New Mobile Blast: ಹೊಸ ಮೊಬೈಲ್ ಬ್ಲಾಸ್ಟ್..!: ಯುವಕನ ತೊಡೆಗೆ ಗಾಯ

ಬೆಂಗಳೂರು: ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆದ ಘಟನೆ ಬೆಂಗಳೂರಲ್ಲಿ ನಡೆದಿದೆ.

ವೈಟ್ ಫೀಲ್ಡ್ ನಲ್ಲಿ ವಾಸವಿದ್ದ 24 ವರ್ಷದ ಯುವಕ ಪ್ರಸಾದ್ ಎನ್ನುವವರು ಅಕ್ಟೋಬರ್ ತಿಂಗಳಲ್ಲಿ 1+ ಕಂಪನಿಯ ಮೊಬೈಲ್ ಖರೀದಿಸಿದ್ದಾರೆ. ಬಹಳ ಒಳ್ಳೆಯ ಮೊಬೈಲ್ ಎಂದೆಲ್ಲಾ ಅಡ್ವಟೈಸ್ ಕೊಟ್ಟ ಕಂಪನಿ ಮಾತನ್ನ ನಂಬಿ ಮೊಬೈಲ್ ಕೊಂಡಿದ್ದಾರೆ. ಹೊಸ ಮೊಬೈಲ್ ನ್ನ ಕಿಸೆಯಲ್ಲಿಟ್ಟುಕೊಂಡು ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದೆ.

ಘಟನೆ ಬಗ್ಗೆ ಮೊಬೈಲ್​ ಶೋ ರೂಂ ಗಮನಕ್ಕೆ ಬರುತ್ತಿದ್ದಂತೆ ‘ಈಗ ಮೆಡಿಕಲ್ ವೆಚ್ಚದ ಜೊತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಇತ್ತ ಸರ್ಜರಿಗೆ ಬರೋಬ್ಬರಿ 4 ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸಮಸ್ಯೆ ಹೇಳಿಕೊಳ್ಳಲು ಮೊಬೈಲ್ ಸೆಂಟರ್​ಗೆ ಹೋದ್ರೆ ಸರಿಯಾಗಿ ಸ್ಪಂದಿಸದ ಆರೋಪ ಕೂಡ ಕೇಳಿಬಂದಿದೆ.

ವೈಟ್ ಫೀಲ್ಡ್ ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಪ್ರಸಾದ್ ಗೆ ಮೊಬೈಲ್ ಬ್ಲಾಸ್ಟ್ ನಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲಸ ಇಲ್ಲದೇ ರೆಸ್ಟ್ ಮಾಡಿದ್ರೆ ಹಣ ಯಾರು ಕೊಡ್ತಾರೆ ಅಂತಾ ಪ್ರಶ್ನೆ ಎದುರಾಗಿದ್ದು, ಕಂಪನಿಯವರು ಸಂಪೂರ್ಣ ವೆಚ್ಚ ಭರಿಸಬೇಕು ಅಂತಾ ಆಗ್ರಹಿಸಿದ್ದಾರೆ.

More News