ACTOR VINOD RAJ SONG : ಜೀವನವೇ ಒಂದು ಭ್ರಮೆ ಅನ್ನಿಸುತ್ತಿದೆ: ಎಷ್ಟೇ ಧೈರ್ಯ ತುಂಬಿಕೊಂಡರೂ ದುಃಖದ ಕಟ್ಟೆ ಒಡೆದು ಹೋಗಿತ್ತೆ: ನಟ ವಿನೋದ್ ರಾಜ್

ನೆಲಮಂಗಲ: ಜೀವನವೇ ಒಂದು ಭ್ರಮೆ ಅನ್ನಿಸುತ್ತಿದೆ, ಎಷ್ಟು ದೈರ್ಯ ತುಂಬಿಕೊಂಡರೂ ದುಃಖದ ಕಟ್ಟೆ ಒಡೆದು ಹೋಗಿತ್ತೆ ಎಂದು ಹೇಳಿದ ನಟ ವಿನೋದ್ ರಾಜ್, ಅಮ್ಮನ ನೆನಪಲ್ಲಿ ಹಾಡು ಹಾಡಿ ಮನಸ್ಸನ್ನು ಹಗುರಗೊಳಿಸಿದ ನಟ ವಿನೋದ್ ರಾಜ್.

ಹೌದು, ಅಮ್ಮ ಲೀಲಾವತಿ ಅವರ ನೆನಪು ಸದಾ ನನ್ನ ಜತೆಯಲ್ಲಿಯೇ ಇರುತ್ತೆ, ನಾನು ಹಾಡಿರುವ ಈ ಹಿಂದಿ ಹಾಡಿನ ಅರ್ಥ ಮಾಡ್ಕೊಂಡ್ರೆ ಎಲ್ಲಾ ಗೊತ್ತಾಗುತ್ತೆ ಎಂದು ಹಿಂದಿಯಲ್ಲಿ ಹಾಡು ಹಾಡಿದ ವಿನೋದ್ ರಾಜ್.
ಪ್ರೀತಿ ಮಾಡಿದ್ಮೇಲೆ ಯಾಕೆ ಹೆದರ್ಬೇಕು?, ಪ್ರೀತಿ ಮಾಡಿದೀವಿ ಕಳ್ಳತನ ಮಾಡಿಲ್ಲ ಅನ್ನೋ ಅರ್ಥದ ಹಾಡು ಇದಾಗಿದ್ದು, ನನಗೆ ಕಣ್ಣೀರು ಬರ್ತಿದೆ, ಅವರ ಸ್ಥಾನವನ್ನು ಹೇಗೆ ತುಂಬೋದು ಅಂತ ಭಯ ಶುರುವಾಗಿದೆ, ಸಮಯಕ್ಕೆ ಸರಿಯಾಗಿ ಅವರ ತರ ಕೆಲಸ ಮಾಡೋದು ಕಷ್ಟ ಎಂದು ವಿನೋದ್ ರಾಜ್ ಗದ್ಗರಿತರಾಗಿ ಅಮ್ಮನ ನೆನಪು ಮಾಡಿಕೊಂಡರು.

ಅವರು ಇಡೀ ಜೀವನ ಕಳೆದಿದ್ದು ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ, ಬಹುಶಃ ಇವತ್ತು ಅದಕ್ಕೇ ಅವರಿಗೆ ಈ ಸ್ಥಾನ ಬಂದಿದೆ, ಕನ್ನಡ ಪರವಾಗಿ ನಾನು ಯಾವಾಗಲೂ ನಿಂತ್ಕೊಳ್ತೀನಿ ಅನ್ನೋ ಪ್ರತಿಯೊಬ್ಬರಿಗೂ ಅವರು ಧೈರ್ಯ ತುಂಬಿದ್ದಾರೆ ಎಂದು ಹೇಳಿದರು.
ನಾನು ಹಿಂದಿಯಲ್ಲಿ ಹಾಡು ಹಾಡಿದೆ ಅಲ್ವಾ ಅಂತ ಕೇಳ್ಬೋದು, ಆದ್ರೆ ಆ ಹಾಡಿನ ಅರ್ಥ ಅಷ್ಟು ಅಮೋಘವಾಗಿದೆ, ಅಮ್ಮನಿಗೆ ಇಷ್ಟವಾದ ಐಟಂ, ಇವತ್ತು ಸೋಮವಾರ ಮಾಡಿ ಇಡೋ ಅನಿವಾರ್ಯ ಇವತ್ತೇ ಬಂತು, ಹಾಗಾಗಿ ಸಸ್ಯಹಾರ ತಿಂಡಿಗಳನ್ನು ಮಾಡಿಟ್ಟಿದೀವಿ, ಕಟ್ಟೆ ಪೂಜೆ ವೇಳೆಯೂ ತೆಂಗಿನಕಾಯಿ ಚೆನ್ನಾಗಿ ಒಡೆದಿದೆ, ಬಹುಶಃ ಅಮ್ಮನ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು ಎಂದು ನೆನೆದರು.

More News