ಪ್ಯಾಲಿಸ್ಟೈನ್ ಗಾಜಾ ಸ್ಟ್ರಿಪ್ ಮೇಲೆ ಇಸ್ರೇಲ್ ಬಾಂಬ್ ದಾಳಿಯಿಂದ ನಾಗರಿಕರು ಸಾವಿನ ಹಿನ್ನೆಲೆಯಲ್ಲಿ ನ್ಯೂ-ಇಯರ್ ಸಂಭ್ರಮಾಚರಣೆ ಮಾಡದಿರಲು ಪಾಕ್ ನಿರ್ಧರಿಸಿದೆ.
ಇಸ್ರೇಲ್ ಹಿಂದೆಂದೂ ಕಂಡಿರದ ಐತಿಹಾಸಿಕ ದುರಂತವನ್ನು ಕಂಡಿದೆ. ಈ ದುರಂತದ ಬಗ್ಗೆ ಮರುಕ ಸೂಚಿಸುತ್ತಲೇ ತಮ್ಮ ದೇಶದ ಜನರಿಗೆ ಆದೇಶ ನೀಡಿರುವ ಪಾಕ್ನ ಪ್ರಧಾನಿ ಅನ್ವಾರುಲ್ ಹಕ್ ಕಾಕರ್, ಈ ಬಾರಿಯ ನ್ಯೂ ಇಯರ್ ಸೆಲೆಬ್ರೆಷನ್ ಮಾಡುವುದು ಬೇಡ. ಇದನ್ನ ಪಾಕ್ ಜನತೆ ಕಟ್ಟುನಿಟ್ಟಾಗಿ ಆಚರಿಸಲೇಬೇಕೆಂದು ಒತ್ತಾಯಿಸಿದ್ದಾರೆ. ಪ್ಯಾಲಿಸ್ಟೈನ್ನಲ್ಲಿನ ಗಂಭೀರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅಲ್ಲಿನ ನಾಗರಿಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಈ ಆದೇಶಿಸಲಾಗಿದೆ.
ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಮುಗ್ಧ ಮಕ್ಕಳ ಹತ್ಯಾಕಾಂಡ ನಡೆದಿದೆ. ನಿರಾಯುಧ ಪ್ಯಾಲಿಸ್ಟೈನ್ನಿಯರ ನರಮೇಧದಿಂದ ಇಡೀ ಪಾಕ್ ಹಾಗೂ ಮುಸ್ಲಿಂ ಜಗತ್ತು ಸಂಪೂರ್ಣ ದುಃಖದಲ್ಲಿದೆ. ಹಾಗಾಗಿ ಪಾಕಿಸ್ತಾನದಲ್ಲಿ ಹೊಸ ವರ್ಷಕ್ಕೆ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಯುವುದಿಲ್ಲ. ಮಾಡ ಕೂಡದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.