ಬೆಂಗಳೂರು: ನಾನು ಕಾಂಗ್ರೆಸ್ ನವರಿಂದ ಸೋತಿಲ್ಲ. ನನ್ನ ಸೋಲಿಗೆ ಯಾರು ಕಾರಣವೋ ಅವರನ್ನ ಕೂರಿಸಿ ಮಾತುಕತೆ ನಡೆಸಲಿ. ನನಗೆ ನೇರವಾಗಿ ತೊಂದರೆ ಆಗಿದೆ ಎಂದು
ಮಾಜಿ ಸಚಿವ ವಿ ಸೋಮಣ್ಣ ಮತ್ತೊಮ್ಮೆ ಬಹಿರಂಗವಾಗಿ ಮಾತನಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನನಗೆ ನನ್ನದೇ ಆದ ಬದ್ಧತೆ ಇದೆ. ಸೋಮಣ್ಣ ನಿಂತ ನೀರಲ್ಲ.. ಹರಿಯುವ ನೀರು..ಯಾರೋ ಏನಾದ್ರೂ ಮಾಠ ಮಂತ್ರ ಮಾಡಿಸಿದರೋ ಏನೋ.. ಹೀಗಾಯ್ತು.. ನನಗಾದ ನೋವು ಇನ್ಯಾರಿಗೋ ಆಗಿದ್ರೆ ಮತ್ತೆ ವಾಪಸ್ ಬರ್ತಿರಲಿಲ್ಲ. ನಾನು ಕಾಂಗ್ರೆಸ್ ನವರಿಂದ ಸೋತಿಲ್ಲ..
ನನ್ನ ನೋವನ್ನ ಹೈಕಮಾಂಡ್ ನಾಯಕರ ಬಳಿ ಹೇಳಿದ್ದೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನ ಕರೆಸಿ ಸೂಚನೆ ಕೊಡಿಸಬೇಕು..7/8 ರಂದು ದೆಹಲಿಗೆ ಹೋಗಬಹುದು. ಬಹುಶಃ 10 ನೇ ತಾರೀಖಿನೊಳಗೆ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಗೆ ಸ್ಪರ್ಧೆ ವದಂತಿ ವಿಚಾರದ ಕುರಿತು ಮಾತನಾಡಿದ ಅವರು, ಇವತ್ತು ಪತ್ರಿಕೆಯಲ್ಲಿ ಸೋಮಣ್ಣ ಕಾಂಗ್ರೆಸ್ ಸೇರ್ತಾರೆ ಅಂತ ಬರೆದಿದ್ದಾರೆ. ನಾನು ಯಾರತ್ರನೂ ಹೋಗಿ ಕೇಳಿಲ್ಲ…ಹೈಕಮಾಂಡ್ ನಾಯಕರು ಎರಡು ಬಾರಿ ಕರೆದ್ರು.. ನಾನೇ ಹೋಗಿಲ್ಲ. ಕೆಲವರ ಸಮ್ಮುಖದಲ್ಲಿ ಚರ್ಚೆ ನಡೆಸುವಂತೆ ಕೇಳಿದ್ದೇನೆ. 6 ಅಥವಾ 7 ನೇ ತಾರೀಖಿನ ನಂತರ ಕರೆದರೆ ಹೋಗ್ತೇನೆ.ನಾನು ಕಾಂಗ್ರೆಸ್ ಅಭ್ಯರ್ಥಿ ಅಲ್ಲ ಎಂದು ಕಾರ್ಯಕರ್ತರಿಗೆ ಸೋಮಣ್ಣ ಸ್ಪಷ್ಟನೆ ನೀಡಿದರು.
ರಾಮಮಂದಿರ ಉದ್ಘಾಟನೆ ವಿಚಾರದ ಕುರಿತು ಮಾತನಾಡಿದ ಅವರು, 500 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಸಾಕಾರವಾಗಿದೆ. ನಿನ್ನೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ.
ವೈಯಕ್ತಿಕ ವಾಗಿ ಮೋದಿ ಅವರಿಗೆ ಅಭಿನಂದನೆ. ರಾಮಜನ್ಮಭೂಮಿ ಅನ್ನೋದು ಬರೀ ಹೇಳುವಂತದ್ದಲ್ಲ.
ಭಾರತಕ್ಕೆ ಭವಿಷ್ಯ ಇದೆ. ಯಾರ್ಯಾರು ಎಲ್ಲೆಲ್ಲಿ ಜನಿಸ್ತಾರೋ ಗೊತ್ತಿಲ್ಲ. ಮೋದಿ ಬರ್ತಾರೆ,ರಾಮಮಂದಿರ ಮಾಡ್ತಾರೆ ಅಂತಾ ಯಾರೂ ಅಂದುಕೊಂಡಿರಲಿಲ್ಲ. ರಾಮಮಂದಿರ ವಿರೋಧಿಸಿ ಅರ್ಜಿಕೊಟ್ಟವರೇ ಇವತ್ತು ರಾಮಮಂದಿರ ಉದ್ಘಾಟನೆಗೆ ಬರ್ತಿದ್ದಾರೆ ಎಂದು ಟೀಕಿಸಿದರು.