POSSIBILITY OF INCREASE IN COVID: ಮುಂಬರುವ ದಿನಗಳಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆ: ಎಚ್ಚರ ವಿರಲಿ- ಆತಂಕ, ಭಯ ಬೇಡ: ಸಚಿವ ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು : ರಾಜ್ಯದಲ್ಲಿ ಇಲ್ಲಿಯವರೆಗೆ 10 ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೃತಪಟ್ಟವರಲ್ಲಿ 9 ಜನರು ಕೊವಿಡ್ ಜೊತೆಯಲ್ಲಿ ಬೇರೆ ಬೇರೆ ಕಾಯಿಲೆಗಳನ್ನು ಹೊಂದಿದ್ದರು ಎಂದು ತಿಳಿಸಿದರು.
ದಿನೇ ದಿನೇ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ವೈದ್ಯಕೀಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಮತ್ತು ತಜ್ಞರ ಸಭೆ ನಡೆಸಲಾಯಿತು. 60 ವರ್ಷ ಮೇಲ್ಪಟ್ಟವರು ಸ್ವಲ್ಪ ಜಾಗೃತೆ ವಹಿಸಬೇಕು ಎಂದು ಹೇಳಿದ ಸಚಿವರು, ಕೋವಿಡ್ ಜಾಸ್ತಿಯಾಗುತ್ತಿದೆ ಆದರೆ, ಜನರು ಭಯ ಪಡುವ ಅವಶ್ಯಕತೆಯಿಲ್ಲ ಎಂದರು.

ಆಕ್ಸಿಜನ್, ಬೆಡ್, ಐಸಿಯು ಸೆಂಟರ್ ಗಳ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿದ್ದೇವೆ, ಹಾಗೆಯೇ ಜಿಲ್ಲೆ ಗಳಲ್ಲಿ ಟೆಸ್ಟಿಂಗ್ ಮಾಡುವುದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ, ಕಳೆದ ಬಾರಿ ಆಕ್ಸಿಜನ್ ಕೊರತೆಯಿಂದ ನಡೆದ ಅವಘಡಗಳು ಈ ಬಾರಿ ಆಗಬಾರದು ಎಂಬ ಉದ್ದೇಶದಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೊವಿಡ್ ಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ, ಐಸಿಯುಗೂ ಕೂಡ ವ್ಯವಸ್ಥೆ ಮಾಡಲಾಗಿದೆ, ಜನದಟ್ಟಣೆ ಇರುವ ಕಡೆ ಮಾಸ್ಕ್ ಧರಿಸಬೇಕು, ಆತಂಕ ಪಡಬೇಕಿಲ್ಲ, ಆದರೆ ಎಚ್ಚರಿಕೆ ವಹಿಸಬೇಕು ಅಷ್ಟೇ, ಮುಂದೆ ಕೇಸ್ ಗಳು ಜಾಸ್ತಿ ಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
22 ಮೆಡಿಕಲ್ ಕಾಲೇಜು, 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರ ಜೊತೆ ಮೀಟಿಂಗ್ ಮಾಡಿದ್ದೇವೆ, ಎಲ್ಲಾ ಜಿಲ್ಲೆಗಳಲ್ಲಿ ಟೆಸ್ಟಿಂಗ್, ಮಾಕ್ ಡ್ರಿಲ್ ಮಾಡೋದಕ್ಕೆ ಹೇಳಿದ್ದೇವೆ, ನಮ್ಮಲ್ಲಿರುವ ಫೆಸಲಿಟಿ ಬಗ್ಗೆ ಚರ್ಚೆ ಮಾಡೋದಕ್ಕೆ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.
ಒಮಿಕ್ರಾನ್ ನ ಉಪತಳಿಯ ಸಿವಿಯಾರಿಟಿ ಕಡಿಮೆ ಇದೆ, 60 ವರ್ಷಕ್ಕಿಂತ ಮೇಲ್ಪಟ್ಟವರು ದೀರ್ಘಕಾಲಿಕ ಅರೋಗ್ಯ ಸಮಸ್ಯೆ ಇರುವವರ ಎಚ್ಚರಿಕೆಯಿಂದ ಇರಬೇಕು, ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಪ್ರತ್ಯೇಕ ಆಕ್ಸಿಜನ್ ಬೆಡ್ ಐಸಿಯು ವ್ಯವಸ್ಥೆ ಮಾಡಲಾಗ್ತಿದೆ, ಮ್ಯಾನ್ ಪವರ್ ಗೆ ಪ್ರಪೋಸಲ್ ಕೊಟ್ಟಿದ್ದಾರೆ, ಸುಮಾರು 30 ಸಾವಿರ ವ್ಯಾಕ್ಸಿನ್ ಕೊಟ್ಟಿದ್ದಾರೆ, ಯಾರು ವ್ಯಾಕ್ಸಿನ್ ತೆಗೆದುಕೊಂಡಿಲ್ಲಾ ಅವರು ತೆಗೆದಕೊಳ್ಳಬಹುದು ಎಂದರು.

More News