Prahlad Jodhi vs Jagadish Shettar: ಪ್ರಹ್ಲಾದ್ ಜೋಶಿ ವಿರುದ್ಧ ಜಗದೀಶ್ ಶೆಟ್ಟರ್ ಸ್ಪರ್ಧೆ ಫಿಕ್ಸ್..?

ಬೆಂಗಳೂರು: ಲೋಕಸಭಾ ಚುನಾವಣೆ ಕಾವೇರಿದೆ. ಮೈತ್ರಿ ಮಾಡ್ಕೊಂಡು ಕಾಂಗ್ರೆಸ್ ಗೆ ಟಾಂಗ್ ಕೊಡಲು ಬಿಜೆಪಿ‌ ಕಸರತ್ತು ನಡೆಸ್ತಿರುವ ಬೆನ್ನಲ್ಲೇ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.

ಶತ್ರು ವಿನ ಶತ್ರು ಮಿತ್ರ ಎಂಬ ಪಾಲಿಸಿ ಪಾಲಿಸ್ತಿರುವ ಕಾಂಗ್ರೆಸ್, ಧಾರವಾಡ ದಲ್ಲಿ ಕಟ್ಟರ್ ಹಿಂದೂವಾದಿಯನ್ನೇ ಕಣಕ್ಕಿಳಿಸಲು ಸಜ್ಜಾಗಿದೆ. ಉತ್ತರ ಕರ್ನಾಟಕದಲ್ಲಿ ಭಾಗ್ಯಗಳ ಯೋಜನೆ ಕೊಟ್ಟ ಕಾಂಗ್ರೆಸ್, ಬಿಜೆಪಿ ವಿರುದ್ಧ ತೀವ್ರ ಪೈಪೋಟಿ ಒಡ್ಡಲು ತಯಾರಾಗಿದೆ. ಅಷ್ಟೇ ಅಲ್ಲದೇ, ಈ ಹಿಂದೆ ಬಿಜೆಪಿಯ ಪ್ರಬಲ ನಾಯಕರಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ‘ಲಿಂಗಾಯತ ಅಸ್ತ್ರ’ ಪ್ರಯೋಗಿಸಲು ಮುಂದಾಗಿದೆ

ಹೌದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಜಗದೀಶ್ ಶೆಟ್ಟರ್ ರನ್ನ ಕಣಕ್ಕಿಳಿಸಲು ಹೈಕಮಾಂಡ್ ಸಜ್ಜಾಗಿದೆ. ಆದ್ರೆ ಇದಕ್ಕೆ ಒಪ್ಪದ ಜಗದೀಶ್ ಶೆಟ್ಟರ್, ನಾನು ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಹೇಳುವ ಮೂಲಕ ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ತಮ್ಮ ಪಟ್ಟು ಸಡಿಲಿಸದ ಕೈ ಹೈಕಮಾಂಡ್ ಶೆಟ್ಟರ್ ನ್ನ ದೆಹಲಿಗೆ ಬುಲಾವ್ ಮಾಡಿದೆ.

ಶೆಟ್ಟರ್ ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವ ಹಿನ್ನೆಲೆ ದೆಹಲಿಗೆ ಬರುವಂತೆ ಸೋನಿಯಾಗಾಂಧಿ ಕರೆ ನೀಡಿದ್ದಾರೆ.
ಹೈಕಮಾಂಡ್ ಆದೇಶದಂತೆ ಶೆಟ್ಟರ್ ದೆಹಲಿಯತ್ತ ಹೊರಟಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ತೀವ್ರ ಜಿದ್ದಾ ಜಿದ್ದಿ ಏರ್ಪಡುವ ಸಾಧ್ಯತೆ ಕಾಣ್ತಿದೆ.

More News