ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಂಸತ್ ಭವನದ
ಭದ್ರತಾ ಲೋಪ ಸಂಬಂಧಿಸಿದಂತೆ ಕೊನೆಗೂ ಸಂಸದ ಪ್ರತಾಪ್ ಸಿಂಹ ಮೌನ ಮುರಿದಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ದೇಶದ್ರೋಹಿನೋ, ದೇಶಪ್ರೇಮಿನೋ ಅನ್ನೋದರ ಬಗ್ಗೆ ಅಂತಿಮವಾಗಿ ಜನರೇ ತೀರ್ಪು ನೀಡುತ್ತಾರೆ, ಅದಕ್ಕಿಂತ ಹೆಚ್ಚು ಬೇರೆ ಏನು ನನಗೆ ಹೇಳಲಿಕ್ಕಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ 13 ರಂದು ಸಂದರ್ಶಕರ ಸೋಗಿನಲ್ಲಿ ಬಂದಿದ್ದ ಯುವಕರಿಬ್ಬರೂ ಸದನದ ಒಳಗೆ ಜಿಗಿದು ಸ್ಮೋಕ್ ಬಾಂಬ್ ಸಿಡಿಸಿದ್ದು, ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪಾರ್ಲಿಮೆಂಟ್ ಒಳಗೆ ಹೊಗೆ ಬಾಂಬ್ ಸ್ಪೋಟದ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ,ಮನೋರಂಜನ್ ವಿಚಾರ ಬಿಟ್ಟು ಏನಾದ್ರು ಕೇಳಿ. ನಾನು ದೇಶದ್ರೋಹಿನೋ, ದೇಶಪ್ರೇಮಿನೋ ಅನ್ನೋದನ್ನ ಜನ ತೀರ್ಮಾನಿಸ್ತಾರೆ ಎಂದರು.
ನಾನು ದೇಶದ್ರೋಹಿನೋ, ದೇಶಪ್ರೇಮಿನೋ ಅನ್ನೋದನ್ನ
ಬೆಟ್ಟದಲ್ಲಿ ಕೂತಿರುವ ತಾಯಿ ಚಾಮುಂಡೇಶ್ವರಿ, ಬ್ರಹ್ಮಗಿರಿಯಲ್ಲಿ ಕೂತಿರುವ ಕಾವೇರಿ ತಾಯಿ, 20 ವರ್ಷದಿಂದ ನನ್ನ ಬರವಣಿಗೆ ಓದುತ್ತಿರುವ ಓದುಗ ಅಭಿಮಾನಿಗಳು, ದೇಶ, ಧರ್ಮ, ರಾಷ್ಟ್ರೀಯತೆ ವಿಚಾರ ಬಂದಾಗ ನಾನು ನಡೆದುಕೊಳ್ಳುವ ರೀತಿ, ಮಾಡಿರುವ ಕೆಲಸ ನೋಡಿರುವ ಕೊಡಗು ಮತ್ತು ಮೈಸೂರಿನ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮೂಲಕ ತೀರ್ಪು ನೀಡುತ್ತಾರೆ ಎಂದಿದ್ದಾರೆ.

2024ರ ಏಪ್ರಿಲ್‌ನಲ್ಲಿ ನಡೆಯುವಂತಹ ಲೋಕಸಭಾ ಚುನಾವಣೆಯಲ್ಲಿ ಜನರು ನನ್ನ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಏನು ಎಂಬುದನ್ನು ಅಂತಿಮವಾಗಿ ತೀರ್ಮಾನ ಕೊಡಬೇಕಾದವರು ನನ್ನ ಕ್ಷೇತ್ರದ ಜನ. ಅದರಾಚೆಗೆ ನಾನು ಏನೂ ಹೇಳುವುದಿಲ್ಲ ಎಂದಿದ್ದಾರೆ.




