BJP DONE MONEY FROM DEADBODY ON CORONA..!: ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದವರು: ಯತ್ನಾಳ್ ಆರೋಪಕ್ಕೆ ವಿಜಯೇಂದ್ರ ಉತ್ತರ ನೀಡಬೇಕು: ಸಚಿವ ಪ್ರಿಯಾಂಕ್ ಖರ್ಗೆ

ಹುಬ್ಬಳ್ಳಿ: ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು, ಇವಾಗ ಇರೋದು ಸಂವಿಧಾನದ ಸರ್ಕಾರ, ದೇಶ ನಡಿತಿರೋದು ಭಗವದ್ಗೀತೆ ಮೇಲೆ ಅಲ್ಲ, ಕುರಾನ್ ಮೇಲೆ ಅಲ್ಲ, ಬೈಬಲ್ ಮೇಲೆ ಅಲ್ಲ, ದೇಶ ನಡಿತಿರೋದು ಸಂವಿಧಾನದ ಮೇಲೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಇಂದು ಸುದ್ಗಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನಾದರೂ ಅನ್ಲಿ ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರ ಎಂದು IT BT ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬಸವ ತತ್ವ,ಅಂಬೇಡ್ಕರ್ ತತ್ವ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದೂತ್ವದ ಮೇಲೆ ನಡೀತಿತ್ತು. ಪೀಠದ ಮೇಲೆ ಕುಳಿತು ಕಾಗೇರಿ ಅವರು ನಾನು RSSನವರು ಎಂದಿದ್ರು ಎಂದರು.
ಬಿಜೆಪಿಯವರು ಹೆಣದಿಂದಲೂ ಹಣ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ. ಅವರದೇ ಪಕ್ಷದ ಯತ್ನಾಳ್ ಅವರು ಮಾಡಿರುವ ಆರೋಪಕ್ಕೆ ವಿಜಯೇಂದ್ರ ಅವರೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದ ಅವರು, ವಿಜಯೇಂದ್ರ ಈವಾಗ ಯತೀಂದ್ರ ಅವರನ್ನು ಶ್ಯಾಡೋ ಸಿಎಮ್ ಅಂತಾ ಆರೋಪ ಮಾಡಿದ್ದರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಮ್ ಯಾರಿದ್ರು..? ಎಂದು ಪ್ರಶ್ನಿಸಿದರು.

ಯತ್ನಾಳ ದಾಖಲೆ ಬಿಡುಗಡೆ ಮಾಡ್ತೀವಿ ಅಂತಾರೆ. ಯತ್ನಾಳ್ ಅವರಲ್ಲಿ ನಾನು ಕರ್ನಾಟಕ ಜನರ ಪರ ಮನವಿ ಮಾಡ್ತೀನಿ. ನೀವು ದಾಖಲೆ ಕೊಡಿ, ನೀವು ಪ್ರಾಮಾಣಿಕರು ಅಂತಾ ಗೊತ್ತಿದೆ. ಯಾವದೇ ದಾಖಲೆ ಇದ್ರೆ ನಾವು ಜಸ್ಟೀಸ್ ಮೈಕಲ್ ಕುನೋ ಅವರ ಸಮಿತಿ ಇದೆ.ಅವರಿಗೆ ದಾಖಲೆ ಕೊಡಿ ಎಂದು ಸಚಿವರು ಮನವಿ ಮಾಡಿದರು.
40 ಸಾವಿರ ಕೋಟಿ ಹಗರಣ ಇದೆ, ಹೆಣದ ಮೇಲೆ ಹಣ ಮಾಡಿದ್ದಾರೆ ಎಂದ್ರೆ ಮನುಷ್ಯತ್ವ ಅಲ್ಲ. ಇದು ಕಾಂಗ್ರೆಸ್ ನಾಯಕರ ಆರೋಪ ಅಲ್ಲ. ಮಾಜಿ ಕೇಂದ್ರ ಸಚಿವ ಹಾಲಿ ಶಾಸಕರ ಆರೋಪ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರಕ್ಕೂ ಪಾಲು ಹೋಗಿರಬಹುದು. ಶೇಕಡಾ 40 ಪರ್ಸೆಂಟ್ ಸರ್ಕಾರ ಬಿರುದು ಬಂದಿರೋದು ಬಿಜೆಪಿಯವರಿಂದ, ಕೇಂದ್ರ ನಾಯಕರು,ರಾಜ್ಯ ನಾಯಕರಿಗೂ ಪಾಲು ಹೋಗಿದೆ ಎಂದು ಆರೋಪಿಸಿದರು.

ಬ್ರಿಟಿಷರ ಬೂಟು ನೆಕ್ಕೋರು ಅನ್ನೋ ಹರಿಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದರಲ್ಲಿ ತಪ್ಪೇನಿದೆ, ಪರೋಕ್ಷವಾಗಿ ಹರಿಪ್ರಸಾದ್‌ ಮಾತಿಗೆ ಧ್ವನಿಗೂಡಿಸಿದ ಖರ್ಗೆ. ಕ್ಷಮಾ ಪತ್ರ ಬರೆದಿದ್ದು ಯಾರೂ, ಬ್ರಿಟಿಷರ ಬಳಿ ಪೆನ್ಶನ್ ತಗೊಂಡಿದ್ದು ಯಾರೂ. ಬಿಜೆಪಿ ಮತ್ತು RSS ಗೆ ಸ್ವಂತ ಇತಿಹಾಸ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಇಲ್ಲ. ಅವರು ಸೃಷ್ಟಿಸಬೇಕಾಗಿದೆ, ಹಾಗಾಗಿ ವಾಟ್ಸಪ್ ಯುನಿವರ್ಸಿಟಿಯಲ್ಲಿ ಸುಳ್ಳು ಹಬ್ಬಿಸುತ್ತಿದ್ದಾರೆ, ಅದನ್ನೆ ಯುವಕರು ನಂಬತ್ತಿದ್ದಾರೆ ಎಂದು ಬಿಜೆಪಿಯನ್ನು ಟರಾಟೆಗೆ ತೆಗೆದುಕೊಂಡರು.
ಬಿಜೆಪಿಯವರು ಇತ್ತೀಚೆಗೆ ಹುಟ್ಟಿರೋದು. ಇವಾಗ ಯಾರ ಯಾರ ಬಿಜೆಪಿ ಶಾಸಕರು, ಸಂಸದರು ಪೂರ್ವಜರು ಕಾಂಗ್ರೆಸ್ ಗೆ ವೋಟ್ ಹಾಕೀರ್ತಾರಲ್ಲ. ಸಾವರಕರ್ ಗೆ ಹೇಗೆ ವೀರ ಅನ್ನೋ ಬಿರುದು ಬಂತು, ಇದಕ್ಕೆಲ್ಲ ಉತ್ತರ ಕೊಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೂಗುಚ್ಚ ನಿರಾಕರಣೆ ಮಾಡಿದ ಪ್ರಿಯಾಂಕ್ ಖರ್ಗೆ
ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ಬಂದಾಗ ಹೂಗುಚ್ಚ ನೀಡಲು ಹೋಗಿದ್ದ ಜಿಪಂ‌ ಸಿಎಓ. ಆದರೆ, ಹೂಗುಚ್ಚ ನಿರಾಕರಣೆ ಮಾಡಿದ ಪ್ರಿಯಾಂಕ್ ಖರ್ಗೆ, ಅವರ ಬಳಿ ಇದ್ದ ಪುಸ್ತಕ ತೆಗೆದುಕೊಂಡರು.

More News