ಬೆಂಗಳೂರು: ರಾಜ್ಯದಲ್ಲಿ JN.1 ಹೊಸ ವೈರಸ್ ಪತ್ತೆಗೂ ಮುನ್ನವೇ ಸಾವಿನ ಆಟ ಶುರುವಾಗಿದೆ. JN.1 ಆತಂಕದ ನಡುವೆ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಒಂದೇ ದಿನ ಕೊರೊನಾಕ್ಕೆ ಇಬ್ಬರು ಬಲಿ ಆಗಿದ್ದು, ಆತಂಕ ಹೆಚ್ಚಿಸಿದೆ.
ದೇಶದಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಆಗ್ತಿದೆ. ಅದರಲ್ಲೂ ಹೊಸ ರೂಪಾಂತರಿ JN.1 ಪ್ರಕರಣ ಪತ್ತೆಯಾಗುತ್ತಿರುವ ಮಧ್ಯೆ ಬೆಂಗಳೂರಿನಲ್ಲಿ ಕೊರೊನಾಕ್ಕೆ ಇಬ್ಬರ ಸಾವಾಗಿದೆ.
1 ವರ್ಷದಿಂದ ಕೋವಿಡ್ ಸೋಂಕು ಕರ್ನಾಟಕದಲ್ಲಿ ಸಣ್ಣಪುಟ್ಟ ರೋಗ ಅನ್ನೋ ಹಾಗಿತ್ತು. ಆದರೆ ಈಗ ಪರಿಸ್ಥಿತಿ ವಿಷಮವಾಗಿ ಪರಿಣಮಿಸಿದೆ. ಕೋವಿಡ್ಗೆ ಬೆಂಗಳೂರಿನ ಚಾಮರಾಜಪೇಟೆಯ 77 ವರ್ಷದ ಡಿಸೆಂಬರ್ 17ರಂದು ಸಾವನ್ನಪ್ಪಿದರೆ, ಡಿಸೆಂಬರ್ 16ಕ್ಕೆ ಬೆಂಗಳೂರಿನಲ್ಲಿ 44 ವರ್ಷದ ವ್ಯಕ್ತಿಯೊಬ್ಬರು ಜೀವಬಿಟ್ಟಿದ್ದು, ಆತಂಕ ಸೃಷ್ಟಿಸಿದೆ. ಇನ್ನು ನಿನ್ನೆ ಮೃತಪಟ್ಟವರ ಟ್ರ್ಯಾಕ್ ಹಿಸ್ಟ್ರಿ ನೋಡುವುದಾದ್ರೆ,
ಮೃತಪಟ್ಟ ಇಬ್ಬರ ಟ್ರ್ಯಾಕ್ ಹಿಸ್ಟರಿ ಏನು..?

ಎ – ಸಿಂಟೆಮ್ಯಾಟಿಕ್ ಕೋಮಾರ್ಬಿಟಿಸ್ ನಿಂದ ಬಳಲುತ್ತಿದ್ದ ಬೆಂಗಳೂರಿನ 44 ವರ್ಷದ ವ್ಯಕ್ತಿ 23 – 11 ರಂದು ಜಯದೇವ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
16 -12 ರಂದು ಆಸ್ಪತ್ರೆಯಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದು ಇವರನ್ನ ಕೊವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಮತ್ತೊರ್ವ 76 ವರ್ಷದ ವೃದ್ಧ ಕೊವಿಡ್ ಬಲಿಯಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧನನ್ನ 12-09-23 ರಂದು ಬೆಂಗಳೂರಿನ ಜೆಪಿ ನಗರದದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಯಿಂದ 17-12-23 ವೃದ್ಧ ಮೃತಪಟ್ಟಿದ್ದಾರೆ. ಸಧ್ಯ ಬೆಂಗಳೂರಿನಲ್ಲಿ ಕೊವಿಡ್ ನಿಂದ ಮೃತಪಟ್ಟ ಇಬ್ಬರ ಪ್ರಾಥಮಿಕ ಸಂಪರ್ಕಿತರನ್ನ ಕೊವಿಡ್ ಟೆಸ್ಟ್ ಗೆ ಆರೋಗ್ಯ ಇಲಾಖೆ ಒಳಪಡಿಸಿದೆ.
ದೇಶದಲ್ಲಿ ಒಟ್ಟು 20 ಜನರಲ್ಲಿ ಕೊರೊನಾ ಹೊಸತಳಿ ಜೆಎನ್ 1 ಪತ್ತೆಯಾಗಿದೆ. ಇತ್ತ ಕಳೆದ ಮೂರು ಅಲೆಗಳಲ್ಲೂ ಕರ್ನಾಟಕದ ಒಟ್ಟು ಕೊವಿಡ್ ಕೇಸ್‍ಗಳ ಪಟ್ಟಿಯಲ್ಲಿ ಬೆಂಗಳೂರಿನದ್ದು ಬಹುಪಾಲು. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಮಾಡಲು ಮತ್ತು ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸಭೆ ಮೇಲೆ ಸಭೆ ಮಾಡುತ್ತಿದೆ.




