ವಿಜಯಪುರ: ವಿಜಯಪುರ ತಾಲ್ಲೂಕಿನ ದ್ಯಾಬೇರಿ ಗ್ರಾಮದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಅದರಲ್ಲಿ ವಾಗ್ದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆದರೆ, ಎಲ್ಲಾ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಅವರು ಉದ್ಘಾಟಿಸಿದರು. ಆದರೆ, ದೇಗುಲದ ಗರ್ಭಗುಡಿ ಪ್ರವೇಶ ಮಾಡಲು ಅವರು ನಿರಾಕರಿಸಿದರು. ದೇವಸ್ಥಾನದ ಪ್ರಾಂಗಾಣದಲ್ಲೇ ನಿಂತು ವಾಗ್ದೇವಿಯ ದರ್ಶನ ಪಡೆದರು.

ಗರ್ಭಗುಡಿಯ ಒಳಗೆ ಬರಲು ಅರ್ಚಕರು ಮುಖ್ಯಮಂತ್ರಿ ಅವರನ್ನು ಕೋರಿದರು. ಆದರೆ, ಅವರು ಗರ್ಭಗುಡಿಯ ಎದುರಿನ ಚಿಕ್ಕ ಪ್ರವೇಶ ದ್ವಾರದಲ್ಲೇ ನಿಂತು ದೇವರಿಗೆ ಕೈಮುಗಿದರು. ಪಕ್ಕದಲ್ಲಿಯೇ ಇದ್ದ ಸಚಿವ ಎಂ ಬಿ ಪಾಟೀಲರನ್ನು ಗರ್ಭಗುಡಿ ಒಳಗೆ ಕಳುಹಿಸಿದರು. ಅವರು ಗರ್ಭಗುಡಿಯಿಂದ ಒಳಗೆ ಬರುವಂತೆ ಮನವಿ ಮಾಡಿದರೂ ನೀವೇ ಪೂಜೆ ಮಾಡಿ ಎಂದು ಕೈ ಸನ್ನೆ ಮಾಡಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಸಂತೋಷದಿಂದ ದೇವಸ್ಥಾನದ ಉದ್ಘಾಟಿಸಿದ್ದೇನೆ, ದೇವಿ ನಾಡಿಗೆ ಒಳ್ಳೆಯದನ್ನು ಮಾಡಲಿ ಎಂದರು. ಮುಖ್ಯಮಂತ್ರಿ ಅವರು ಗರ್ಭಗುಡಿ ಪ್ರವೇಶ ಮಾಡದೇ ಇರುವುದನ್ನು ಅಪಾರ್ಥ ಕಲ್ಪಿಸುವುದು ಬೇಡ ಎಂದು ಎಂಬಿ ಪಾಟೀಲರು ಹೇಳಿದ್ದಾರೆ.




