ONE MAN SHOW ON RAM MANDHIR INNUGURATION: ನಾನು ಅಥವಾ ನನ್ನ ಕುಟುಂಬದಿಂದ ಲೋಕಸಭೆಗೆ ಸ್ಪರ್ಧಿಸಲ್ಲ: ರಾಮಮಂದಿರ ಉದ್ಘಾಟನೆ ಒನ್ ಮ್ಯಾನ್ ಶೋ ಆಗುತ್ತಿದೆ: ಸಚಿವ ಜಾರಕಿಹೊಳಿ ಕಿಡಿ
ಬೆಂಗಳೂರು : ಜನ ಸಾಮಾನ್ಯರ ಸಮಸ್ಯೆಗಳ ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸಲಿ, ಅದನ್ನು ಬಿಟ್ಟು ಪ್ರಕರಣಗಳಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಕು ಚೆಲ್ಲಲು ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ವಿಷಯಗಳಿವೆ, ಅದನ್ನು ಬಿಟ್ಟು ಆರೋಪಿ ಪರ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ, ಕರ ಸೇವಕ ಎಂದು ಅವರು ನ್ಯಾಯಾಲಯದಲ್ಲಿ ಸಾಬೀತುಪಡಿಸಿಕೊಳ್ಳಬೇಕು ಅಲ್ಲವಾ ಎಂದು ಪ್ರಶ್ನಿಸಿದರು ಹಳೇ ಕೇಸ್ ಗಳಿವೆ ಎಂದು ಪೋಲಿಸರು ಬಂಧಿಸಿದ್ದಾರೆ, ಗೊಂದಲ ಮಾಡುವ ಅವಶ್ಯಕತೆ ಇಲ್ಲ, ಅದು ಬಿಟ್ಟು ಸರಿಯಾದ ರೀತಿಯಲ್ಲಿ ಇದ್ದರೆ ಪ್ರತಿಭಟನೆ ನಡೆಸಲಿ ಎಂದು ಆಗ್ರಹಿಸಿದರು. ನಾನು ಅಥವಾ ನನ್ನ ಕುಟುಂಬದಿಂದ ಸ್ಪರ್ಧೆ ಮಾಡಲ್ಲ
ನಾನು ಬೆಳಗಾವಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಅಲ್ಲ, ನಮ್ಮ ಕುಟುಂಬದಿಂದಲೂ ಯಾರು ಸ್ಪರ್ಧೆ ಮಾಡುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಒಂದು ವೇಳೆ ಸಚಿವರೇ ಸ್ಪರ್ಧೆ ಮಾಡಬೇಕು ಅಂತ ಹೈಕಮಾಂಡ್ ನಿರ್ಧಾರ ತೆಗೆದುಕೊಂಡ್ರೆ ಆವಾಗ ನೋಡೋಣ ಎಂದು ತಿಳಿಸಿದರು. ಈ ಬಾರಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟ್ ಕೊಡುವಂತೆ ಹೇಳಿದ್ದೇವೆ, ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಕ್ಷೇತ್ರಗಳಿಗೂ ಸಾಮಾನ್ಯ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ, ಅದೇ ರೀತಿಯಲ್ಲಿ ನಿಗಮ ಮಂಡಳಿ ಫೈನಲ್ ಆಗಬೇಕು, ಇದು ಬಹಳ ದಿನಗಳಿಂದ ಚರ್ಚೆ ಆಗುತ್ತಿದೆ, ಶೀಘ್ರದಲ್ಲೇ ಆಗಬಹುದು ಎಂದರು. ರಾಮಮಂದಿರ ಉದ್ಘಾಟನೆ ಒನ್ ಮ್ಯಾನ್ ಶೋ ಅಯೋಧ್ಯೆಯಲ್ಲಿನ ರಾಮಮಂದಿರ ಉದ್ಘಾಟನೆ ಒನ್ ಮ್ಯಾನ್ ಶೋ ಆಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ ಸಚಿವರು, ಲೋಕಸಭಾ ಚುನಾವಣೆ ಬೇರೆ ಬರುತ್ತಿದೆ, ಎಲ್ಲ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು, ಇನ್ನೂ ಸಮಯ ಇದೆ ಆಹ್ವಾನ ನೀಡಲಿದ್ದಾರೆ ಎಂಬ ಆಶಾಭಾವ ವ್ಯಕ್ತಪಡಿಸಿದರು. ಯಾವ ಸಿಎಂಗೂ ಆಹ್ವಾನ ಕೊಟ್ಟಿಲ್ಲ, ಉತ್ತರ ಪ್ರದೇಶ ಸಿಎಂಗೆ ಮಾತ್ರ ಆಹ್ವಾನ ಇದೆ, ನನಗೆ ಆಹ್ವಾನ ಬಂದ್ರೆ ಎನು ಮಾಡುತ್ತೀರಾ ಎಂಬ ಪ್ರಶ್ನೆಗೆ, ನಮ್ಮ ಊರಿನಲ್ಲಿ ರಾಮಮಂದಿರ ಇದೆ, ಅಲ್ಲೆ ಪೂಜೆ ಮಾಡುತ್ತೇನೆ, ಸದ್ಯ ರಶ್ ಇರುತ್ತೆ, ಮುಂದೆ ಯಾವಾಗದ್ರು ಹೋಗೊಣ ಎಂದರು.
