ಅಕ್ರಮ ಆಸ್ತಿ ಗಳಿಕೆ ಪ್ರಕರಣ ಡಿಕೆ ಶಿವಕುಮಾರ್ ರನ್ನ ಬಿಟ್ಟೂ ಬಿಡದಂತೆ ಕಾಡ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೈ ನಾಯಕ ಮನವೊಲಿಸಿ ತಮ್ಮ ಮೇಲಿದ್ದ ಕೇಸ್ ನ್ನ ಸಿಬಿಐನಿಂದ ಲೋಕಾಯುಕ್ತಕ್ಕೆ ರವಾನೆ ಮಾಡಿದ್ರೂ ಸಿಬಿಐ ನೋಡಿಸ್ ಜಾರಿ ಮಾಡಿದೆ.
2017 ರಲ್ಲಿ ಡಿ.ಕೆ.ಶಿವಕುಮಾರ್ ವಾಸ್ತವ್ಯ ಹೂಡಿದ್ದ ಈಗಲ್‌ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖಾಧಿಕಾರಿಗಳು, ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ.ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು.
ಬಳಿಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಲೋಕಾಯುಕ್ತ ತನಿಖೆ ಗೆ ಆದೇಶ ಹೊರಡಿಸಿದೆ. ಈ ಸಂಬಂಧ ಲೋಕಾಯುಕ್ತ ಡಿಜಿಪಿಗೆ ಆದೇಶದ ಪತ್ರವನ್ನು ರಾಜ್ಯ ಸರ್ಕಾರ ರವಾನಿಸಿದೆ. ಈಗಾಗಲೇ ಅಕ್ರಮ ಆಸ್ತಿ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಸರ್ಕಾರದ ಪೂರ್ವಾನುಮತಿ ವಾಪಸ್ಸು ಬಳಿಕ ಲೋಕಾಯುಕ್ತಕ್ಕೆ ಪ್ರಕರಣ ವರ್ಗಾವಣೆಯಾಗಿ, ತನಿಖೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ರೂ ಲೋಕಾಯುಕ್ತ ಪೊಲೀಸರು ಇದುವರೆಗೂ ಎಫ್ಐಆರ್ ದಾಖಲಿಸಿಲ್ಲ.. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿಬಿಐನಿಂದ ಮತ್ತೊಂದು ತನಿಖೆಯ ಶಾಕ್ ಎದುರಾಗಿದೆ.
ಸರ್ಕಾರ ಕೇಸ್ ವಾಪಸ್ ಪಡೆದ ನಂತರ ಸೇಫ್ ಎಂದುಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ಗೆ ಸಿಬಿಐ ಶಾಕ್ ನೀಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಕುಟುಂಬಕ್ಕೆ ಹಾಗೂ ವ್ಯಾವಹಾರಿಕ ಆಪ್ತರಿಗೆ ಸಿಬಿಐ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇತ್ತ ತಮ್ಮ ವಿರುದ್ಧ ಅಕ್ರಮ ಆಸ್ತಿ ಕೇಸ್ ಲೋಕಾಯುಕ್ತ ತನಿಖೆ ವಿಚಾರದ ಕುರಿತು ಬೆಂಗಳೂರಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್, ನನಗೆ ಇನ್ನು ನೋಟಿಸ್ ಬಂದಿಲ್ಲ. ನೋಟಿಸ್ ಬಂದಾಗ ಉತ್ತರ ಕೊಡ್ತೀನಿ ಎಂದರು.




