SHOCK FOR ALCOHOL LOVERS: ಮದ್ಯಪ್ರಿಯರಿಗೆ ಶಾಕ್ ನೀಡಿದ ಉತ್ಪಾದನಾ ಕಂಪನಿಗಳು : ಬಡವರ ಬ್ರ್ಯಾಂಡ್ ಮದ್ಯ ಭಾರೀ ಏರಿಕೆ

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊಸ ವರ್ಷಾಚಾರಣೆಯನ್ನು ಮದ್ಯ ಸೇವಿಸಿ, ರಾಜ್ಯ ಸರ್ಕಾರಕ್ಕೆ ಭರ್ಜರಿಯಾಗಿ ಆದಾಯ ನೀಡಿತ್ತು. ಆದರೆ, ಇಂದು ಬಡವರು ಕುಡಿಯುವ ಮದ್ಯದ ದರದಲ್ಲಿ ಮದ್ಯ ಉತ್ಪಾದನಾ ಕಂಪನಿಗಳು ಭಾರೀ ಏರಿಕೆ ಮಾಡಿ ಶಾಕ್ ನೀಡಿದೆ.
ಬಡವರ ನೆಚ್ಚಿನ‌ ಕೆಲ ಬ್ರಾಂಡ್ ಗಳ ದರ ಹೆಚ್ಚು ಮಾಡಿ ಮದ್ಯಪ್ರೀಯರಿಗೆ ಶಾಕ್ ನೀಡಲಾಗಿದ್ದು, ಇದು ಮಧ್ಯಮ ವರ್ಗದ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಿದಂತಾಗಿದೆ. ಈ ಹಿಂದೆ ಶೇಕಡಾ 17% ರಷ್ಟು ಓವರ್ ಆಲ್ ಮದ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬಡವರ ಕುಡಿಯುವ ಮೂರು ಹಾಟ್ ಫೇವರೇಟ್ ಬ್ರಾಂಡ್ ಗಳ ದರ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ.

ಕ್ವಾಟರ್ ಗೆ 20 ರಿಂದ ಮೂವತ್ತು ರೂಪಾಯಿಯನ್ನು ಮದ್ಯ ಉತ್ವಾದನಾ ಕಂಪನಿಗಳು ಏರಿಸಿದ್ದು, ಇದು ಇಂದಿನಿಂದ ರಾಜ್ಯಾದ್ಯಂತ ಮೂರು ಬ್ರಾಂಡ್ ಗಳ ಮೇಲಿನ ದರ ಹೆಚ್ಚಳವಾಗಿದೆ. ಈಗಾಗಲೇ ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಸಂದೇಶ ಕಳುಹಿಸಿದ್ದ ಮದ್ಯ ತಯಾರಿಕ ಕಂಪನಿಗಳು, ರಾಜ್ಯದ ಕೆಳ ವರ್ಗದ ಜನ ಅತಿ ಹೆಚ್ಚು ಸೇವಿಸುವ ಈ ಮೂರು ಬ್ರಾಂಡ್ ಗಳ ದರ ಏರಿಕೆ ಮಾಡಲಾಗಿದೆ.

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದೆ, ಆದರೆ, ಉತ್ಪಾದನಾ ವೆಚ್ಚ ಅಧಿಕವಾಗಿದೆ, ಈ ಹಿನ್ನೆಲೆಯಲ್ಲಿ ಮದ್ಯದ ಬೆಲೆ ಏರಿಕೆ ಮಾಡಲಾಗಿದೆ ಎಂದು ಮದ್ಯ ಉತ್ವನ್ನ ಕಂಪನಿಗಳ ವಾದವಾಗಿದೆ.

ಇನ್ನೊಂದೆಡೆ, ಇದೇ ರೀತಿಯಲ್ಲಿ ಬೆಲೆ ಏರಿಕೆಯಾಗುತ್ತಾ ಹೋದರೆ, ಮದ್ಯ ಮಾರಾಟದಲ್ಲಿ ಕುಸಿತ ಆಗುತ್ತೆ ಎಂದು ಬಾರ್ ಮಾಲೀಕರು ಹೇಳುತ್ತಿದ್ದಾರೆ. ಈ‌ ಬ್ರಾಂಡ್‌ ಗಳಿಗಿಂತ ಕಡಿಮೆ ರೇಟಿನ ಮದ್ಯಕ್ಕೆ ಮದ್ಯಪ್ರಿಯರು ಶಿಫ್ಟ್ ಆಗುವ ಸಾಧ್ಯತೆಯಿದೆಯಂತೆ‌ ಅಂತಿದ್ದಾರೆ.
ಕೆಲವು ಬ್ರಾಂಡ್ ಗಳ ಮೇಲಿನ (180 ಎಂಎಲ್) ನಿನ್ನೆಯ ದರ 90 ರೂಪಾಯಿ ಇದ್ದುದ್ದು ಇಂದು ಅಂದರೆ ಜನವರಿ 2 ರಿಂದ 111 ರೂಪಾಯಿ ನೀಡಿ ಖರೀದಿಸಬೇಕಾಗಿದೆ.
ಇನ್ನೊಂದು ಬ್ರಾಂಡ್ (180 ಎಂಎಲ್) ಸದ್ಯದ ದರ 110 ರೂಪಾಯಿ ಇದ್ದದ್ದು ಇಂದಿನಿಂದ- 145 ರೂಪಾಯಿ ಪಾವತಿಸಬೇಕಾಗಿದೆ.

More News

You cannot copy content of this page