ಬೆಂಗಳೂರು: ಬ್ರೈನ್ ಹೆಮರೇಜ್ ನಿಂದ ಆಸ್ಪತ್ರೆ ದಾಖಲಾಗಿದ್ದ ಹಿರಿಯ ನಟಿ ಹೇಮಾ ಚೌದರಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎನ್ನಲಾಗುತ್ತಿದೆ.
ಬಹುಭಾಷಾ ನಟಿ ಹೇಮಾ ಅವರಿಗೆ ಇತ್ತೀಚೆಗೆ ಬ್ರೈನ್ ಹ್ಯಾಮರೇಜ್ ಆಗಿದೆ. ಮೊನ್ನೆ ಅವರ ಆರೋಗ್ಯ ದಲ್ಲಿ ತೀವ್ರ ಏರುಪೇರು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಎರಡು ದಿನದ ಹಿಂದೆ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿಗೆ ನಿನ್ನೆ ಸಂಜೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಯಶಸ್ವಿ ಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ..

ಹೇಮಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ನಟಿಯ ಆರೋಗ್ಯ ವಿಚಾರಿಸಲು, ನಟಿ ತಾರಾ, ದೊಡ್ಡಣ್ಣ, ಸುಧಾರಾಣಿ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಆಗಮಿಸಿದ್ದರು. ಈ ವೇಳೆ ಹೇಮಾ ಚೌಧರಿ ಆರೋಗ್ಯದ ಬಗ್ಗೆ ಮಾತನಾಡಿದ ನಟಿ ತಾರಾ, ಹೇಮಾ ಚೌಧರಿಗೆ ವೈದ್ಯರು ಮಾಡಿದ ಶಸ್ತ್ರ ಚಿಕಿತ್ಸೆ ಮಾಡಿದ್ದು, ಯಶಸ್ವಿಯಾಗಿದೆ. ಪ್ರಸ್ತುತ ಅವರನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. .
ವೈದ್ಯರು ಹೇಳಿರುವ ಪ್ರಕಾರ, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಅವರನ್ನು ಭೇಟಿ ಮಾಡಿದಾಗ, ಅವರು ನನ್ನನ್ನು ಗುರುತಿಸಿದ್ರು. ನಾರ್ಮಲ್ ಆಗಿ ಹೊರ ಬರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಅದೇ ನಮಗೆ ಸಮಾಧಾನ ಆಗಿದ್ದು ಎಂದು ನಟಿ ತಾರಾ ತಿಳಿಸಿದರು.