ಬೆಂಗಳೂರು : ಕ್ರೈಸ್ತ ಸಮುದಾಯದ ಮುಖಂಡರು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು, ಭೇಟಿಯಾಗಿ ಮತಾಂತರ ನಿಷೇಧ ಕಾಯಿದೆ ತರುವ ಸಂಬಂಧ, ಸಚಿವರ ಜತೆ ಚರ್ಚಿಸಿ, ಮನವಿ ಸಲ್ಲಿಸಿದರು.
ಪ್ರಸ್ತಾವಿತ ಮತಾಂತರ ನಿಷೇಧ ಕಾಯಿದೆ ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡದೆ ಸಮಗ್ರ ಸಾಮಾಜಿಕ ಹಿತಾಸಕ್ತಿ ಹಾಗೂ ಎಲ್ಲಾ ಧರ್ಮೀಯರೂ, ತಮ್ಮ ತಮ್ಮ ಧರ್ಮವನ್ನು ಶಾಂತಿ ಹಾಗೂ ಸಹಬಾಳ್ವೆಯಿಂದ ಆಚರಿಸಲು ಪೂರಕವಾಗಿರಲಿದೆ ಎಂದು ತಿಳಿಸಿದರು.

ಗೃಹ ಸಚಿವರಿಗೆ ಧನ್ಯವಾದ ಅರ್ಪಿಸಿದ ಮುಖಂಡರು, ಬಲವಂತವಾಗಿ ಮಾಡಲಾಗುವ ಮತಾಂತರ ಪ್ರಕ್ರಿಯೆಗೆ ತಮ್ಮದೂ ವಿರೋಧವಿದೆ, ಎಂದೂ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.