ONE MAN SHOW ON RAM MANDHIR INNUGURATION: ನಾನು ಅಥವಾ ನನ್ನ ಕುಟುಂಬದಿಂದ ಲೋಕಸಭೆಗೆ ಸ್ಪರ್ಧಿಸಲ್ಲ: ರಾಮಮಂದಿರ ಉದ್ಘಾಟನೆ ಒನ್ ಮ್ಯಾನ್ ಶೋ ಆಗುತ್ತಿದೆ: ಸಚಿವ ಜಾರಕಿಹೊಳಿ ಕಿಡಿ
ಬೆಂಗಳೂರು : ಜನ ಸಾಮಾನ್ಯರ ಸಮಸ್ಯೆಗಳ ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸಲಿ, ಅದನ್ನು ಬಿಟ್ಟು ಪ್ರಕರಣಗಳಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಕು ಚೆಲ್ಲಲು ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ವಿಷಯಗಳಿವೆ, ಅದನ್ನು ಬಿಟ್ಟು ಆರೋಪಿ ಪರ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ, ಕರ ಸೇವಕ ಎಂದು ಅವರು ನ್ಯಾಯಾಲಯದಲ್ಲಿ ಸಾಬೀತುಪಡಿಸಿಕೊಳ್ಳಬೇಕು ಅಲ್ಲವಾ ಎಂದು ಪ್ರಶ್ನಿಸಿದರು
ಹಳೇ ಕೇಸ್ ಗಳಿವೆ ಎಂದು ಪೋಲಿಸರು ಬಂಧಿಸಿದ್ದಾರೆ, ಗೊಂದಲ ಮಾಡುವ ಅವಶ್ಯಕತೆ ಇಲ್ಲ, ಅದು ಬಿಟ್ಟು ಸರಿಯಾದ ರೀತಿಯಲ್ಲಿ ಇದ್ದರೆ ಪ್ರತಿಭಟನೆ ನಡೆಸಲಿ ಎಂದು ಆಗ್ರಹಿಸಿದರು.
ನಾನು ಅಥವಾ ನನ್ನ ಕುಟುಂಬದಿಂದ ಸ್ಪರ್ಧೆ ಮಾಡಲ್ಲ
ನಾನು ಬೆಳಗಾವಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಅಲ್ಲ, ನಮ್ಮ ಕುಟುಂಬದಿಂದಲೂ ಯಾರು ಸ್ಪರ್ಧೆ ಮಾಡುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಒಂದು ವೇಳೆ ಸಚಿವರೇ ಸ್ಪರ್ಧೆ ಮಾಡಬೇಕು ಅಂತ ಹೈಕಮಾಂಡ್ ನಿರ್ಧಾರ ತೆಗೆದುಕೊಂಡ್ರೆ ಆವಾಗ ನೋಡೋಣ ಎಂದು ತಿಳಿಸಿದರು.
ಈ ಬಾರಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟ್ ಕೊಡುವಂತೆ ಹೇಳಿದ್ದೇವೆ, ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಕ್ಷೇತ್ರಗಳಿಗೂ ಸಾಮಾನ್ಯ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ, ಅದೇ ರೀತಿಯಲ್ಲಿ ನಿಗಮ ಮಂಡಳಿ ಫೈನಲ್ ಆಗಬೇಕು, ಇದು ಬಹಳ ದಿನಗಳಿಂದ ಚರ್ಚೆ ಆಗುತ್ತಿದೆ, ಶೀಘ್ರದಲ್ಲೇ ಆಗಬಹುದು ಎಂದರು.
ರಾಮಮಂದಿರ ಉದ್ಘಾಟನೆ ಒನ್ ಮ್ಯಾನ್ ಶೋ
ಅಯೋಧ್ಯೆಯಲ್ಲಿನ ರಾಮಮಂದಿರ ಉದ್ಘಾಟನೆ ಒನ್ ಮ್ಯಾನ್ ಶೋ ಆಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ ಸಚಿವರು, ಲೋಕಸಭಾ ಚುನಾವಣೆ ಬೇರೆ ಬರುತ್ತಿದೆ, ಎಲ್ಲ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು, ಇನ್ನೂ ಸಮಯ ಇದೆ ಆಹ್ವಾನ ನೀಡಲಿದ್ದಾರೆ ಎಂಬ ಆಶಾಭಾವ ವ್ಯಕ್ತಪಡಿಸಿದರು.
ಯಾವ ಸಿಎಂಗೂ ಆಹ್ವಾನ ಕೊಟ್ಟಿಲ್ಲ, ಉತ್ತರ ಪ್ರದೇಶ ಸಿಎಂಗೆ ಮಾತ್ರ ಆಹ್ವಾನ ಇದೆ, ನನಗೆ ಆಹ್ವಾನ ಬಂದ್ರೆ ಎನು ಮಾಡುತ್ತೀರಾ ಎಂಬ ಪ್ರಶ್ನೆಗೆ, ನಮ್ಮ ಊರಿನಲ್ಲಿ ರಾಮಮಂದಿರ ಇದೆ, ಅಲ್ಲೆ ಪೂಜೆ ಮಾಡುತ್ತೇನೆ, ಸದ್ಯ ರಶ್ ಇರುತ್ತೆ, ಮುಂದೆ ಯಾವಾಗದ್ರು ಹೋಗೊಣ ಎಂದರು.
More News
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು? ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಇದೇ ಮಾರ್ಚ್ 9 ರಿಂದ ಜೀ಼ ಕನ್ನಡ ವಾಹಿನಿಯಲ್ಲಿ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಬೇಟಿ ಮಾಡಿದ ಸಚಿವರ ನಿಯೋಗ
ಜಿಯೋ ಹಾಟ್ಸ್ಟಾರ್ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ “ಕ್ಷೇತ್ರಪತಿ”
ʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು?
ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಹಾಗು ಎಂಎಲ್ಸಿ ಜಕ್ಕಪ್ಪನವರ ನಡುವೆ ವಾಗ್ವಾದ