ಅನ್ಯಾಯವನ್ನು ಎದುರಿಸಲು ಸಿದ್ಧರಾಗಿರಿ. ಕುಸ್ತಿಯ ಭವಿಷ್ಯ ಅಂಧಕಾರದಲ್ಲಿದೆ ಎಂದು ಯುವ ಪೀಳಿಗೆ ಉಲ್ಲೇಖಿಸಿ ಕುಸ್ತಿಪಟು ವಿನೇಶ್ ಫೋಗಟ್ ಬೇಸರದಿಂದ ಮಾತನಾಡಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪೂನಿಯಾ ನೇತೃತ್ವದಲ್ಲಿ ಅನೇಕ ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದರು. ಈ ಕುರಿತು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಚುನಾವಣೆ ನಡೆಸಲು ಆದೇಶ ನೀಡಿತ್ತು. ಆದೇಶದಂತೆ ಭಾರತೀಯ ಕುಸ್ತಿ ಫೆಡರೇಷನ್ಗೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ರ ಆಪ್ತ ಸಂಜಯ್ ಸಿಂಗ್ ರವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
#WATCH | Delhi: On former WFI chief Brij Bhushan Sharan Singh's aide Sanjay Singh elected as the new president of the WFI, Wrestler Vinesh Phogat says, "There are minimal expectations but we hope that we get justice. It's saddening that the future of wrestling is in the dark. To… pic.twitter.com/Sr8r2Nvuqg
— ANI (@ANI) December 21, 2023
ಸಂಜಯ್ ಸಿಂಗ್ ಆಯ್ಕೆಯನ್ನ ವಿರೋಧಿಸಿ ಕಣ್ಣೀರಿಡುತ್ತಲೇ ಭಾರತಕ್ಕೆ ಒಲಿಂಪಿಕ್ ನಲ್ಲಿ ಚಿನ್ನದ ಪದಕ ತಂದ ತಾರೆ ಸಾಕ್ಷಿ ಮಲೀಕ್ ರೆಸ್ಲಿಂಗ್ ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಸಂಬಂಧಿಸಿದ ಯಾರೂ ಫೆಡರೇಶನ್ಗೆ ಬರುವುದಿಲ್ಲ ಎಂದು ಕ್ರೀಡಾ ಸಚಿವರು ಹೇಳಿದದರು. ಆದರೆ ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಅಸಮಧಾನ ಹೊರ ಹಾಕಿದರು.

ಇಂದಿನ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ಆಪ್ತ ವ್ಯಕ್ತಿ ಗೆದ್ದಿದ್ದಾರೆ. ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ ಅವರು ನ್ಯಾಯ ಕೊಡಿಸುತ್ತಾರೆ ಎಂದು ಹೇಳಿದರು. ಅಲ್ಲದೆ ಮುಂದಿನ ತಲೆಮಾರುಗಳು ಕೂಡ ನ್ಯಾಯಕ್ಕಾಗಿ ಹೋರಾಡುತ್ತಲೇ ಇರುವಂತೆ ತೋರುತ್ತಿದೆ ಎಂದು ಹೇಳಿದರು. ಸರ್ಕಾರ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಪುನಿಯಾ ಬೇಸರ ವ್ಯಕ್ತಪಡಿಸಿದರು.