New Year Celebration: MG ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದ್ರೆ..?: ಪರಮೇಶ್ವರ್

ಬೆಂಗಳೂರು: MG ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದ್ರೆ ಯಾರು ಅನಾವಶ್ಯಕವಾಗಿ ಟೆಂಟ್ ಗಳನ್ನ ಹಾಕಿಕೊಂಡು ಲಿಕ್ಕರ್ ಸರ್ವ್ ಮಾಡೋದು ಅಂಥದ್ದು ಕಂಡು ಬಂದ್ರೆ ಕ್ರಮ ತೆಗೆದುಕೊಳ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಎಚ್ಚರಿಸಿದ್ದಾರೆ.

ಹೊಸ ವರ್ಷ ಆಚರಣೆ ವಿಚಾರದ ಕುರಿತು ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಯ್ತು.

ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ನಿರ್ಭಂದ ವಿಚಾರದ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮುಕ್ತಾಯವಾದ ಬಳಿಕ ಮಾತನಾಡಿದ ಗೃಹ ಪರಮೇಶ್ವರ್,
ಸಧ್ಯಕ್ಕೆ ಯಾವುದೇ ಬದಲಾವಣೆ ಮಾಡಲು ಹೋಗೋದಿಲ್ಲ.. ಹೆಚ್ಚು ಜನ ಇದ್ದಾಗ ಮಾಸ್ಕ್ ಹಾಕಬೇಕು ಎಂದು ಆರೋಗ್ಯ ಇಲಾಖೆಯಿಂದ ಸೂಚನೆ ಬಂದಿದೆ…
ಅದನ್ನ ಬಿಟ್ಟರೆ ಬೇರೆ ಯಾವುದೇ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೆಟ್ರೋ ಗೆ MG ರೋಡ್ ಎಂಟ್ರಿಯಾಗುವ ಬದಲು ಕಂಬ್ಳೆ ಸರ್ಕಕಲ್ ಅಥಾವ ಟ್ರಿನಿಟಿ ಸರ್ಕಲ್ ಗೆ ಹೋಗಬಹುದು. ಸಣ್ಣ ಪಟ್ಟ ಅಡ್ಜೆಸ್ಬ್ ಮೆಂಟ್ ಬಿಟ್ಟರೆ ಬೇರೆ ಏನು ಇಲ್ಲ..ಯಾರು ಅನಾವಶ್ಯಕವಾಗಿ ಟೆಂಟ್ ಗಳನ್ನ ಹಾಕಿಕೊಂಡು ಲಿಕ್ಕರ್ ಸರ್ವ್ ಮಾಡೋದು ಅಂಥದ್ದು ಕಂಡು ಬಂದ್ರೆ ರೆಗ್ಯೂಲೇಟ್ ಮಾಡ್ತೀವಿ.. MG ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದರು.

ಹೊಸ ವರ್ಷದ ಬರ್ತಿದೆ, ಇಡೀ ರಾಜ್ಯದಲ್ಲಿ ಯುವಕರು ಆಚರಣೆ ಮಾಡ್ತಿದ್ದಾರೆ… ಬೆಂಗಳೂರಿನಲ್ಲಿ MG ರೋಡ್ , ಕಮರ್ಷಿಯಲ್ ಸ್ಟೀಟ್ ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನ ಸೇರಿ ಸೆಲಬ್ರೇಷನ್ ಮಾಡ್ತಾರೆ. ಅನೇಕ ಸಂದರ್ಭಗಳಲ್ಲಿ ಕೆಲವು ಘಟನೆಗಳು ಸಹ ನಡೆದಿದೆ..
ಪೊಲೀಸ್ ಫೈರ್ ಮತ್ತು ಎಕ್ಸೈಜ್, ಮೆಟ್ರೋ ,ಕೆಎಸ್ ಆರ್ ಟಿಸಿ ಎಲ್ಲರನ್ನೂ ಕರೆದು ಸಭೆ ಮಾಡಿದ್ದೇನೆ…ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ವರ್ಷದ ಜೊತೆಗೆ ಕೋವಿಡ್ ಪ್ರಾರಂಭವಾಗಿದೆ…ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಬಗ್ಗೆ ಸಭೆ ಕರೆದಿದ್ದೆವು. ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲು ಎಜೆನ್ಸಿಗಳಿಗೆ ಸೂಚನೆ ನೀಡಿದ್ದೇನೆ. ಅವರವರ ಇಲಾಖೆಯಲ್ಲಿ ಏನೆಲ್ಲ ಮಾಡಬೇಕು ಅನ್ನೋದು ಸೂಚನೆ ಕೊಡಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿಬೇಕಾಗಿದೆ.ಬೇರೆ ಬೇರೆ ದೃಷ್ಟಿ ಇಟ್ಟುಕೊಂಡು ಹೊರಗಿನ ಜನ‌ ತೊಂದರೆ ಮಾಡಬಹುದು ಅದನ್ನ ಸಹ ನಾವು ಗಮನಿಸುತ್ತೇವೆ. ಇಂಟಲಿಜೆನ್ಸ್ ವಿಂಗ್ ಅದನ್ನ ವಾಚ್ ಮಾಡಲಿದೆ ಎಂದು ತಿಳಿಸಿದರು.

More News