ಬೆಂಗಳೂರು : ರಾಜ್ಯದಲ್ಲಿ ಯಾವುದೇ ಮದ್ಯದ ದರದಲ್ಲಿ ರಾಜ್ಯ ಸರ್ಕಾರ ಬೆಲೆ ಅಥವಾ ಟ್ಯಾಕ್ಸ್ ಏರಿಕೆ ಮಾಡಿಲ್ಲ ಎಂದು ಸಚಿವ ಆರ್ ಬಿ ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ಯಾಕ್ಸ್ ಏರಿಸಿದರೆ ಮೊದಲೇ ನಿಮಗೆ ಹೇಳುತ್ತೇವೆ ಎಂದು ತಿಳಿಸಿದ ಸಚಿವರು, ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿರಬಹುದು, ನಾವಂತೂ ಏರಿಸಿಲ್ಲ ಎಂದರು.
ಅವರ ಮಾಲು ಅವರ ದರ, ಅವರು ಏರಿಸಿದ್ದಾರೆ ಎಂದು ಹೇಳಿದ ಅವರು, ನಮಗೆ ಅಂದರೆ ಸರ್ಕಾರಕ್ಕೆ ಟ್ಯಾಕ್ಸ್ ಮಾತ್ರ ಕಟ್ಟಬೇಕು. ಆದರೆ ಯಾವುದೇ ರೀತಿಯಲ್ಲಿ ಟ್ಯಾಕ್ಸ್ ನಲ್ಲಿ ಏರಿಕೆ ಮಾಡಿಲ್ಲ, ಹೇಗಿದೆಯೇ ಹಾಗೇ ಇದೆ ಎಂದರು.
ನಮಗೆ ಯಾವುದೇ ಟಾರ್ಗೆಟ್ ಇಲ್ಲ, ಆದಾಯ ನಿರೀಕ್ಷೆ ಇದೆ, ಒಳ್ಳೆಯ ಡ್ರಿಂಕ್ಸ್ ಕೊಡಲಿಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ ಸಚಿವರು, ಬಜೆಟ್ ನಲ್ಲೂ ಟ್ಯಾಕ್ಸ್ ಏರಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇರಲಿಲ್ಲ ಎಂದರು.