VEERASHAIVA LINGAYATS HAVE NO OPPOSITION TO CASTE CENSUS: ಬಿಜೆಪಿ ನಾಯಕರಿಗೆ ಅಧಿಕಾರ ನೆತ್ತಿಗೇರಿದೆ: ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ: ಸಚಿವ ಈಶ್ವರ್ ಖಂಡ್ರೆ ಆಕ್ರೋಶ

ಬೆಂಗಳೂರು : ಬಿಜೆಪಿ ನಾಯಕರಿಗೆ ಅಧಿಕಾರ ನೆತ್ತಿಗೆ ಏರಿದೆ, ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ ಅಂತಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ದಾಳಿ ಆಗುತ್ತೆ, ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿಲ್ಲಾ ಅಂದ್ರೆ? ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ನಂಬಿಕೆ ಇದ್ದವರು ಖಂಡಿಸಲೇಬೇಕು ಎಂದರು.
ಜನಪ್ರತಿನಿಧಿಗಳಿಗೆ ಮಾತನಾಡಲು ಅವಕಾಶ ಕೊಡುತ್ತಿಲ್ಲಾ, ಪ್ರಧಾನಿ ಹಾಗೂ ಗೃಹ ಸಚಿವರು ಲೋಕಸಭೆಗೆ ಬರ್ತಿಲ್ಲಾ, ಇದನ್ನ ಖಂಡಿಸುತ್ತೇವೆ ಎಂದು ಹೇಳಿದ ಅವರು, ಇಂದಿರಾಗಾಂಧಿ ಕಾಲದಲ್ಲಿ ಅಮಾನತ್ತು ಮಾಡಿದ್ರು ಅಂತಾ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಆಗಿರೋ ಬಗ್ಗೆಯೇ ಅದನ್ನೆ ಮಾಡ್ತಿವಿ ಅಂತಾ ಅವರು ಹೇಳಿಕೆ‌ ಕೊಡಲಿ ಎಂದರು.
ಎಲ್ಲರಿಗೂ ಮೂಲಸೌಕರ್ಯ ಕೊಡ್ತಿವೆ ಅಂದ್ರು, ಕರ್ನಾಟಕಕ್ಕೆ ಎಷ್ಟು ಮನೆ ಕೊಟ್ಟಿದ್ದೀರಾ? ಎಷ್ಟು ಗುಡಿಸಲು ಮುಕ್ತ ರಾಜ್ಯ ಮಾಡಿದ್ದೀರಾ? ಎಂದು ಕೇಂದ್ರದ ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಅವರು, ಈ ಬಗ್ಗೆ ರಾಜ್ಯದ ದೇಶದ ಜನ ಉತ್ತರ ಬಯಸುತ್ತಿದ್ದಾರೆ ಎಂದರು.
ಬಿಜೆಪಿಯವರು ಮಾಡಿದ್ರೆ ತಪ್ಪಿಲ್ಲಾ, ವಿರೋದ ಪಕ್ಷದವರು ಏನು ಮಾಡದೇ ಇದ್ರು ಅಪರಾಧ ಸ್ಥಾನದಲ್ಲಿ ನೋಡುತ್ತಿದ್ದಾರೆ, ಬಿಜೆಪಿ ಕಾಲದಲ್ಲಿ ಪ್ರಜಾಪ್ರಭುತ್ವ ಅಪಾಯ ಪರಿಸ್ಥಿತಿಯಲ್ಲಿದೆ ಎಂದು ಟಿಕೀಸಿದರು.

ಶರಾವತಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅಡ್ವೋಕೆಟ್ ಜನರಲ್ ಶಶಿಕರಣ್ ಶೆಟ್ಟಿ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಂಡ್ರೆ, ಶರಾವತಿ ಸಂತ್ರಸ್ತರಿಗೆ ಭೂಮಿ ನೀಡುವ ವಿಚಾರದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಕುರಿತು ಸಭೆ ನಡೆಸಲಾಗಿದೆ. ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರ ಇದೆ ಎಂದರು.
ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಅವರ ಪರವಾಗಿದೆ ಎಂದು ಹೇಳಿದ ಅವರು, ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ಗೆ ಹೋದ್ರೆ ಅದಕ್ಕೂ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ, ಈ ಕುರಿತು ಇಂದು ಅಡ್ವೋಕೆಟ್ ಜನರಲ್ ಹಾಗೂ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಲಹೆ ಪಡೆಯಲಾಗಿದೆ ಎಂದರು.
ಜಾತಿಗಣತಿ ವೀರಶೈವ ಲಿಂಗಾಯುತರ ವಿರೋಧವಿಲ್ಲ
ಜಾತಿಗಣತಿಗೆ ವೀರಶೈವ ಲಿಂಗಾಯತರ ವಿರೋಧ ಮಾಡುತ್ತಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರು ಜಾತಿಗಣತಿಗೆ ವಿರೋಧ ಮಾಡಿಲ್ಲ, ಅಂದು ನಡೆದ ಗಣತಿಯಲ್ಲಿ ಎಲ್ಲರ ಮನೆಗಳಿಗೆ ಹೋಗಿಲ್ಲ ಎಂಬ ಭಾವನೆ ಇದೆ, ಕೆಲವರು ಸರ್ಕಾರಿ ಸೌಲಭ್ಯ ಪಡೆಯಲು ಜಾತಿ ಬಳಕೆ ಮಾಡಿದ್ದಾರೆ, ಹೀಗಾಗಿ ಹೊಸದಾಗಿ ಜನಗಣತಿ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇವೆ ಎಂದರು.
ಈಗ ಆಗಿರುವ ಜನಗಣಿತಿಯಲ್ಲಿ ಇರುವ ಅನುಮಾನವನ್ನು ಸಿಎಂ ಗಮನಕ್ಕೆ ತಂದಿದ್ದೇವೆ, ಸಿಎಂ ನಮ್ಮ ಮನವಿ ಪಡೆದಿದ್ದಾರೆ ಅದನ್ನ ಪರಾಮರ್ಶೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಬೀದರ್ ಲೋಕಸಭೆಗೆ ಪುತ್ರ ಆಕಾಂಕ್ಷಿ
ಬೀದರ್ ಲೋಕಸಭೆ ಚುನಾವಣೆ ಖಂಡ್ರೆ ಪುತ್ರ ಅಥವಾ ಅವರ ಪತ್ನಿ ಆಕಾಂಕ್ಷಿಯಾಗಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಖಂಡ್ರೆ, ಅಭ್ಯರ್ಥಿ ಯಾರು ಅಂತ ಗೊತ್ತಿಲ್ಲ, ಬೀದರ್ ನಿಂದ‌ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು, ಪತ್ನಿ, ಪುತ್ರ ಆಕಾಂಕ್ಷಿ ಇದ್ದಾರೂ? ಇಲ್ಲವೋ ಗೊತ್ತಿಲ್ಲ ಎಂದರು.
ಪುತ್ರ ಎನ್ ಎಸ್ ಯುಐ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ, ಚುನಾವಣೆಗೆ ನಿಲ್ಲುವ ಕುರಿತು ಪುತ್ರನನ್ನೇ ಕೇಳಬೇಕು ಎಂದು ತಿಳಿಸಿದರು.

More News