ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರತ್ಯಕ್ಷರಾಗಿದ್ದಾರೆ. ನಮ್ಮ ಮೆಟ್ರೋ ಸಮಸ್ಯೆ ಕುರಿತಾಗಿ ಸುದ್ದಿಗೋಷ್ಠಿ ನಡೆಸುವುದರ ಮೂಲಕ ಪ್ರತ್ಯಕ್ಷರಾಗಿದ್ದಾರೆ.
ನಮ್ಮ ಮೆಟ್ರೋಗೆ ಪೂರ್ಣಾವಧಿ ಎಂಡಿಯಿಲ್ಲ, ಆದ್ದರಿಂದ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಎಂಡಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದ್ದಾಗಲೂ ಪೂರ್ಣಾವಧಿ ಎಂಡಿ ಇರಲಿಲ್ಲ ಎನ್ನುವುದು ಕಟುಸತ್ಯ.
ಈ ಸರ್ಕಾರ ಅಧಿಕಾರ ಬಂದು 7 ತಿಂಗಳಾದ್ರು ಮೆಟ್ರೋಗೆ ಪೂರ್ಣವಾಧಿ ಎಂಡಿ ನೇಮಕವಾಗಿಲ್ಲ, ಬೆಂಗಳೂರು ಮೆಟ್ರೋ ಕಾಮಗಾರಿ ಇದರಿಂದಲೇ ತಡವಾಗುತ್ತಿದೆ ಎನ್ನುವುದು ತೇಜಸ್ವಿ ಸೂರ್ಯ ಅವರ ವಾದವಾಗಿದೆ.
ನೇರಳೆ ಮಾರ್ಗದಲ್ಲಿ ಫೀಕ್ ಹಾವರ್ ನಲ್ಲಿ ನಿಲ್ಲಲು ಸರಿಯಾದ ಜಾಗ ಸಿಗಲ್ಲ, ಮೆಟ್ರೋ ಹೊಣೆ ಹೊತ್ತಿರುವ ಎಂಡಿಗೆ ಎರಡ್ಮೂರು ಹೆಚ್ಚುವರಿ ಹುದ್ದೆ ನೀಡಲಾಗಿದೆ, ಒಂದು ವರ್ಷದಿಂದ ಸರಿಯಾದ ನಾಯಕನಿಲ್ಲದೆ ನಮ್ಮ ಮೆಟ್ರೋ ಅನಾಥವಾಗಿದೆ ಎಂಬ ಕಟು ಸತ್ಯವನ್ನು ಅವರು ಒಪ್ಪಿಕೊಂಡರು.
ಬಿಎಂಆರ್ ಸಿಎಲ್ ಗೆ ತನ್ನದೇ ಆದ ಒಂದು ಸರಿಯಾದ ಕಟ್ಟಡ ಕೂಡ ಇಲ್ಲ, ಬಿಎಂಆರ್ ಸಿಎಲ್ ನಲ್ಲಿ ಒಬ್ಬ ಎಂಡಿ ನಿವೃತ್ತಿಯಾದ ನಂತರ ಮತ್ತೊಂದು ಎಂಡಿ ನೇಮಕ್ಕೆ ಪ್ಲಾನ್ ಇಲ್ಲ, ಮೆಟ್ರೋದಲ್ಲಿ ಕೆಲಸ ಮಾಡುವ ಶೇಕಡಾ 90 ಪರ್ಸೆಂಟ್ ಉದ್ಯೋಗಿಗಳು ಗುತ್ತಿಗೆ ನೌಕರರು, ಸರ್ಕಾರ ಇಷ್ಟೊಂದು ನಿರ್ಲಕ್ಷ್ಯ ಮಾಡ್ತಾ ಇದೆ ಎಂದು ಹಿಂದಿನ ಬಿಜೆಪಿ ಸರ್ಕಾರ ಸೇರಿದಂತೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ಮೆಟ್ರೋ ಒಂತರಹ ವೃದ್ಧಾಶ್ರಮ ಆಗಿದೆ
