Why Not Taken Action against Yatnal: ಯತ್ನಾಳ್ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?: ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಯತ್ನಾಳ್ ಸುಳ್ಳು ಹೇಳ್ತಿದ್ದಾರೆ ಅಂತ ಬಿಜೆಪಿ ಇದುವರೆಗೆ ಹೇಳಿಲ್ಲ. ಯತ್ನಾಳ ವಿರುದ್ದ ಶಿಸ್ತುಕ್ರಮ ಕೂಡ ಜರುಗಿಸಿಲ್ಲ.
ಯತ್ನಾಳ್ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?ಯಾಕೆಂದರೆ ಇವರ ಭ್ರಷ್ಟಾಚಾರದ ದಾಖಲೆಗಳು ಯತ್ನಾಳ್ ಬಳಿ ಇದೆ. ಯತ್ನಾಳ್ ಹತ್ರ ಪ್ರೂಫ್ ಇದೆ ಅದೇ ಕಾರಣಕ್ಕೆ ಅವರ ವಿರುದ್ದ ಶಿಸ್ತುಕ್ರಮ ಆಗ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಯತ್ನಾಳ್ ಆರೋಪದ ಕುರಿತು ಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,
ಬಿಜೆಪಿಯ ಯತ್ನಾಳ್ ಗುರುತರ ಆಪಾದನೆ ಮಾಡಿದ್ದಾರೆ.
ಯಡಿಯೂರಪ್ಪ ಕಾಲದಲ್ಲಿ ಅವರು ಸಿಎಂ ಆಗಿದ್ದಾಗ ಕೋವಿಡ್ ಹಗರಣಗಳ ಬಗ್ಗೆ ಸ್ಪಷ್ಟ ರೀತಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ೪೦ ಸಾವಿರ ಕೋಟಿ ಯಷ್ಟು ಲೂಟಿ ಮಾಡಿದ್ದಾರೆ ಅಂತ ಯತ್ನಾಳ್ ಹೇಳಿದ್ದಾರೆ. ಬಿಜೆಪಿಯ ಯತ್ನಾಳ್ ಅವರ ಶತ್ರುಗಳಿಗೆ ಅವರು ವಾರ್ನಿಂಗ್ ಕೊಡ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ನಮ್ಮ ಅನುಮಾನಕ್ಕೆ ಪುಷ್ಟೀಕರಣ ಸಿಕ್ಕಿದೆ. ಯಡಿಯೂರಪ್ಪ ಮಗ ವಿಜಯೇಂದ್ರ ಆ ಕಾಲದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ವಿಜಯೇಂದ್ರ ಟ್ಯಾಕ್ಸ್ ಆಗ ಬಹಳ ಫೆಮಸ್ ಆಗಿತ್ತು. ವಿಧಾನಸೌಧದ ಮೊಗಸಾಲೆಯಲ್ಲೆಲ್ಲ ವಿಜಯೇಂದ್ರ ಟ್ಯಾಕ್ಸ್ ಫೇಮಸ್ ಆಗಿತ್ತು. ಯಡಿಯೂರಪ್ಪ ಕಾಲದ ಎಲ್ಲ ಫೈಲ್ ಅವರ ಪುತ್ರ ವಿಜಯೇಂದ್ರ ನೋಡುತ್ತಿದ್ದರು. ಅವರನ್ನು ಇದೇ ಕಾರಣಕ್ಕೆ ತೆಗೆದುಹಾಕಿದ್ದರು, ಈಗ ಅವರ ಮಗನನ್ನೇ ಅಧ್ಯಕ್ಷ ಮಾಡಿದ್ದಾರೆ. ಬಿಜೆಪಿ ದಾಖಲೆ ಪ್ರಮಾಣದ ಭ್ರಷ್ಟಾಚಾರ ಮಾಡುವ ಪಾರ್ಟಿ ಎಂಬುದು ಸಾಬೀತಾಗಿದೆ ಎಂದು ದೂರಿದರು.

“ಯತ್ನಾಳ್ ಬಳಿ ಮಾಹಿತಿ ದಾಖಲೆ ಇದ್ರೆ ತನಿಖಾ ಆಯೋಗದ ಮುಂದೆ ಇಡಲಿ”

ಯತ್ನಾಳ್ ಬಳಿ ಮಾಹಿತಿ ದಾಖಲೆ ಇದ್ರೆ ನಮ್ಮ ತನಿಖಾ ಆಯೋಗದ ಮುಂದೆ ಇಡಿ. ಎವಿಡೆನ್ಸ್ ಇಟ್ಟುಕೊಂಡು ಹೇಳದೇ ಇರುವುದೂ ಅಪರಾಧವೇ. ಧೈರ್ಯವಾಗಿ ಈಗ ಹೇಳಿಕೆ ಕೊಟ್ಟಿದ್ದೀರಿ. ತನಿಖಾ ಆಯೋಗದ ಮುಂದೆ ಯತ್ನಾಳ್ ಬರಲಿ. ತನಿಖಾ ಆಯೋಗಕ್ಕೆ ಸರ್ಕಾರ ಇನಫ್ಲುಯೆನ್ಸ್ ಮಾಡಲು ಆಗುವುದಿಲ್ಲ. ಯತ್ನಾಳ್ ಗೆ ಸುಮೊಟೋ ನೊಟೀಸ್ ನೀಡುವುದು ತನಿಖಾ ಆಯೋಗದ ವಿವೇಚನೆಗೆ ಬಿಟ್ಟಿದ್ದು. ಇಡೀ ದೇಶದಲ್ಲೇ ದೊಡ್ಡ ಹಗರಣ ಇದು. ಇಡಿ ಸಿಬಿಐ ಐಟಿಯವರಿಗೆ ಇದೆಲ್ಲ ಕಾಣುತ್ತಲೇ ಇಲ್ವಾ? ಅವರೂ ಬಿಜೆಪಿಯ ಕಾರ್ಯಕರ್ತರಾಗಿದ್ದಾರಾ? ಎಂದು ಗರಂ ಆದರು.

