ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಚಿತ್ರ ನಿರೀಕ್ಷೆಗೂ ಮೀರಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸ್ತಿದೆ.
ಕ್ಲಾಸ್, ಮಾಸ್ ಲುಕ್ ಬಿಟ್ಟು, ಪಂಚೆ ತೊಟ್ಟು, ಭೂ ಸುಧಾರಣಾ ಕಾಯ್ದೆಯನ್ನು ಎಳೆಯಾಗಿಟ್ಟುಕೊಂಡು ದಬ್ಬಾಳಿಕೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಹೆಣೆದ ‘ಕಾಟೇರ’ ಚಿತ್ರದ ಕಥೆಯನ್ನ ಹೇಳ್ತಿರೋ ದಾಸನ ಮೇಲಿನ ಕ್ರೇಸ್ ಕಡಿಮೆ ಆಗಿಲ್ಲ..!

ರಾಕ್‌ಲೈನ್ ವೆಂಕಟೇಶ್ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಭರ್ಜರಿ ಪ್ರದರ್ಶನ ಕಾಣ್ತಿದೆ.
ಶುಕ್ರವಾರ ರಾತ್ರಿಯೇ ಶುರುವಾದ ‘ಕಾಟೇರ’ನ ಆರ್ಭಟ ಇನ್ನು ಕಮ್ಮಿ ಆಗಿಲ್ಲ. ಅಬ್ಬರದ ಹೀರೋ ಎಂಟ್ರಿಯಾಗಲಿ, ಆತನಿಗೊಂದು ಹಾಡಾಗಲಿ, ಹಾರುವ ರೌಡಿಗಳು ಇಲ್ಲಿಲ್ಲ. ಕಥೆಯೇ ಚಿತ್ರದ ಜೀವಾಳ. ಕಥೆಗೆ ತಕ್ಕಂತೆ ದರ್ಶನ್ ಇಲ್ಲಿ ಮಾಗಿದ್ದಾರೆ. ರಾಜ್ಯಗಳಲ್ಲಿ ಸಧ್ಯ ಸದ್ದು ಮಾಡ್ತಿರುವ ಕಾಟೇರ ಅದಾಗಲೇ ಸಿನಿಮಾ ಹೊರ ದೇಶಗಳಿಗೂ ಹೊರಟು ನಿಂತಿದ್ದು, ಚಿತ್ರದ ಕಲೆಕ್ಷನ್ ಬಗ್ಗೆ ಸೋಷಿಯಲ್ ಮೀಡಿಯಾ ದಲ್ಲಿ ಚರ್ಚೆ ಶುರುವಾಗಿದೆ.
ಕಾಟೇರಗೆ ಜನ ಹರಿದು ಬರ್ತಿರೋದನ್ನ ಅಂದಾಜಿಸಿದ ಕೆಲ ಚರ್ಚೆಗಳನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಳ್ಳಿ ಹಾಕಿದ್ದಾರೆ. ಕಾಟೇರ ಚಿತ್ರ ಫಸ್ಟ್ ವೀಕೆಂಡ್‌ನಲ್ಲಿ 58 ಕೋಟಿ 8 ಲಕ್ಷ ರೂ. ಗಳಿಕೆ ಕಂಡಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ರಾಕ್ ಲೈನ್, ಅಷ್ಟೆಲ್ಲಾ ಕಲೆಕ್ಷನ್ ಕಂಡಿಲ್ಲ. ಅದೆಲ್ಲಾ ಸುಳ್ಳು ಎಂದಿದ್ದಾರೆ.

ಈ ಕುರಿತು ಖಾಸಗಿ ಚಾನಲ್ ಜೊತೆಗೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್, ಫ್ರಾಂಕ್ ಆಗಿ ಹೇಳ್ತೀನಿ, ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ. ಈಗ 30 ಕೋಟಿ, 15 ಕೋಟಿ, 20 ಕೋಟಿ ಆಗಿದ್ಯಾ ಅನ್ನೋದು ನನಗೂ ಗೊತ್ತಿಲ್ಲ..! ಎಂದಿದ್ದಾರೆ.

ನಾನು ಯಾವಾಗಲೂ ನನ್ನ ಬ್ಯಾನರ್‌ನಲ್ಲಿ ಇಷ್ಟು ಬಜೆಟ್ ಆಯ್ತು, ಇಷ್ಟು ಕಲೆಕ್ಷನ್ ಆಯ್ತು ಅಂತ ನಾನು ಯಾವತ್ತೂ ಹೇಳ್ಕೊಂಡಿಲ್ಲ. ಎಲ್ಲಾ ಸಿನಿಮಾಗಳಿಗಿಂತ ಕಲೆಕ್ಷನ್ ಚೆನ್ನಾಗಿದೆ. ಪರಭಾಷಾ ಸಿನಿಮಾಗಳು ಬಿಡುಗಡೆ ಆಗಿದ್ದರೂ ಕೂಡ ಎಲ್ಲದ್ದಕ್ಕಿಂತ ಅದ್ಭುತ ಕಲೆಕ್ಷನ್ ಆಗ್ತಿದೆ. ಈ ಬಗ್ಗೆ ನಾನು ಪ್ರೇಕ್ಷಕರಿಗೆ, ಡಿ ಬಾಸ್ ಸೆಲೆಬ್ರೆಟಿಗಳಿಗೆ ಎಲ್ಲರಿಗೂ ಕೃತಜ್ಞ. ಇನ್ನು ನೋಡಬೇಕು. ಇಂತಹ ಸಿನಿಮಾಗಳು ಬಂದಾಗ ಚಿತ್ರಮಂದಿರದಲ್ಲೇ ನೋಡಬೇಕು. ಪೈರಸಿ ನೋಡುವುದರಿಂದ ಚಿತ್ರಕ್ಕೂ ಎಫೆಕ್ಟ್ ಆಗುತ್ತೆ, ನಿಮಗೂ ಒಳ್ಳೆ ಅನುಭವ ಸಿಗಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.




