Ananthakumar Hegade Challenge: ಸಿದ್ದರಾಮಯ್ಯನವರಿಗೆ ದಮ್ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ: ಅನಂತಕುಮಾರ್ ಹೆಗಡೆ ಸವಾಲು

ಶಿರಸಿ: ಮುಖ್ಯಮಂತ್ರಿ ‌ಸಿದ್ದರಾಮಯ್ಯಗೆ ದಮ್ ಇದ್ರೆ ಹಿಂಧೂ ರಾಷ್ಟ್ರ ಆಗುವುದನ್ನ ತಪ್ಪಿಸಲಿ. ಸಿದ್ದರಾಮಯ್ಯನ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಕರ್ನಾಟಕದಲ್ಲಿ ಹಿಂದು ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ ಎಂದು ಸಂಸದ ಅನಂತ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಶಿರಸಿಯಲ್ಲಿ ಸಿದ್ದರಾಮಯ್ಯ ರ ಹಿಜಾಬ್ ಹೇಳಿಕೆ ಕುರಿತು ಮಾತನಾಡಿದ ಅವರು, ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಸಿದ್ದರಾಮಯ್ಯನ ಸರ್ಕಾರ ಹುಚ್ಚು ಮಹಾಮದ್ ನ ಸರ್ಕಾರ. ಅಲ್ಪ ಸಂಖ್ಯಾತರ ಓಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ..ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ.. ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ ಟಿಪ್ಪು. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ ,ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ ಆತ. ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದರೆ, ಕಾಂಗ್ರೆಸ್ ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತೆ ಎಂಬುದನ್ನು ಯೋಚನೆ ಮಾಡಬೇಕು. ಸಿದ್ದರಾಮಯ್ಯ ಯಾರು ಬೇಕಾದ್ರು ಏನುಬೇಕಾದ್ರು ಡ್ರಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ಮುಂದಿನ ದಿನ ಆತಂಕಕಾರಿ ಬೆಳವಣಿಗೆಗೆ ಕಾರಣ ಆಗುತ್ತೆ.. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗ್ತಾರೆ ,ಅವರು ಹಿಜಾಬ್ ಹಾಕಿಕೊಂಡು ಹೋಗ್ತಾರೆ ಎಂದರು.

ಇದೇ ವೇಳೆ ಗ್ಯಾರಂಟಿ ಯೋಜನೆ ವಿಚಾರದ ಕುರಿತು ಟೀಕಿಸಿದ ಅವರು, ಆರ್ಥಿಕ ಸುಭದ್ರತೆಯ ಕಲ್ಪನೆಯೇ ಇಲ್ಲದಂತ ಕೆಲವರು ಮಾಡಿದಂತಹ ಉಪದ್ರವ ಇದು. ಜನರಿಗೂ ಸಹ ಇದು ಬೇಕಾಗಿಲ್ಲ…ಇದರ ಪರಿಣಾಮ ಅಭಿವೃದ್ಧಿಗೆ ಹಣವಿಲ್ಲ. ಸಾಲ ತಂದು ಈ ಸರ್ಕಾರ ಫ್ರೀ ಯೋಜನೆ ಕೊಟ್ಟಿರುವುದು ಹುಚ್ಚು ಮಹಾಮದ್ ನ ಸರ್ಕಾರ ಎಂದು ಕುಟುಕಿದರು.

ರಾಮ ಮಂದಿರ ಉದ್ಘಾಟನೆ ವಿಚಾರದ ಕುರಿತು ಮಾತನಾಡಿದ ಅವರು, ಇದು ಹಿಂದು ಸಮಾಜದ ವಿಜಯ.
ಇದು ಹಿಂದೂ ಸಮಾಜದ ನಿರ್ಮಾಣದ ಮೊದಲ ಹೆಜ್ಜೆಯ ಗುರುತು ಎಂದು ಸಂತಸ ವ್ಯಕ್ತಪಡಿಸಿದರು.

More News