BJP HIGH COMMAND: ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ನಿರಂತರ ಗುಡುಗು..!: ಬ್ರೇಕ್ ಹಾಕುತ್ತಾ ಹೈಕಮಾಂಡ್..?

ಬೆಂಗಳೂರು: ಆಡಳಿತ ಪಕ್ಷಕ್ಕಿಂತ ಸ್ವಪಕ್ಷಿಯರ ಮೇಲೆ ಬಿಜೆಪಿಯ ಹಿಂದೂಹುಲಿ ಯತ್ನಾಳ್ ಗುಡುಗು ಜೋರಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಶಕುನಿಗಳು ಎಂದು ಪದ ಬಳಕೆ ಮಾಡಿ ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದ ಯತ್ನಾಳ್, ನಿನ್ನೆ ಕೋವಿಡ್ ಸಮಯದಲ್ಲಿ ೪೦ ಕೋಟಿ‌ ಹಗರಣವಾಗಿದೆ ಎಂದು ಅರೋಪ ಮಾಡಿ, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಆಡಳಿತ ಪಕ್ಷಕ್ಕಿಂತ ಸ್ವಪಕ್ಷಿಯರ ಹೇಳಿಕೆ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಬಹಿರಂಗವಾಗಿ ಸ್ವಪಕ್ಷಿಯರ ನಡೆಯಿಂದ ಮುಜುಗರ ಅನುಭವಿಸಿದ ರಾಜ್ಯ ಬಿಜೆಪಿ, ಹೈಕಮಾಂಡ್ ಕದ ತಟ್ಟಿದೆ. ಬಂಡಾಯ ನಾಯಕರನ್ನ ತಣ್ಣಗೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ದೆಹಲಿ ನಾಯಕರ ಬಳಿ ತೆರಳಿದ್ದರೂ ಯತ್ನಾಳ್ ತಣ್ಣಗಾಗ್ತಿಲ್ಲ.

ಸದ್ಯ ಯತ್ನಾಳ್ ವಿರುದ್ದ ಶಿಸ್ತು ಕ್ರಮಕ್ಕೆ ಕೆಲ ಬಿಜೆಪಿ‌ ನಾಯಕರು ಆಗ್ರಹಿಸುತ್ತಿದ್ದಾರೆ..ಆದ್ರೆ ಇಲ್ಲಿಯವರೆಗೂ ಯಾವುದೇ ಶಿಸ್ತು ಕ್ರಮ ಯತ್ನಾಳ್ ಮೇಲೆ ಆಗಿಲ್ಲ..
ವಿಜೇಯಂದ್ರ ರಾಜ್ಯಾಧ್ಯಕ್ಷ ಆದ್ಮೇಲೆ ಯತ್ನಾಳ್ ಮತ್ತಷ್ಟು ರೊಚ್ಚಿಗೆದ್ದಿದ್ದು, ಬಿಎಸ್ ವೈ ಸಿಎಂ ಆದ ಸಂದರ್ಭದಲ್ಲಿ ಆಗಿರೋ ಹಗರಣದ ಗುಟ್ಟು ರಟ್ಟು ಮಾಡುವೆ ಎಂದು‌ ಗುಡುಗುತ್ತಿರುವುದು, ಬಿಜೆಪಿಗೆ ಮುಜುಗರ ಉಂಟು ಮಾಡಿದೆ.

ಯತ್ನಾಳ್ ಹೇಳಿಕೆಯಿಂದ ನಿರಂತರವಾಗಿ ಮುಜುಗರ ಕ್ಕೆ ಈಡಾದ ರಾಜ್ಯ ಬಿಜೆಪಿ, ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ. ದಿನದಿಂದ ದಿನಕ್ಕೆ ಯತ್ನಾಳ್ ಆಕ್ರೋಶ ಹೆಚ್ಚಾಗ್ತಿರುವ ಕಾರಣ ಹೈಕಮಾಂಡ್ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಬಿಡುಗಡೆ ಗೊಂಡ ಯಾವ ಪಟ್ಟಿಗಳಲ್ಲೂ ಯತ್ನಾಳ್ ಗೆ ಅಧಿಕಾರ ಹಂಚಿಕೆ ಮಾಡದೇ ಶಿಕ್ಷೆ ನೀಡಲಾಗಿದೆ. ಹೀಗೆ ಯತ್ನಾಳ್ ಹೇಳಿಕೆ ಮುಂದುವರೆದರೆ, ಯತ್ನಾಳ್ ವಿರುದ್ದ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ.

ಸದ್ಯ ಮೊದಲು ಎಚ್ಚರಿಕೆ ಕೊಟ್ಟು ನೊಟೀಸ್ ಕೊಡುತ್ತಾ..
ಹಾಗಾದರೆ ಯತ್ನಾಳ್ ವಿರುದ್ಧ ಶಿಸ್ತು ಕ್ರಮ‌ಕೈಗೊಂಡ್ರೆ ರೆಬೆಲ್ ಶಾಸಕನ‌ ನಡೆ ಏನು..ಯಾವುದೇ ಪಕ್ಷ ಸೇರದೆ‌‌ ಸೀದಾ ಹೀಗೆ ಗುಡುಗ್ತಾರಾ ಯತ್ನಾಳ್ ಎಂದೆಲ್ಲಾ ಚರ್ಚೆ ಶುರುವಾಗಿದೆ.

More News