ಯತ್ನಾಳ್ ಸುಳ್ಳು ಆರೋಪ ಮಾಡ್ತಿದ್ದಾರೆ ಅಂತ ನಾನು ಹೇಳಲ್ಲ. ಯತ್ನಾಳ್ ತರಹ ನಮ್ಮಲ್ಲಿ ಯಾರಾದರೂ ಮಾತನಾಡಿದ್ರೆ ಕನಿಷ್ಟ ನೊಟೀಸ್ ಆದ್ರೂ ಕೊಡ್ತಿದ್ವಿ.
ಆದರೆ ಯತ್ನಾಳ್ ಮೇಲೆ ಕ್ರಮ ಆಗುತ್ತಿಲ್ಲ. ಭ್ರಷ್ಟಾಚಾರದ ಪಾಲುದಾರಿಕೆಯಲ್ಲಿ ಕೇಂದ್ರ ಬಿಜೆಪಿಯವರ ಪಾಲೂ ಇದೆ.
ಪೋಲ್ ವಾಲ್ಟ್ ಮಾಡಿಕೊಂಡು ಹಾರಿದ ಹಾಗೆ ನೇರವಾಗಿ ಅಧ್ಯಕ್ಷ ಸ್ಥಾನಕ್ಕೆ ಹಾರಿದ್ದಾರೆ. ಬಿಜೆಪಿಯವರದ್ದು ಹಗರಣಗಳ ವಿಚಾರದಲ್ಲಿ ಮೌನಂ ಸಮ್ಮತಿ ಲಕ್ಷಣಂ.
ಯಡಿಯೂರಪ್ಪ ಮತ್ತು ಕುಟುಂಬದ ಕಂಟ್ರೋಲ್ ಗೆ ಎಲ್ಲವೂ ಸಿಕ್ಕಿಕೊಂಡಿದೆ. ಬಿಜೆಪಿಯ ಲೂಟಿಕೋರರನ್ನೇ ಅವರ ಕಮಿಟಿಗಳ ಪದಾಧಿಕಾರಿಗಳಾಗಿದ್ದಾರೆ. ಯಾರೆಲ್ಲ ಭ್ರಷ್ಟಾಚಾರದ ಭಾಗಿಯಾಗಿದ್ದಾರೋ ಅವರನ್ನೇ ಕಮಿಟಿಗಳಲ್ಲಿ ಸೇರಿಸಿಕೊಂಡಿದ್ದಾರೆ. ಅದಕ್ಕೇ ವಿಜಯೇಂದ್ರ ಒಮ್ಮೆ ಶಾಸಕರಾದ್ರೂ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇವರ ಭ್ರಷ್ಟಾಚಾರಕ್ಕೆ ಸಂಪೂರ್ಣ ಬೆಂಬಲ ಕೇಂದ್ರದ ನಾಯಕರಿಂದಲೇ ಸಿಗ್ತಿದೆ ಎಂದು ದೂರಿದರು.

ನಾವು ಕೋವಿಡ್ ನಿಯಂತ್ರಣಕ್ಕೆ ಪಾರದರ್ಶಕತೆ ಕಾಪಾಡುತ್ತೇವೆ. ಕ್ಯಾಬಿನೆಟ್ ಮುಂದೆಯೇ ಎಲ್ಲವನ್ನೂ ಖರೀದಿ ಮಾಡ್ತೇವೆ. ಹಿಂದೆ ಕೋವಿಡ್ ನಿರ್ವಹಣೆಗೆ ಏನೂ ಯೋಚನೆಯೇ ಮಾಡಿಲ್ಲ. ಚಾಮರಾಜನಗರ ದುರಂತದ ವಿಚಾರದಲ್ಲಿ ನಾವು ಪ್ರತ್ಯೇಕವಾಗಿ ತನಿಖೆ ಮಾಡಬೇಕು ಅಂತ ಇದ್ವಿ. ಸಿಎಂ ಗಮನಕ್ಕೂ ಕೂಡ ತಂದಿದ್ದೇವೆ. ಅದರ ತನಿಖೆಯ ವಿಚಾರವನ್ನೂ ಕೂಡ ಜಸ್ಟಿಸ್ ಖೂನಾ ಆಯೋಗದ ಮುಂದೆ ಇದೆ. ಸ್ಪಷ್ಟವಾದ ವರದಿ ಕೂಡಲೇ ಬರಬೇಕು ಎಂಬ ನಿಲುವು ನಮ್ಮದು. ಕೋವಿಡ್ ಸಂದರ್ಭದಲ್ಲಿ ಇದ್ದ ಕೆಲವು ಅಧಿಕಾರಿಗಳು ಬದಲಾಗಿದ್ದಾರೆ
ಅಧಿಕಾರಿಗಳ ರೆಕಮೆಂಡೇಷನ್ ಇಲ್ಲದೆಯೇ ಕೆಲವೊಂದು ನಿರ್ಣಯ ಆಗಿನ ಕಾಲದಲ್ಲಿ ಆಗಿದೆ ಎಂದು‌ ಗಂಭೀರ ಆರೋಪ ಮಾಡಿದರು.

More News