ರಾಹುಲ್ ಸ್ಥಾನವನ್ನು ಅಲಂಕರಿಸಿದ್ದಾರೆ.

ಧೋನಿ ಸತತವಾಗಿ 9 ಏಕ ದಿನ ಪಂದ್ಯಗಳಲ್ಲಿ ಗೆಲುವು ಕಂಡರೆ, ಕೆ ಎಲ್ ರಾಹುಲ್ 10 ಏಕದಿನ ಪಂದ್ಯಗಳಲ್ಲಿ ಸತತ ಗೆಲುವು ಕಂಡಿದ್ದಾರೆ. ಹಾಗೂ ಈ ಕನ್ನಡಿಗ ನಾಯಕ ಅಜೇಯರಾಗಿ ಉಳಿದಿದ್ದಾರೆ.
ನಿರಂತರವಾಗಿ ಅತೀ ಹೆತ್ತು ಗೆಲುವು ಸಾಧಿಸಿದ ನಾಯಕರು
ರೋಹಿತ್ ಶರ್ಮಾ – 19 ಪಂದ್ಯಗಳು (2019-22)
ರೋಹಿತ್ ಶರ್ಮಾ – 12 ಪಂದ್ಯಗಳು (2018)
ವಿರಾಟ್ ಕೊಯ್ಲಿ – 12 ಪಂದ್ಯಗಳು (2017)
ರೋಹಿತ್ ಶರ್ಮಾ – 10 ಪಂದ್ಯಗಳು (2023)
ಕೆ ಎಲ್ ರಾಹುಲ್ – 10 ಪಂದ್ಯಗಳು (2022-23)*
ಎಂ ಎಸ್ ಧೋನಿ – 9 ಪಂದ್ಯಗಳು (2013)