ಬೆಂಗಳೂರು ಮೆಟ್ರೋ ಒಂತರಹ ವೃದ್ಧಾಶ್ರಮ ಆಗಿದೆ ಎಂದು ಮೆಟ್ರೋ ವ್ಯವಸ್ಥೆ ಕುರಿತು ಕಿಡಿಕಾರಿದ ಅವರು, ಬಹುತೇಕ ಉದ್ಯೋಗಿಗಳು ಬೇರೆ ಇಲಾಖೆಯಲ್ಲಿ ನಿವೃತ್ತಿಯಾಗಿ ಇಲ್ಲಿ ಸೇರಿದ್ದಾರೆ, ನಾನು ಡಿಸಿಎಂ ಭೇಟಿ ಮಾಡಿದ ವೇಳೆ ಪೂರ್ಣಾವಧಿ ಎಂಡಿ ಬಗ್ಗೆ ಕೇಳಿದ್ದೆ, ನಾನು ಕೇಂದ್ರ ಸರ್ಕಾರಕ್ಕೆ ಅಧಿಕಾರಿಯೊಬ್ಬರ ಹೆಸರು ಕಳಿಹಿಸಿದ್ದೆ, ತಿರಸ್ಕಾರ ಮಾಡಿದೆ ಎಂದು ದೂರಿದರು.
ಮೆಟ್ರೋ ಎಂಡಿಯಾಗಲು ಹಲವು ಅರ್ಹತೆ ಇರಬೇಕಾಗುತ್ತದೆ, ಇವರು ಅರ್ಹತೆಯಿಲ್ಲದ ಅಧಿಕಾರಿ ಶಿಪಾರಸ್ಸು ಮಾಡಿದ್ರೆ ಹೇಗೆ ಒಪ್ಪಿಗೆ ಸಿಗುತ್ತೆ ಎಂದು ತೇಜಸ್ವಿ ಸೂರ್ಯ ಅವರು ಕಳುಹಿಸಿದ್ದ ಹೆಸರನ್ನು ಅಂತ್ಯಗೊಳಿಸದೇ ಇರುವುದಕ್ಕೆ ಕಿಡಿಕಾರಿದರು.
ದೆಹಲಿಯಲ್ಲಿ ಒಬ್ಬ ಎಂಡಿ ನಿವೃತ್ತಿಯಾದ್ರೆ, ಆರು ತಿಂಗಳ ಹಿಂದೆಯೇ ಇನ್ನೊಬ್ಬನ್ನ ತಯಾರು ಮಾಡಲಾಗುತ್ತೆ, ನಮ್ಮ ಮೆಟ್ರೋದಲ್ಲಿ ಕೂಡ ಈ ರೀತಿ ಎಂಡಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಗೋದ್ರಾ ಹತ್ಯಾಕಾಂಡ ರೀತಿ ಕರ್ನಾಟಕದಲ್ಲೂ ಆಗಬಹುದು ಎಂಬ ಹೇಳಿಕೆ ಕುರಿತು ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿ, ಬಿ.ಕೆ ಹರಿಪ್ರಸಾದ್ ಈ ರೀತಿ ಬೇಜವವ್ದಾರಿ ಹೇಳಿಕೆ ಕೊಡೋದ್ರಲ್ಲಿ ನಿಸ್ಸೀಮರು ಎಂದು ಹರಿಹಾಯ್ದರು. ನಮಗೆ ಗೊತ್ತಿಲ್ಲದ ಯಾವುದೋ ವಿಷಯ ಅವರಿಗೆ ಗೊತ್ತಿರಬಹುದು, ಪಿಎಸ್ ಜೊತೆ ಒಡನಾಟ ಇದೆ ಎಂದು ವಾಗ್ದಾಳಿ ನಡೆಸಿದರು.