ಬೆಂಗಳೂರು: ನನ್ನ ಆಯ್ಕೆ ಖರ್ಗೆ.. ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಬೇಕು. ಇದು ನನ್ನ ಚಾಯ್ಸ್ ಅಷ್ಟೇ ಎಂದು ಕಾಂಗ್ರೆಸ್ ನಾಯಕ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಬಂಡಾಯ ಎದ್ದಿದ್ದ ಶಾಸಕರಿಗೆ ವಿಶೇಷ ಹುದ್ದೆಗಳ ಸ್ಥಾನ ಮಾನ ನೀಡಲಾಗಿದೆ. ಇತ್ತ ಪಕ್ಷದ ವಿರುದ್ಧ ಬಹಿರಂಗವಾಗಿ ಹೇಳಿಕೆ ಕೊಡ್ತಿದ್ದ ಬಸವರಾಜ್ ರಾಯರೆಡ್ಡಿ ಅವ್ರನ್ನ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.
ಅಸಮಧಾನ ಇರುವ ಹಿನ್ನಲೆ ಹುದ್ದೆ ಸಿಕ್ಕಿತಾ ಎಂಬ ಪ್ರಶ್ನೆ ಗೆ ನಗರದಲ್ಲಿ ಮಾತನಾಡಿದ ರಾಯರೆಡ್ಡಿ, ಅಸಮಧಾನದ ಪ್ರಶ್ನೆ ಇಲ್ಲ. ಮಂತ್ರಿಪೋಸ್ಟ್ ಕೊಡಿ ಅಂತ ನಾನು ಸಿಎಂನೂ ಕೇಳಿಲ್ಲ. ಸಿಎಂ, ಪಕ್ಷದ ವರಿಷ್ಠರು ತೀರ್ಮಾನ ಮಾಡಿ ನೀಡಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಆರ್ಥಿಕ ಸಲಹೆಗಾರ ಸ್ಥಾನ ಕೊಟ್ಟಿದ್ದಾರೆ. ಬಹಳ ದೊಡ್ಡ ಚಾಲೆಂಜಿಂಗ್ ಜಾಬ್ ಇದು. ಸುಮ್ಮನೆ ಕಾರು, ಬೇರೆ ಫೆಸಿಲಿಟಿಗಾಗಿ ತಗೊಂಡಿಲ್ಲ. ನಂದೇ ಆದ ಐಡಿಯಾಸ್ ಇದೆ. ಸಿಎಂ ಕೂಡ ಎಕ್ಸ್ ಪರ್ಟ್ ಇದ್ದಾರೆ, ಅವ್ರ ಜೊತೆ ಕೆಲಸ ಮಾಡ್ತೇನೆ. ಪಾಲಿಟಿಕ್ಸ್ ನಲ್ಲಿ ಸೀನಿಯರ್, ಜೂನಿಯರ್ ಅಂತ ಇಲ್ಲ. ಇದು ಜಾಬ್ ಅಲ್ಲ, ಸಾಮಾಜಿಕ ಸೇವೆ. ಅಸಮಧಾನ ಆಗಿದ್ದೀನಿ ಅನ್ನೋದ್ರಲ್ಲಿ ಅರ್ಥ ಇಲ್ಲ. ಈಗ ರಾಜಕಾರಣ ಒತ್ತಡದ ಮೇಲೆ ನಡೀತಾ ಇದೆ. ಜಾತಿ ಎಲ್ಲಾ ನೋಡಿಕೊಂಡು ಮಂತ್ರಿಮಂಡಲ ಮಾಡ್ತಾರೆ. ನಾನು ಸ್ಯಾಲರಿ ತಗೊಳ್ಳಲ್ಲ, ಎಂಎಲ್ ಎ ಆಗಿದ್ದಾಗಲೂ ಸ್ಯಾಲರಿ ತಗೊಂಡಿಲ್ಲ. ಮೊದಲಿನಿಂದಲೂ ಈ ಪದ್ದತಿಯಿಂದಲೇ ಬಂದಿದ್ದೀನಿ ಎಂದರು.

ಇದೇ ವೇಳೆ ರಾಹುಲ್ ಗಾಂಧಿ ಪಿಎಂ ಆಗಬೇಕೆಂದು ಸಿಎಂ ಹೇಳಿಕೆ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ
ಬಸವರಾಜ ರಾಯರೆಡ್ಡಿ,ಅವರವರ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೆಯೂ ನಾನು ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಬೇಕು ಅಂತ ಹೇಳಿದ್ದೀನಿ.
ನನ್ನ ಚಾಯ್ಸ್ ಖರ್ಗೆ ಅಂತ ಹೇಳಿದ್ದೀನಿ. 40 ವರ್ಷಗಳ ರಾಜಕೀಯ ಅನುಭವ ಖರ್ಗೆಯವರಿಗೆ ಇದೆ. ಪ್ರಧಾನಿ ಆದ್ರೆ ಒಳ್ಳೇದು ಅಂಥ ಹೇಳಿದ್ದೇವೆ . ಹೈಕಮಾಂಡ್ ಕೇಳಿದ್ರೂ ವೈಯಕ್ತಿಕವಾಗಿ ಖರ್ಗೆ ಹೆಸರು ಹೇಳ್ತೀನಿ. ರಾಹುಲ್ ಗಾಂಧಿ ಕೂಡ ನಮ್ಮ ಲೀಡರ್ ಅವ್ರು ಅಭ್ಯರ್ಥಿಯಾದ್ರೂ ನನಗೆ ಸಂತೋಷ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತೆ ಎಂದು ಹೇಳಿದರು.
ಇನ್ನು ವಿಶ್ವದ ದೊಡ್ಡ ಆರ್ಥಿಕ ತಜ್ಞರಾ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರದ ಕುರಿತು ಮಾತನಾಡಿದ ರಾಯರೆಡ್ಡಿ, ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಅವರಿಗ್ಯಾಕೆ ಬೇಕು, ನನ್ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ. ನನಗೆ ಏನ್ ಗೊತ್ತಿದ್ಯೋ ಮಾತಾಡ್ತೀನಿ, ಅವ್ರಿಗೇನ್ ಗೊತ್ತಿದ್ಯೋ ಮಾತಾಡಲಿ. ಹಾಗಾದ್ರೆ ಇವ್ರೇನು ದೊಡ್ಡ ಆರ್ಥಿಕ ತಜ್ಞರಾ..? ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.




