Karasevaks Arrest: ರಾಮ ಮಂದಿರ ಉದ್ಘಾಟನೆ ಆಗುವಾಗ ಅರೆಸ್ಟ್ ಮಾಡುವ ಅಗತ್ಯ ಏನಿತ್ತು.?: ಜೋಶಿ ಕಿಡಿ

ಹುಬ್ಬಳ್ಳಿ: ಹಳೇ ಕೇಸ್ ಅಂದರೆ ರಾಮ ಮಂದಿರ ಹೋರಾಟದ ಕೇಸ್ ಹೊರಗೆ ತೆಗೆಯಲು ಸಿಎಂ ಹೇಳಿದ್ದಾರೆ. ರಾಮ ಮಂದಿರ ಉದ್ಘಾಟನೆ ಆಗುವಾಗ ಅರೆಸ್ಟ್ ಮಾಡುವ ಅಗತ್ಯ ಏನಿತ್ತು.? ಎಂದು ಕೇಂದ್ರ ಸಚಿವ ಪ್ರಜ್ಹಾದ್ ಜೋಶಿ ಕಿಡಿ ಕಾರಿದ್ದಾರೆ.

ಅಯೋಧ್ಯೆ ನಿರ್ಮಾಣಕ್ಕೂ ಮೊದಲು ಗಲಭೆಯಲ್ಲಿ ಕಾರಣರಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಈ ಬಗ್ಗೆ
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಮ ಭಕ್ತನ ಬಂಧನ ಸರ್ಕಾರದ ಕುಹಕ, ನೀಚತನ ಎಂದು ಕಿಡಿ ಕಾರಿದ್ದಾರೆ.

ರಾಮ ಮಂದಿರ ನಿರ್ಮಾಣವಾದರೆ ನಿಮಗೇಕೆ ಹೊಟ್ಟೆಕಿಚ್ಚು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರನ್ನು ಕೇಳಿದ್ರೆ, ಕೋರ್ಟ್ ವಾರಂಟ್ ಅಂತ ಸುಳ್ಳು ಹೇಳ್ತಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೀತಾರೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪಡೆಯೋದು ಮಾಡ್ತಾರೆ. ಐಎಸ್‌ಐಎಸ್ ಸರ್ಕಾರ ಅಂತಾ ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಸಲ್ಮಾನರ ತುಷ್ಟೀಕರಣದ ಪರಾಕಾಷ್ಟೆ ಇದು.
ಸಿದ್ದರಾಮಯ್ಯ ಅನಗತ್ಯವಾಗಿ ದ್ವೇಷ, ಅಸೂಯೆ ಹುಟ್ಟು ಹಾಕುತ್ತಿದ್ದಾರೆ. ಇದನ್ನೇ ಮುಂದುವರಿಸ್ತೀವಿ ಅನ್ನೋ ದಾರ್ಷ್ಟ್ಯ ತೋರಿಸ್ತಿದ್ದಾರೆ. ಸಿದ್ದರಾಮಯ್ಯನವರ ಹಿಂದೂ ದ್ವೇಷದ, ಮುಸ್ಲೀಮ್ ತುಷ್ಟೀಕರಣದ ಪರಾಕಾಷ್ಟೆ ಇದು. ನಾವು ಹಿಂದೂ ಕಾರ್ಯಕರ್ತರ ಪರ ವಕೀಲರನ್ನು ಇಟ್ಟಿದ್ದೇವೆ. ಈ ಕೇಸ್ ನಮ್ಮ ಗಮನಕ್ಕೆ ಬಂದಿಲ್ಲ, ಬಂದಿದ್ರೆ ಹಿಂಪಡೀತಾ ಇದ್ವಿ. ರಾಮ ಮಂದಿರ ಉದ್ಘಾಟನೆ ಆಗುವಾಗ ಅರೆಸ್ಟ್ ಮಾಡುವ ಅಗತ್ಯ ಏನಿತ್ತು.?
ಎಂದು ಪ್ರಶ್ನಿಸಿದರು.

ಪೊಲೀಸ್ ಅಧಿಕಾರಿಗಳು ಸನ್‌ಫ್ಲವರ್ ಇದ್ದ ಹಾಗೆ.
ಸರ್ಕಾರ ಅನ್ನೋ ಸೂರ್ಯ ಎತ್ತ ಕಡೆ ತಿರಗ್ತಾನೆ, ಅತ್ತ ಕಡೆ ತಿರಗ್ತಾರೆ. ಎಮ್‌.ಬಿ. ಪಾಟೀಲ್ ಅವರ ಪಕ್ಷದ ಪರಿಸ್ಥಿತಿ ನೋಡಿಕೊಳ್ಳಲಿ. ಕಾಂಗ್ರೆಸ್ ರಾಮನ ಬಗ್ಗೆ ಅವಹೇಳನ ಮಾಡದಿದ್ದರೆ ಈ ಸ್ಥಿತಿ ಬರ್ತಿರಲಿಲ್ಲ. ಕಾಂಗ್ರೆಸ್‌ನವರು ಹುಚ್ಚುಹುಚ್ಚು ತನ ಮಾಡಿ ಈಗ ಮಾತನಾಡ್ತಿದ್ದಾರೆ.
ಸಿದ್ದರಾಮಯ್ಯ ರಾಮ ಭಕ್ತರಾಗಿದ್ದರೆ ಅಯೋಧ್ಯೆಗೆ ಹೋಗಲಿ. ಹಳೇ ಕೇಸ್ ಅಂದರೆ ರಾಮ ಮಂದಿರ ಹೋರಾಟದ ಕೇಸ್ ಹೊರಗೆ ತೆಗೆಯಲು ಸಿಎಮ್ ಹೇಳಿದ್ದಾರೆ. ಇದರ ವಿರುದ್ಧ ನಾಳೆ ಬಿಜೆಪಿಯಿಂದ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

More News