BJP SUPPORTING CRIMINAL: ಬಿಜೆಪಿ ಅಪರಾಧಿಯನ್ನ ಸಪೋರ್ಟ್ ‌ಮಾಡ್ತಿದೆ: ಪರಮೇಶ್ವರ್ ಕಿಡಿ

ಬೆಂಗಳೂರು: ಬಿಜೆಪಿ ಅವರು ಅಪರಾಧಿಯನ್ನ ಸಪೋರ್ಟ್ ‌ಮಾಡ್ತಿದ್ದಾರೆ. 9 ಕೇಸ್ ಸಾರಾಯಿ ಕೇಸ್, ಬೇರೆ ಬೇರೆ ಪ್ರಕರಣದಲ್ಲಿ ಒಟ್ಟು 16 ಕೇಸ್ ಇದೆ. ಆತನಿಗೆ ಇಷ್ಟು ರಕ್ಷಣೆ ಬಿಜೆಪಿ ಕೊಡ್ತಿದೆ. ಆ ಲೀಸ್ಟ್ ನಲ್ಲಿ ಬೇರೆ ಹಿಂದೂಗಳು ಇದ್ದಾರೆ ಅಲ್ಲವಾ? ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ಕಿಡಿ ಕಾಡಿದರು‌

ಹಿಂದೂಗಳನ್ನ ಸರ್ಕಾರ ಟಾರ್ಗೆಟ್ ಮಾಡಿದೆ ಎಂಬ ಬಿಜೆಪಿ ಆರೋಪ ವಿಚಾರದ ಬಗ್ಗೆ ನಗರದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ನಮ್ಮ ಸರ್ಕಾರವನ್ನ ಜನ ಆರಿಸಿದ್ದಾರೆ. ನಮ್ಮನ್ನ ಆಯ್ಕೆ ಮಾಡಿರೋ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗ್ತೀವಿ.ಹೇಳೋದಕ್ಕೂ ಇತಿ ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗೋದಕ್ಕೆ ಪ್ರಯತ್ನ ಮಾಡ್ತೀವಿ‌ ಎಂದರು.

ಬಿಜೆಪಿ ನಾಯಕರಿಂದ ಕರ ಸೇವಕ ಬಂಧನ ಮಾಡಿ ಅಭಿಯಾನ ವಿಚಾರದ ಕುರಿತು ಮಾತನಾಡಿದ
ಗೃಹ ಸಚಿವ ಪರಮೇಶ್ವರ್, ನಾನು ಮತ್ತು ಸಿಎಂ ಪದೇ ಪದೇ ಹೇಳ್ತಿದ್ದೇವೆ. ರಾಜಕೀಯಕ್ಕೆ‌ ಇದನ್ನ ಬಳಕೆ ಮಾಡೋ ಅವಶ್ಯಕತೆ ಇಲ್ಲ ಅಂತ. ನಾವು ಕಾನೂನು ಬಿಟ್ಟು ಏನು ಮಾಡಿಲ್ಲ. ಕೋರ್ಟ್ ನೋಟೀಸ್, ಸಮನ್ಸ್ ಹಿನ್ನಲೆ ಯಲ್ಲಿ ಕ್ರಮ ತೆಗೆದುಕೊಳ್ತಿದ್ದೇವೆ. ಕಾನೂನು ಬಿಟ್ಟು ಮಾಡಿದ್ರೆ ತಪ್ಪಾಗಿದೆ ಅಂತ ನಾವು ಒಪ್ಪಿಕೊಳ್ಳಬಹುದು.
ನಾವು ಕಾನೂನು ಬಿಟ್ಟು ಏನು ಮಾಡಿಲ್ಲ. ಕಾನೂನು ಪ್ರಕಾರವೇ ಎಲ್ಲಾ ಮಾಡಿದ್ದೇವೆ‌. ಕಾನೂನಿನ ಪ್ರಕಾರ ‌ಮಾಡಿದ್ರು ಬಿಜೆಪಿ ಅವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ಶ್ರೀಕಾಂತ್ ಪೂಜಾರಿ ಬಂಧನ ಕಾನೂನು ಪ್ರಕಾರವೇ ಆಗಿದೆ. ಬಿಜೆಪಿ ಅವರು FIR ಹಾಕಿಲ್ಲ ಅಂತಾರೆ ಅವರು ಏನು ಬೇಕಾದ್ರು ಹೇಳಲಿ. ಹುಬ್ಬಳ್ಳಿ ಪೊಲೀಸನ್ನ ಅಮಾನತು ಮಾಡೊಲ್ಲ. ಈಗಾಗಲೇ ‌ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಪೊಲೀಸ್ ಕಾನೂನು ಪ್ರಕಾರ ಕೆಲಸ ಮಾಡಬಾರದಾ? ಹುಬ್ಬಳ್ಳಿ ಪೊಲೀಸ್ ಕಾನೂನು ಪ್ರಕಾರವೇ ಕೆಲಸ ಮಾಡಿದ್ದಾನೆ.ಕಾನೂನು ಪಾಲನೆ ಮಾಡಿರೋ ಪೊಲೀಸನ್ನ ಅಮಾನತು ಮಾಡಬೇಕು ಅಂದರೆ ಹೇಗೆ…? ಎಂದರು. ಜನವರಿ 9 ಕ್ಕೆ ಬಿಜೆಪಿ ಹೋರಾಟ ಮಾಡುವ ವಿಚಾರದ ಬಗ್ಗೆ ಕುಟುಕಿದ ಅವರು, ಬಿಜೆಪಿ ಅವರು ಹೋರಾಟ ಮಾಡಲಿ‌ ಬಹಳ‌ ಸಂತೋಷ ಎಂದು ವ್ಯಂಗ್ಯ ಮಾಡಿದರು.

ಬಾಬಾ ಬುಡನ್ ಗಿರಿ ಕೇಸ್ ರೀ ಓಪನ್ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಕೇಸ್ ರೀ ಓಪನ್ ಮಾಡಿಲ್ಲ. ಪೊಲೀಸ್ ಠಾಣೆಯಲ್ಲಿ ಇರೋ ಕೇಸನ್ನ ಅಧಿಕಾರಿ ಕ್ರಮ ತೆಗೆದುಕೊಳ್ಳೋಕೆ ಹೋದ್ರೆ ರೀ ಓಪನ್ ಮಾಡಿದ್ದೀರಾ ಅಂದರೆ ಹೇಗೆ…? ಕೋರ್ಟ್ ಸೂಚನೆ ಕೊಟ್ಟಿದ್ರೆ ನಾವು ಕೇಳಬಾರದಾ? ಬಿಜೆಪಿ ಅವರಿಗೆ ಕೋರ್ಟ್ ಗೂ ಬೆಲೆ ಇಲ್ಲ, ಕಾನೂನಿಗೂ ಬೆಲೆ ಇಲ್ಲ.
16 ಕೇಸ್ ಇರೋ ವ್ಯಕ್ತಿಯ ವಿಷಯಕ್ಕೆ ಇಷ್ಟು ದೊಡ್ಡದು ಮಾಡಿ ಇಡೀ ದೇಶ ದಲ್ಲಿ ದೊಡ್ಡದು ಮಾಡೋಕೆ ಹೊರಟಿದ್ದೀರಾ.! ಎಂದು ಪ್ರಶ್ನಿಸಿದರು.

More News