Covid-19 Variant: ಕೋವಿಡ್ ಪಾಸಿಟಿವ್ ಬಂದವರು 7 ದಿನ ಕಡ್ಡಾಯವಾಗಿ ಹೋಮ್ ಐಸೋಲೆಷನ್ ನಲ್ಲಿರಬೇಕು: ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ದೇಶಾದ್ಯಂತ ಕಳೆದ 15 ದಿನಗಳಿಂದ ಕೋವಿಡ್ ಉಪತಳಿ ಜೆಎನ್.1 ತಳಿಯ ಆರ್ಭಟ ಜೋರಾಗಿದೆ. ಈವರೆಗೆ ವಿದೇಶಗಳಲ್ಲಿ ಮಾತ್ರ ಪತ್ತೆಯಾಗಿದ್ದ ಜೆಎನ್.1 ಕೋವಿಡ್ ವೈರಸ್‌ ಈಗ ಕರ್ನಾಟದಲ್ಲಿಯೂ ಪತ್ತೆಯಾಗಿದ್ದು, ಕೊರೊನಾ ತಡೆಗೆ ಕ್ಯಾಬಿನೆಟ್ ಸಬ್ ಕಮಿಟಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಕೋವಿಡ್ ಮುಂಜಾಗೃತ ಕ್ರಮಗಳ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ವಿಧಾನಸೌಧದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ ಮಹದೇವಪ್ಪ ಸೇರಿದಂತೆ ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್,ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ರವಿ, ಎನ್.ಎಚ್.ಎಮ್ ಎಂ.ಡಿ ನವೀನ್ ಭಟ್ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಚರ್ಚೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕೋವಿಡ್ ಪಾಸಿಟಿವ್ ಬಂದವರು 7 ದಿನ ಕಡ್ಡಾಯವಾಗಿ ಹೋಮ್ ಐಸೋಲೆಷನ್ ನಲ್ಲಿರಬೇಕು ಎಂಬ ತೀರ್ಮಾನಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಐಸೋಲೇಶನ್ ನಲ್ಲಿ ಇರುವವರಿಗೆ 7 ದಿನ ರಜೆ ಅವಕಾಶ ಕಲ್ಪಿಸುವ ಸಾಧ್ಯತೆ ಇದ್ದು, ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೂ ಅನ್ವಯ ಆಗುವ ಕುರಿತು ಚರ್ಚೆ ನಡೆಸಲಾಗ್ತಿದೆ.


‌ಕೋವಿಡ್ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಲ್ಲಿ ಸಿಮ್ಟಮ್ಸ್ ಕಂಡಬಂದರೆ ಕಡ್ಡಾಯ ಟೆಸ್ಟಿಂಗ್ ಮಾಡಿಸುವುದು.ಇದುವರೆಗೆ ಒಟ್ಟು 7 ಮಂದಿ ಮೃತ ಪಟ್ಟಿರುವ ಹಿನ್ನಲೆಯಲ್ಲಿ ಬೆಂಗಳೂರು ಹೊರತಾಗಿ, ಮೈಸೂರು, ದಕ್ಷಿಣ ಕನ್ನಡದಲ್ಲಿ ಟೆಸ್ಟಿಂಗ್ ಹೆಚ್ಚಿಸಲು ಸಚಿವರು ಸೂಚನೆ ನೀಡಿದ್ದಾರೆ. ಅಲ್ಲದೇ ಕೋವಿಡ್ ನಿಂದ ಆಸ್ಪತ್ರೆಗೆ ಅಡ್ಮಿಟ್ ಆದವರ ಆಸ್ಪತ್ರೆಗಳಿಗೆ ಡಾಕ್ಟರ್ ಗಳು ಭೇಟಿ ನೀಡಿ ಮೇಲ್ವಿಚಾರಣೆ ನಡೆಸಲು ಸಚಿವರು ಸೂಚನೆ ನೀಡಿದ್ದಾರೆ. ಅಲ್ಲದೇ ಐಸಿಯು ನಲ್ಲಿ ಅಡ್ಮಿಟ್ ಆಗಿರುವವನ್ನ ಹೆಚ್ಚು ಮಾನಿಟರ್ ಮಾಡಲು ಆರೋಗ್ಯ ಸಚಿವರು ನಿರ್ದೇಶನ ನೀಡಿದ್ದಾರೆ.

More News