Hukkeri: ಹುಕ್ಕೇರಿಯ ಸಂಕೇಶ್ವರದಲ್ಲಿ ದ್ವಜ ವಿವಾದ: ಎರಡು ಗುಂಪಿನ ನಡುವೆ ಮಾರಾಮಾರಿ

ಹುಕ್ಕೇರಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಹತ್ತಿರ ಅಂಕಲೆ ಗ್ರಾಮದಲ್ಲಿ ನಾಮ ಫಲಕ ಮತ್ತು ಕನ್ನಡ ಭಾವುಟ ಅನಾವರಣ ಕುರಿತು ವಿವಾದ ನಡೆದು ಎರಡು ಗುಂಪಿನ ಮದ್ಯೆ ಮಾರಾಮಾರಿ ನಡೆದ ಘಟನೆ ಜರುಗಿದೆ.
ಅಂಕಲೆ ಗ್ರಾಮದ ಸರಕಾರಿ ಕನ್ನಡ ಶಾಲೆ ಹತ್ತಿರ ರಾತೋರಾತ್ರಿ ಸಂಗೋಳ್ಳಿ ರಾಯಣ್ಣ ನಾಮ ಫಲಕ ಅನಾವರಣ ಗೋಳಿಸಿದ ಕುರಿತು ಗ್ರಾಮದ ಯುವಕ ಅನಗಡ ಕರಮೆ ಮತ್ತು ಸಂಗಡಿಗರು ಬಸವರಾಜ ಪಾಟೀಲ ಎಂಬವನಿಗೆ ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತೀಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರಿಂದ ಉ್ರದಿಕ್ತಗೊಂಡು ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿದೆ.

ಘಟನೆ ಜರುಗಿ ಎರಡು ದಿನಗಳ ನಂತರ ಸಂಕೇಶ್ವರ ಪೋಲೀಸ್ ಠಾಣೆಯಲ್ಲಿ ಅನಗಡ ಕರಮೆ, ಅನಿಕೇತ ಕರಮೆ, ಶಾವು ಮಗದುಮ್ಮ, ನಾಗರಾಜ ಪವಾರ, ಹೇಮಂತ ಅಜರೇಕರ ಎಂಬುವರ ಮೇಲೆ ಪ್ರಕರಣ ಧಾಖಲಾಗಿದೆ.
ಗಾಯಾಳು ಬಸವರಾಜ ಪಾಟೀಲ ಮತ್ತು ಶುಭಂ ಕೀವಂಡ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಘಟನೆ ನಡೆದ ವಿಡೀಯೋ ಸಾಮಾಜೀಕ ಜಾಲ ತಾನದಲ್ಲಿ ಹರಿದಾಡುತ್ತಿದೆ.
ಈ ಕುರಿತು ಸಂಕೇಶ್ವರ ಪಿ ಎಸ್ ಆಯ್ ನರಶಿಂಹರಾಜು ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

More News