Madal Virupakshappa Case: ಲಂಚ ಪಡೆದ ಆರೋಪ: ಮಾಜಿ ಶಾಸಕ ಮಾಡಾಳ್ ಗೆ ರಿಲೀಫ್..!

ಬೆಂಗಳೂರು: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಗೆ ಹೈ ಕೋರ್ಟ್ ರಿಲೀಫ್ ನೀಡಿದೆ.
ಲಂಚ ಪಡೆದ ಆರೋಪದ ಹಿನ್ನಲೆ ಲೋಕಾಯುಕ್ತ ದಾಖಲಿಸಿದ್ದ ಕೇಸ್ ಅನ್ನು ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ KSDL ಅಧ್ಯಕ್ಷ ಹುದ್ದೆಯಲ್ಲಿ ಇದ್ದರು. ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನಲ್ಲಿ ಭಾರೀ ಭ್ರಷ್ಟಾಚಾರದ ಆರೋಪ ನಡೆದಿದೆ ಎಂಬ ದೂರು ಕೇಳಿ ಬಂದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಮಾಡಾಳು ವಿರೂಪಾಕ್ಷಪ್ಪ ಅವರನ್ನ ಬಂಧಿಸಿದ್ದರು. ಇದೀಗ ಲಂಚದ ಆರೋಪದಲ್ಲಿ ಜೈಲು ಸೇರಿದ್ದ ಮಾಡಾಳು ವಿರೂಪಾಕ್ಷಪ್ಪರ ಕೇಸ್ ನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್​ 17 A ಪ್ರಕಾರ ಪ್ರಕ್ರಿಯೆ ಪಾಲಿಸಿಲ್ಲ ಎಂದು ಮಾಡಾಳ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿವಾದ ಮಂಡಿಸಿದ್ದರು. ವಕೀಲರ ವಾದ ಆಲಿಸಿದ ಹೈಕೋರ್ಟ್​ ನ ಏಕ ಸದಸ್ಯ ಪೀಠ, ಪ್ರಕರಣ ರದ್ದು ಮಾಡಿ ಆದೇಶ ನೀಡಿದೆ. ಸ್ಪೀಕರ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲಾಗಿದೆ ಎಂಬ ತಾಂತ್ರಿಕ ಕಾರಣದಿಂದಾಗಿ ಮಾಡಾಳು ವಿರೂಪಾಕ್ಷಪ್ಪಗೆ ರಿಲೀಫ್ ಸಿಕ್ಕಿದೆ.

ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಪುತ್ರನಿಗೂ ಸಂಕಷ್ಟ ಎದುರಾಗಿದ್ದು, ಮಾಡಾಳು ವಿರೂಪಾಕ್ಷಪ್ಪ ಪುತ್ರನಿಗೆ ರಿಲೀಫ್ ಸಿಕ್ಕಿಲ್ಲ. ಕೇವಲ ಮಾಡಾಳು ವಿರೂಪಾಕ್ಷಪ್ಪ ವಿರುದ್ಧದ ಕೇಸ್ ರದ್ದಾಗಿದ್ದು, ಪುತ್ರ ಸೇರಿ ಇತರೆ ಆರೋಪಿಗಳ ವಿರುದ್ಧ ಕೇಸ್ ಮುಂದುವರೆಯಲಿದೆ.

ಈ ಕುರಿತು ಸಂಸತ ವ್ಯಕ್ತಪಡಿಸಿದ ಮಾಡಾಳ್ ಪುತ್ರ,
ಸತ್ಯಕ್ಕೆ ಪ್ರಾಮಾಣಿಕತೆಗೆ ಜಯ ಸಿಕ್ಕಿದೆ. ನಮ್ಮ ತಂದೆಯವರು ಪ್ರಾಮಾಣಿಕವಾಗಿ ಜನರ ಸೇವೆ ಮಾಡ್ತಿದ್ದರು. ನಮ್ಮ ವಿರುದ್ಧ ಷಡ್ಯಂತರ ಮಾಡಿದ್ದಾರೆ ಅಂತ ಮೊದಲೇ ಹೇಳಿದ್ದೇವು. ಈಗ ಕೋರ್ಟ್ ಆದೇಶ ಬಳಿಕ ಆದರೂ ನಮ್ಮ ವಿರುದ್ಧ ಪಿತೂರಿ ಮಾಡಿದವರಿಗೆ ಅರಿವು ಆದರೆ ಸಾಕು. ನಮ್ಮ ಕಾನೂನು ಹೋರಾಟ ಮುಂದುವರೆಯುತ್ತದೆ. ವಕೀಲರು ಕೇಳಿದ ದಾಖಲಾತಿ ನೀಡಿ, ಕೋರ್ಟ್ ಕೇಳುವ ಮಾಹಿತಿ ನೀಡ್ತಿವೆ. ಪ್ರಕರಣದಲ್ಲಿ ನಮ್ಮ ತಂದೆ ಅವರನ್ನು ಎ1 ಆರೋಪಿ ಮಾಡಿದ್ದರು. ಈಗ ಕೇವಲ ತಾಂತ್ರಿಕ ಕಾರಣದಿಂದ ರಿಲೀಫ್ ಸಿಕ್ಕಿಲ್ಲ, ಇನ್ನು ಸಾಕಷ್ಟು ಅಂಶಗಳು ಇದೆ. ಕೋರ್ಟ್ ಆದೇಶ ಸಿಕ್ಕ ಬಳಿಕ ಮುಂದಿನ ಪ್ರಕ್ರಿಯೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ
ಎಂದು ತಿಳಿಸಿದರು.

More News