ಟೋಕಿಯೋ : ಹೊಸ ವರ್ಷದ ಮೊದಲ ದಿನವೇ ಜಪಾನ್ ದೇಶಕ್ಕೆ ಪ್ರಕ್ಡತಿ ಆಘಾತ ನೀಡಿದೆ. ಈಶಾನ್ಯ ಜಪಾನ್ ನಲ್ಲಿ ಸಂಭವಿಸಿದ ಪ್ರಬಲ ಭೂ ಕಂಪನದಿಂದ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರಿಕ್ಟರ್ ಮಾಪನದಲ್ಲಿ 7.4ರಿಂದ 7.6 ರವರೆಗೆ ಭೂಕಂಪನ ಸಂಭವಿಸಿದೆ. ಸುಮಾರು 32 ಸಾವಿರಕ್ಕೂ ಹೆಚ್ಚು ಜನರು ಕಂಪನದಿಂದ ಸಂತ್ರಸ್ಥರಾಗಿದ್ದಾರೆ ಎನ್ನಲಾಗಿದೆ.


ಭೂಕಂಪನದಿಂದ ವಿದ್ಯುತ್ ಪೂರೈಕೆಯಲ್ಲಿ ಸಂಪೂರ್ಣವಾಗಿ ವ್ಯತ್ಯಯವಾಗಿದ್ದು, ಹೊಸ ವರ್ಷವನ್ನು ಸೆಂಟ್ರಲ್ ಜಪಾನ್ ನಾಗರೀಕರು ಕತ್ತಲೆಯಲ್ಲಿ ಕಳೆಯುವಂತಾಗಿತ್ತು.ಜಪಾನ್ ನ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶದಲ್ಲಿ ಭೂ ಕಂಪನ ಸಂಭವಿದೆ. ಸಾವಿರಾರು ಜನರು ಜಪಾನ್ ನ ಮಿಲಿಟರಿ ಬೇಸ್ ನಲ್ಲಿ ಆಶ್ರಯ ಪಡೆದಿದ್ದಾರೆ.

ಸೋಮವಾರ ಕನಿಷ್ಠ ನಾಲ್ಕು ಅಡಿ ಎತ್ತರದ ಅಲೆಗಳು ಜಪಾನ್ ನ ವಾಜಿಮಾ ಬಂದರಿಗೆ ಅಪ್ಪಳಿಸಿವೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ.

ಸುಮಾರು 16 ಅಡಿ ಎತ್ತರದವರೆಗೆ ಅಲೆಗೆಳು ಬರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. 2011ರಲ್ಲಿ ಸಂಭವಿಸಿದ ಭೂಕಂಪನದ ನಂತರದ ಸುನಾಮಿಯಿಂದ 16 ಸಾವಿರ ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.